पर्व 17 व्याख्यानमाला : ज्ञानवर्धिनी प्रतिष्ठान खानापूरतर्फे दहावी विद्यार्थ्यांसाठी उपक्रमांची सुरुवात रविवार पासून.
खानापूर : ज्ञानवर्धिनी प्रतिष्ठान, खानापूर यांच्या वतीने सन 2025-2026 या शैक्षणिक वर्षासाठी इयत्ता दहावीच्या विद्यार्थ्यांसाठी आयोजित केलेल्या पर्व 17 व्याख्यानमाला उपक्रमाची सुरुवात रविवार, 7 डिसेंबर 2025 रोजी होत आहे. पुढील व्याख्यानमाला 14 डिसेंबर आणि 21 डिसेंबर रोजी देखील घेण्यात येणार आहेत.
या उपक्रमांतर्गत रविवारी 7 डिसेंबर रोजी नंदगड, हलशी, चापगाव, इदलहोंड आणि जांबोटी या पाच मराठी केंद्रांवर तसेच नंदगड, देवलत्ती आणि गंदीगवाड या तीन कन्नड केंद्रांवर व्याख्यानमालांचे आयोजन करण्यात आले आहे.
विद्यार्थ्यांच्या गुणात्मक व सर्वांगीण विकासासाठी ही व्याख्यानमाला उपयुक्त ठरणार असून, सर्व मुख्याध्यापक, शिक्षक, शिक्षकेतर कर्मचारी आणि शिक्षणप्रेमींनी उत्स्फूर्त सहभाग नोंदवावा, असे आवाहन ज्ञानवर्धिनी प्रतिष्ठानतर्फे करण्यात आले आहे.
ಪರ್ವ 17 ಉಪನ್ಯಾಸ ಮಾಲೆ: ಜ್ಞಾನವರ್ಧಿನಿ ಪ್ರತಿಷ್ಠಾನ ಸಂಸ್ಥೆ ಖಾನಾಪುರ ಇವರ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಭಾನುವಾರದಿಂದ ಉಪಕ್ರಮದ ಕಾರ್ಯಾರಂಭ.
ಖಾನಾಪುರ: ಜ್ಞಾನವರ್ಧಿನಿ ಪ್ರತಿಷ್ಠಾನ, ಖಾನಾಪುರ ಇವರ ವತಿಯಿಂದ 2025-2026ನೇ ಶೈಕ್ಷಣಿಕ ವರ್ಷಕ್ಕೆ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪರ್ವ 17 ಉಪನ್ಯಾಸ ಮಾಲಾ ಉಪಕ್ರಮದ ಕಾರ್ಯಾರಂಭ ಇದೆ ಭಾನುವಾರ, ಡಿಸೆಂಬರ್ 7, 2025 ರಿಂದ ಪ್ರಾರಂಭವಾಗಲಿದೆ. ಮುಂದಿನ ಉಪನ್ಯಾಸ ಮಾಲೆಗಳು ಡಿಸೆಂಬರ್ 14 ಮತ್ತು ಡಿಸೆಂಬರ್ 21 ರಂದು ಸಹ ನಡೆಯಲಿವೆ.
ಈ ಕಾರ್ಯಕ್ರಮದ ಅಡಿಯಲ್ಲಿ, ಡಿಸೆಂಬರ್ 7 ರ ಭಾನುವಾರದಂದು ನಂದಗಡ, ಹಲಶಿ, ಚಾಪಗಾಂವ, ಇದಲಹೊಂಡ ಮತ್ತು ಜಾಂಬೋಟಿ ಈ ಐದು ಮರಾಠಿ ಕೇಂದ್ರಗಳಲ್ಲಿ ಹಾಗೂ ನಂದಗಡ, ದೇವಲತ್ತಿ ಮತ್ತು ಗಂಧಿಗವಾಡ ಈ ಮೂರು ಕನ್ನಡ ಕೇಂದ್ರಗಳಲ್ಲಿ ಉಪನ್ಯಾಸ ಮಾಲೆಗಳನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳ ಗುಣಾತ್ಮಕ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಈ ಉಪನ್ಯಾಸ ಮಾಲೆಯು ಸಹಾಯಕವಾಗಲಿದ್ದು, ಎಲ್ಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ಶಿಕ್ಷಣ ಪ್ರೇಮಿಗಳು ಉತ್ಸಾಹದಿಂದ ಭಾಗವಹಿಸಬೇಕು ಎಂದು ಜ್ಞಾನವರ್ಧಿನಿ ಪ್ರತಿಷ್ಠಾನದ ವತಿಯಿಂದ ಮನವಿ ಮಾಡಲಾಗಿದೆ.

