खानापूर शहरात गांजाची विक्री व सेवन करणाऱ्यांवर पोलिसांची कारवाई; तिघेजण ताब्यात.
खानापूर : खानापूर शहरात गांजाची विक्री व सेवन करणाऱ्यांविरोधात खानापूर पोलिसांनी प्रभावी कारवाई करत गांजासह एकाला अटक केली असून, गांजाचे सेवन करणाऱ्या आणखी दोघांना ताब्यात घेण्यात आले आहे.
दि. 10 जानेवारी 2026 रोजी रात्री 8.30 वाजण्याच्या सुमारास, खानापूर पोलिस स्टेशनच्या हद्दीतील रेल्वे स्टेशनकडे जाणाऱ्या सार्वजनिक रस्त्याच्या कडेला आरोपी प्रान्सिस पास्तु सोज (वय 66, रा. मनहापूर, ता. खानापूर) हा कायद्याविरुद्ध स्वतःच्या आर्थिक फायद्यासाठी गांजाची विक्री करत असल्याची माहिती पोलिसांना मिळाली. त्यानुसार पोलिसांनी सापळा रचून कारवाई केली असता, त्याच्याकडून सुमारे 3 हजार रुपये किमतीचा 135 ग्रॅम वजनाचा सुकलेला, बिया असलेला गांजा जप्त करण्यात आला.
या प्रकरणी आरोपी प्रान्सिस सोज याच्याविरोधात खानापूर पोलिस स्टेशन गुन्हा क्रमांक 12/2026, एन.डी.पी.एस. कायदा 1985 कलम 20 (ब) अंतर्गत गुन्हा दाखल करण्यात आला आहे.
तपासादरम्यान आरोपी प्रान्सिस सोज याने दिलेल्या माहितीनुसार, जप्त केलेला गांजा त्याचा मुलगा एसुनंद प्रान्सिस सोज याने विक्रीसाठी आणून दिल्याचे तसेच काही व्यक्तींना गांजा विक्री केल्याचे त्याने कबूल केले.
या माहितीच्या आधारे, दि. 23 जानेवारी 2026 रोजी गांजाचे सेवन केल्याच्या आरोपाखाली, रेहमान कुतुबुद्दीन इटगी (वय 29, रा. शिवाजीनगर, ता. खानापूर) व रोहित दत्ताराम रगडे (वय 21, रा. केंचापूर गल्ली, खानापूर) या दोघांना पोलिसांनी ताब्यात घेऊन त्यांच्यावर कायदेशीर कारवाई केली आहे.
दरम्यान, गांजा पुरवठा करणारा आरोपी एसुनंद सोज तसेच गांजाची खरेदी करणारे इतर आरोपी यांचा शोध घेण्यासाठी पोलिसांनी जाळे पसरले असून, लवकरच त्यांनाही अटक करून कठोर कारवाई केली जाणार असल्याची माहिती पोलिसांनी दिली आहे.
ಖಾನಾಪುರ ನಗರದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡಿದವರ ವಿರುದ್ಧ ಪೊಲೀಸರ ಕಠಿಣ ಕ್ರಮ; ಮೂವರು ವಶಕ್ಕೆ.
ಖಾನಾಪುರ : ಖಾನಾಪುರ ನಗರದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಮಿಡು ನಡುತ್ತಿದ್ದವರ ವಿರುದ್ಧ ಖಾನಾಪುರ ಪೊಲೀಸರು ಕ್ರಮ ಕೈಗೊಂಡಿದ್ದು, ಗಾಂಜಾ ಸಹಿತ ಒಬ್ಬನನ್ನು ಬಂಧಿಸಿ, ಗಾಂಜಾ ಸೇವನೆ ಮಾಡಿದ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ದಿ. 10 ಜನವರಿ 2026 ರಂದು ರಾತ್ರಿ 8.30 ಗಂಟೆಗಳ ಸುಮಾರಿಗೆ, ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ, ಆರೋಪಿಯಾದ ಪ್ರಾನ್ಸಿಸ್ ಪಾಸ್ತು ಸೊಜ (ವಯಸ್ಸು 66, ಸಾ: ಮನಹಾಪುರ, ತಾ. ಖಾನಾಪುರ) ಎಂಬವರು ಕಾನೂನುಬಾಹಿರವಾಗಿ ತಮ್ಮ ಆರ್ಥಿಕ ಲಾಭಕ್ಕಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು.
ಆ ಮಾಹಿತಿಯ ಮೇರೆಗೆ ಪೊಲೀಸರು ಬಲೆ ಬೀಸಿ ಕಾರ್ಯಾಚರಣೆ ನಡೆಸಿ ಆತನಿಂದ ಸುಮಾರು 3 ಸಾವಿರ ರೂ. ಮೌಲ್ಯದ, 135 ಗ್ರಾಂ ತೂಕದ, ಒಣಗಿದ ಬೀಜಗಳಿರುವ ಗಾಂಜಾ ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದಲ್ಲಿ ಆರೋಪಿಯಾದ ಪ್ರಾನ್ಸಿಸ್ ಸೊಜ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 12/2026, ಎನ್.ಡಿ.ಪಿ.ಎಸ್. ಕಾಯ್ದೆ 1985 ಕಲಂ 20 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ವೇಳೆ ಆರೋಪಿಯಾದ ಪ್ರಾನ್ಸಿಸ್ ಸೊಜ ನೀಡಿದ ಮಾಹಿತಿಯ ಪ್ರಕಾರ, ಜಪ್ತಿಗೊಂಡ ಗಾಂಜಾವನ್ನು ಆತನ ಮಗ ಎಸುನಂದ ಪ್ರಾನ್ಸಿಸ್ ಸೊಜ ಮಾರಾಟಕ್ಕಾಗಿ ತಂದಿದ್ದು, ಕೆಲವರಿಗೆ ಗಾಂಜಾ ಮಾರಾಟ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ.
ಈ ಮಾಹಿತಿಯ ಆಧಾರದ ಮೇಲೆ, ದಿ. 23 ಜನವರಿ 2026 ರಂದು ಗಾಂಜಾ ಸೇವನೆ ಮಾಡಿದ ಆರೋಪದಡಿ, ರೆಹಮಾನ್ ಕುತ್ಬುದ್ದೀನ್ ಇಟಗಿ (ವಯಸ್ಸು 29, ಸಾ: ಶಿವಾಜಿನಗರ, ತಾ. ಖಾನಾಪುರ) ಹಾಗೂ ರೋಹಿತ್ ದತ್ತಾರಾಮ ರಗಡೆ (ವಯಸ್ಸು 21, ಸಾ: ಕೆಂಚಾಪುರ ಗಲ್ಲಿ, ಖಾನಾಪುರ) ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದರ ನಡುವೆ, ಗಾಂಜಾ ಪೂರೈಕೆ ಮಾಡಿದ ಆರೋಪಿಯಾದ ಎಸುನಂದ ಸೊಜ ಹಾಗೂ ಗಾಂಜಾ ಖರೀದಿ ಮಾಡಿದ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದು, ಶೀಘ್ರದಲ್ಲೇ ಅವರನ್ನು ಕೂಡ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



