नंदगड येथे उद्या क्रांतीवीर संगोळी रायण्णा वीरभूमीचे लोकार्पण; डॉ. अंजलीताई निंबाळकर यांची कार्यक्रमस्थळी पाहणी.
खानापूर : उद्या सोमवार, दि. 19 जानेवारी रोजी खानापूर तालुक्यातील नंदगड येथे क्रांतीवीर संगोळी रायण्णा वीरभूमीचे भव्य लोकार्पण होणार असून, या कार्यक्रमासाठी कर्नाटक राज्याचे माननीय मुख्यमंत्री श्री. सिद्धरामय्या, उपमुख्यमंत्री व केपीसीसी अध्यक्ष श्री. डी. के. शिवकुमार, बेळगाव जिल्ह्याचे पालकमंत्री श्री. सतीश जारकीहोळी, मंत्री श्री. सुरेश बैराती तसेच मंत्री श्री. तंगडगी यांची प्रमुख उपस्थिती लाभणार आहेत.
या पार्श्वभूमीवर काँग्रेसच्या नेत्या व खानापूरच्या माजी आमदार डॉ. अंजलीताई निंबाळकर यांनी आज नंदगड येथे आयोजित वीरभूमी लोकार्पण कार्यक्रमाच्या ठिकाणाची प्रत्यक्ष पाहणी करून सविस्तर आढावा घेतला. या पाहणीदरम्यान आयुक्त शालिनी, खानापूर ब्लॉक काँग्रेस कमिटीचे पदाधिकारी एडव्होकेट ईश्वर घाडी, महांतेश राऊत, सुरेश जाधव, महादेव कोळी, सावीत्री मादार, नंदगड पोलीस निरीक्षक (PI) तसेच संबंधित विभागांचे अधिकारी उपस्थित होते.
डॉ. अंजलीताई निंबाळकर यांनी कार्यक्रमाच्या अनुषंगाने हेलिपॅड, क्रांतीवीर संगोळी रायण्णा वस्तुसंग्रहालय, समाधीस्थळ, तलाव परिसर आदी ठिकाणांना भेट देत तेथे करण्यात आलेल्या सर्व तयारी, सुरक्षा व्यवस्था, स्वच्छता, वाहतूक व इतर सोयी-सुविधांची सखोल तपासणी केली. मान्यवरांच्या आगमनाच्या पार्श्वभूमीवर कोणतीही अडचण निर्माण होऊ नये, यासाठी प्रशासनाने दक्ष राहावे, तसेच उर्वरित कामे वेळेत पूर्ण करण्याच्या सूचना त्यांनी यावेळी दिल्या.
क्रांतीवीर संगोळी रायण्णा यांच्या स्मृती जतन करणारी ही वीरभूमी जनतेसाठी प्रेरणास्थान ठरणार असून, लोकार्पण सोहळा यशस्वी करण्यासाठी सर्व यंत्रणांनी समन्वयाने काम करावे, असे आवाहनही डॉ. अंजलीताई निंबाळकर यांनी यावेळी केले.
ನಂದಗಡದಲ್ಲಿ ನಾಳೆ ಕ್ರಾಂತಿವೀರ ಸಂಗೋಳಿ ರಾಯಣ್ಣನ ವೀರಭೂಮಿಯ ಲೋಕಾರ್ಪಣೆ; ಮಾಜಿ ಶಾಸಕಿ ಡಾ. ಅಂಜಲಿತಾಯಿ ನಿಂಬಾಳಕರರಿಂದ ಕಾರ್ಯಕ್ರಮ ಸ್ಥಳದ ಪರಿಶೀಲನೆ..
ಖಾನಾಪುರ : ನಾಳೆ, ಸೋಮವಾರ ದಿನಾಂಕ 19 ಜನವರಿ 2026 ರಂದು, ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಕ್ರಾಂತಿವೀರ ಸಂಗೋಳಿ ರಾಯಣ್ಣ ವೀರಭೂಮಿಯ ಭವ್ಯ ಲೋಕಾರ್ಪಣೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ ಡಿ.ಕೆ. ಶಿವಕುಮಾರ್, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸತೀಶ್ ಜಾರಕಿಹೋಳಿ, ಸಚಿವ ಶ್ರೀ ಸುರೇಶ್ ಬೈರಾತಿ, ಹಾಗು ಸಚಿವ ಶ್ರೀ ತಂಗಡಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಖಾನಾಪುರ ತಾಲೂಕಿನ ಮಾಜಿ ಶಾಸಕಿ ಡಾ. ಅಂಜಲಿತಾಯಿ ನಿಂಬಾಳಕರ ಅವರು ಇಂದು ನಂದಗಡದಲ್ಲಿ ಆಯೋಜಿಸಲಾಗಿರುವ ವೀರಭೂಮಿ ಲೋಕಾರ್ಪಣಾ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸವಿಸ್ತಾರ ಅವಲೋಕನ ಮಾಡಿದರು. ಈ ಪರಿಶೀಲನೆ ಸಂದರ್ಭದಲ್ಲಿ ಆಯುಕ್ತೆ ಶಾಲಿನಿ ರಜನೀಶ್, ಖಾನಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ವಕೀಲ ಈಶ್ವರ ಘಾಡಿ, ಮಂಟೇಶ್ ರೌತ್, ಸುರೇಶ, ಜಾಧವ, ಮಹದೇವ್ ಕೋಳಿ, ಸಾವಿತ್ರಿ ಮದಾರ, ನಂದಗಡ ಪೊಲೀಸ್ ನಿರೀಕ್ಷಕರು (PI) ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಡಾ. ಅಂಜಲಿತಾಯಿ ನಿಂಬಾಳಕರ ಅವರು ಕಾರ್ಯಕ್ರಮದ ಅಂಗವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್, ಕ್ರಾಂತಿವೀರ ಸಂಗೋಳಿ ರಾಯಣ್ಣ ವಸ್ತುಸಂಗ್ರಲಯ, ಸಮಾಧಿ ಸ್ಥಳ, ಸರೋವರ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿ ಕೈಗೊಳ್ಳಲಾದ ಸಿದ್ಧತೆಗಳು, ಭದ್ರತಾ ವ್ಯವಸ್ಥೆ, ಸ್ವಚ್ಛತೆ, ಸಂಚಾರ ವ್ಯವಸ್ಥೆ ಹಾಗೂ ಇತರೆ ಮೂಲಸೌಕರ್ಯಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಉಪಯುಕ್ತ ಸಲಹೆ ನೀಡಿ. ಗಣ್ಯರ ಆಗಮನದ ಸಂದರ್ಭದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಆಡಳಿತವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಉಳಿದಿರುವ ಎಲ್ಲಾ ಕೆಲಸಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕೆಂದು ಅವರು ಸೂಚನೆ ನೀಡಿದರು.
ಕ್ರಾಂತಿವೀರ ಸಂಗೋಳಿ ರಾಯಣ್ಣ ಅವರ ಸ್ಮೃತಿಯನ್ನು ಸಂರಕ್ಷಿಸುವ ಈ ವೀರಭೂಮಿ ಸಾರ್ವಜನಿಕರಿಗೆ ಪ್ರೇರಣೆಯ ಕೇಂದ್ರವಾಗಲಿದೆ ಎಂದು ಹೇಳಿದ ಡಾ. ಅಂಜಲಿತಾಯಿ ನಿಂಬಾಳಕರ, ಲೋಕಾರ್ಪಣಾ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಈ ವೇಳೆ ಮನವಿ ಮಾಡಿದರು.


