वड्डेबैल श्री : महालक्ष्मी मंदिर जिर्णोद्धार निमित्त चौकट पूजन व माहेरवासीयांचा सत्कार समारंभाचे आयोजन.
खानापूर ; वड्डेबैल (ता. खानापूर) येथील श्री महालक्ष्मी मंदिराच्या जिर्णोद्धार कार्यानिमित्त चौकट पूजन व माहेरवासीयांचा सत्कार सन्मान समारंभ बुधवार, दि. 04 फेब्रुवारी 2026 रोजी सकाळी 10.00 वाजता आयोजित करण्यात आला आहे. या कार्यक्रमाचे अध्यक्ष म्हणून के. पी. पाटील (कर्नाटक राज्य शिवसेना उपाध्यक्ष) उपस्थित राहणार आहेत. चौकट पूजन कार्यक्रम श्री. श्री. श्री. चन्नबसव देवरु, रुद्र स्वामीमठ (बिळकी-आवरोळी) यांच्या हस्ते संपन्न होणार आहे.
कार्यक्रमाचे उद्घाटन कर्नाटक राज्याच्या महिला व बालकल्याण विकास मंत्री श्रीमती लक्ष्मी हेब्बाळकर यांच्या हस्ते होणार असून, यावेळी श्री. चन्नराज हट्टीहोळी (एम.एल.सी.), श्री. विठ्ठल हलगेकर (आमदार, खानापूर), श्री. प्रमोद कोचेरी (भाजपा जिल्हा उपाध्यक्ष), श्री. सुरेश जाधव (काँग्रेस नेते) आणि श्री. लक्ष्मण वेंकट पाटील (फुलाचे व्यापारी) हे मान्यवर उपस्थित राहणार आहेत.
दीप प्रज्वलन कार्यक्रमात श्री. धनश्री करणसिंग सरदेसाई (सेक्रेटरी, भाजपा), श्रीमती हेमलता कदम (शिक्षिका, बेळगाव), श्री. सदानंद पाटील (एम.डी., लैला शुगर, खानापूर), श्री. नारायण कारवेकर (माजी तालुका पंचायत सदस्य), श्री. ए. डी. नदाफ (वकील, बेळगाव), श्री. गोपाळ मोरारी पाटील (एम.ई.एस. नेते), श्री. लक्ष्मण कासरलेकर (संस्थापक अध्यक्ष, वनदेवी), श्री. ईश्वर घाडी (वकील व ब्लॉक काँग्रेस अध्यक्ष), श्री. बाबुराव देसाई (भाजपा नेते), श्री. मुरलीधर पाटील (एम.ई.एस. कार्याध्यक्ष, खानापूर) व श्री. बाळाराम सेलार (अर्बन को-ऑप. सोसायटी चेअरमन, खानापूर) सहभागी होणार आहेत.
या धार्मिक व सामाजिक कार्यक्रमासाठी ग्रामस्थ, भाविक भक्तगण व माहेरवासी बंधू-भगिनींनी मोठ्या संख्येने उपस्थित राहण्याचे आवाहन मंदिर जिर्णोद्धार समिती व ग्रामस्थांच्या वतीने करण्यात आले आहे.
ವಡ್ಡೆಬೈಲ್ : ಶ್ರೀ ಮಹಾಲಕ್ಷ್ಮೀ ದೇವಾಲಯ ಜೀರ್ಣೋದ್ಧಾರ ನಿಮಿತ್ತ ಚೌಕಟ್ಟು ಪೂಜೆ ಹಾಗೂ ತವರು ವಾಸಿಗಳ ಸತ್ಕಾರ ಸಮಾರಂಭ ಆಯೋಜನೆ.
