खानापूर–लोंढा महामार्गावर वाटरे नजीक भीषण अपघात; दुचाकीस्वाराचा मृत्यू, एक गंभीर जखमी.
खानापूर : खानापूर–लोंढा राष्ट्रीय महामार्गावर वाटरे गावानजीक रविवार, दि. 25 जानेवारी 2026 रोजी सायंकाळी सुमारे चार वाजण्याच्या सुमारास कार व दुचाकी यांच्यात भीषण अपघात झाला. या अपघातात दुचाकीस्वार युवकाचा मृत्यू झाला असून त्याचा मित्र गंभीर जखमी झाला आहे.
याबाबत मिळालेल्या सविस्तर माहितीनुसार, बेळगावहून गोव्याकडे जात असलेल्या एका कारचा समोरील बाजूचा टायर अचानक फुटला, त्यामुळे कारवरील चालकाचे नियंत्रण सुटले. याच वेळी रामनगरहून आपल्या मूळ गावी गर्लगुंजी (ता. खानापूर) येथे येत असलेल्या दुचाकीला सदर कारने जोराची धडक दिली.
या अपघातात गर्लगुंजी येथील युवक गौरेश सुरेश कुंभार (वय 34 वर्षे) याच्या पायाला गंभीर दुखापत झाली असून पायाची रक्तवाहिनी कट झाली. तसेच दुचाकीवरील त्याचा मित्र शिवाजी प्रकाश लोहार याच्या हात व पायाला गंभीर मार बसला.
अपघातानंतर गंभीर जखमी असलेल्या दोघांनाही रुग्णवाहिकेतून येळ्ळूर येथील केएलई रुग्णालयात नेण्यात आले. प्राथमिक तपासणीनंतर त्यांची प्रकृती गंभीर असल्याने बेळगाव येथील केएलई रुग्णालयात पुढील उपचारासाठी हलवण्यात आले. मात्र, रुग्णवाहिका अपघात स्थळी पोहोचण्यास उशीर झाला तसेच बेळगावपर्यंत नेण्यासही बराच वेळ लागल्याने अतिरक्तस्रावामुळे गौरेश सुरेश कुंभार यांचा वाटेतच मृत्यू झाल्याचे डॉक्टरांनी सांगितले.
मृत्यू झालेल्या गौरेश कुंभार यांच्या पश्चात आई-वडील, पत्नी व दीड वर्षांचा मुलगा असा परिवार असून त्यांच्या आकस्मिक निधनाने गर्लगुंजी गावासह संपूर्ण परिसरात हळहळ व्यक्त करण्यात येत आहे.
दरम्यान, या अपघातात गंभीर जखमी झालेल्या शिवाजी प्रकाश लोहार याच्या पायाला गंभीर मार लागला असून हाताला फ्रॅक्चर झाले आहे. सध्या त्याची प्रकृती स्थिर असून धोक्याबाहेर असल्याचे समजते.
या प्रकरणाची नोंद खानापूर पोलीस स्थानकात करण्यात आली असून खानापूर पोलीस पुढील तपास करीत आहेत.
ಖಾನಾಪುರ–ಲೊಂಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಟರೆ ಸಮೀಪ ಭೀಕರ ಅಪಘಾತ; ದ್ವಿಚಕ್ರ ವಾಹನ ಸವಾರನ ಮೃತ್ಯು, ಮತ್ತೊಬ್ಬನಿಗೆ ಗಂಭೀರ ಗಾಯ..
ಖಾನಾಪುರ : ಖಾನಾಪುರ–ಲೊಂಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಟರೆ ಗ್ರಾಮದ ಸಮೀಪ ಭಾನುವಾರ, ದಿನಾಂಕ 25 ಜನವರಿ 2026 ರಂದು ಸಂಜೆ ಸುಮಾರು ನಾಲ್ಕು ಗಂಟೆಗಳ ವೇಳೆಗೆ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ಮೃತ್ಯು ಸಂಭವಿಸಿದ್ದು, ಅವನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಲಭಿಸಿದ ವಿವರಗಳ ಪ್ರಕಾರ, ಬೆಳಗಾವಿಯಿಂದ ಗೋವಾಕ್ಕೆ ತೆರಳುತ್ತಿದ್ದ ಕಾರಿನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದೆ. ಇದೇ ವೇಳೆ ರಾಮನಗರದಿಂದ ತನ್ನ ಮೂಲ ಗ್ರಾಮ ಗರ್ಲಗುಂಜಿ (ತಾ. ಖಾನಾಪುರ) ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಆ ಕಾರು ರಭಸದಿಂದ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಗರ್ಲಗುಂಜಿ ಗ್ರಾಮದ ಯುವಕ ಗೌರೇಶ್ ಸುರೇಶ್ ಕುಂಭಾರ (ವಯಸ್ಸು 34 ವರ್ಷ) ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಕಾಲಿನ ರಕ್ತನಾಳ ತುಂಡಾಗಿದೆ . ಜೊತೆಗೆ ದ್ವಿಚಕ್ರ ವಾಹನದಲ್ಲಿದ್ದ ಅವರ ಸ್ನೇಹಿತ ಶಿವಾಜಿ ಪ್ರಕಾಶ ಲೋಹಾರ ಅವರ ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಯಳ್ಳೂರುನಲ್ಲಿರುವ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ತಪಾಸಣೆಯ ನಂತರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಮುಂದಿನ ಚಿಕಿತ್ಸೆಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಆಂಬ್ಯುಲೆನ್ಸ್ ಅಪಘಾತ ಸ್ಥಳಕ್ಕೆ ತಲುಪಲು ವಿಳಂಬವಾಗಿದ್ದು, ಬೆಳಗಾವಿಗೆ ಕರೆದೊಯ್ಯುವಲ್ಲಿಯೂ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಅತಿರಕ್ತಸ್ರಾವದಿಂದ ಗೌರೇಶ್ ಸುರೇಶ್ ಕುಂಭಾರ ಅವರು ಮಾರ್ಗಮಧ್ಯೆಯಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತರಾದ ಗೌರೇಶ್ ಕುಂಭಾರ ಅವರ ಹಿಂದೆ ತಂದೆ ತಾಯಿ–, ಪತ್ನಿ ಹಾಗೂ ಒಂದುೂವರೆ ವರ್ಷದ ಮಗ ಇದ್ದು, ಅವರ ಆಕಸ್ಮಿಕ ನಿಧನದಿಂದ ಗರ್ಲಗುಂಜಿ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶೋಕ ವ್ಯಕ್ತವಾಗಿದೆ.
ಇದೇ ವೇಳೆ, ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶಿವಾಜಿ ಪ್ರಕಾಶ ಲೋಹಾರ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಕೈಗೆ ಫ್ರ್ಯಾಕ್ಚರ್ ಆಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಹೊರಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾನಾಪುರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