ಖಾನಾಪುರ : ವಡ್ಡೆಬೈಲ್ (ತಾ. ಖಾನಾಪುರ) ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಾಲಯದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಚೌಕಟ್ಟು ಪೂಜೆ ಹಾಗೂ ತವರು ವಾಸಿಗಳ ಸತ್ಕಾರ–ಸನ್ಮಾನ ಸಮಾರಂಭ ಬುಧವಾರ, ದಿನಾಂಕ 04 ಫೆಬ್ರವರಿ 2026 ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಕೆ. ಪಿ. ಪಾಟೀಲ (ಕರ್ನಾಟಕ ರಾಜ್ಯ ಶಿವಸೇನೆ ಉಪಾಧ್ಯಕ್ಷ) ಉಪಸ್ಥಿತರಿರುತ್ತಾರೆ. ಚೌಕಟ್ಟು ಪೂಜೆ ಕಾರ್ಯಕ್ರಮವನ್ನು ಶ್ರೀ. ಶ್ರೀ. ಶ್ರೀ. ಚನ್ನಬಸವ ದೇವರು, ರುದ್ರ ಸ್ವಾಮಿಮಠ (ಬಿಳಕಿ–ಆವರೋಳಿ) ಅವರ ಹಸ್ತದಿಂದ ನೆರವೇರಿಸಲಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆ ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹಸ್ತದಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ. ಚನ್ನರಾಜ ಹಟ್ಟಿಹೋಳಿ (ಎಂ.ಎಲ್.ಸಿ.), ಶ್ರೀ. ವಿಠ್ಠಲ ಹಾಲಗೇಕರ್ ಖಾನಾಪುರ ಶಾಸಕರು, ಶ್ರೀ. ಪ್ರಮೋದ್ ಕೋಚೇರಿ (ಬಿಜೆಪಿ ಜಿಲ್ಲಾ ಉಪಾಧ್ಯಕ್ಷ), ಶ್ರೀ. ಸುರೇಶ್ ಜಾಧವ (ಕಾಂಗ್ರೆಸ್ ನಾಯಕ) ಹಾಗೂ ಶ್ರೀ. ಲಕ್ಷ್ಮಣ ವೆಂಕಟ್ ಪಾಟೀಲ (ಹೂ ವ್ಯಾಪಾರಿ) ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ.
ದೀಪ ಪ್ರಜ್ವಲನೆ ಕಾರ್ಯಕ್ರಮದಲ್ಲಿ ಶ್ರೀ. ಧನಶ್ರೀ ಕರಣಸಿಂಗ್ ಸರದೇಶಾಯಿ (ಬಿಜೆಪಿ ಕಾರ್ಯದರ್ಶಿ), ಶ್ರೀಮತಿ ಹೆಮಲತಾ ಕದಮ್ (ಶಿಕ್ಷಕಿ, ಬೆಳಗಾವಿ), ಶ್ರೀ. ಸದಾನಂದ ಪಾಟೀಲ (ಎಂ.ಡಿ., ಲೈಲಾ ಶುಗರ್, ಖಾನಾಪುರ), ಶ್ರೀ. ನಾರಾಯಣ ಕಾರ್ವೇಕರ್ (ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ), ಶ್ರೀ. ಎ. ಡಿ. ನದಾಫ್ (ವಕೀಲ, ಬೆಳಗಾವಿ), ಶ್ರೀ. ಗೋಪಾಳ್ ಮೊರಾರಿ ಪಾಟೀಲ (ಎಂ.ಇ.ಎಸ್. ನಾಯಕ), ಶ್ರೀ. ಲಕ್ಷ್ಮಣ ಕಸರಲೆಕರ್ (ಸಂಸ್ಥಾಪಕ ಅಧ್ಯಕ್ಷ, ವನದೇವಿ), ಶ್ರೀ. ಈಶ್ವರ ಘಾಡಿ (ವಕೀಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ), ಶ್ರೀ. ಬಾಬುರಾವ್ ದೇಸಾಯಿ (ಬಿಜೆಪಿ ನಾಯಕ), ಶ್ರೀ. ಮುರಳಿಧರ್ ಪಾಟೀಲ (ಎಂ.ಇ.ಎಸ್. ಕಾರ್ಯಾಧ್ಯಕ್ಷ, ಖಾನಾಪುರ) ಹಾಗೂ ಶ್ರೀ. ಅಮೃತ ಶೇಲಾರ್ (ಅರ್ಬನ್ ಕೋ-ಆಪ್. ಸೊಸೈಟಿ ಚೇರ್ಮನ್, ಖಾನಾಪುರ) ಭಾಗವಹಿಸಲಿದ್ದಾರೆ.
ಈ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಭಕ್ತರು ಹಾಗೂ ತವರುವಾಸಿ ಸಹೋದರ–ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರ ಪರವಾಗಿ ಮನವಿ ಮಾಡಲಾಗಿದೆ.



