पंच गॅरंटी योजनांमुळे कुटुंबांचा आर्थिक स्तर उंचावला!
नंदगड : पंच गॅरंटी योजनेच्या शिबिराला उत्स्फूर्त प्रतिसाद!
नंदगड ; कर्नाटक सरकारच्या पंच गॅरंटी योजनांचा जनतेच्या आर्थिक उन्नतीसाठी मोठा परिणाम होत असून, या योजनांमुळे सर्वसामान्य कुटुंबांचा आर्थिक स्तर उंचावत असल्याचे प्रतिपादन पंच गॅरंटी योजनेचे जिल्हाध्यक्ष विनय नावलकट्टी यांनी नंदगड (ता. खानापूर) येथे बोलताना केले.
नंदगड, हेब्बाळ व कसबा नंदगड ग्रामपंचायत हद्दीतील जनतेसाठी नंदगड मार्केटिंग सोसायटीच्या सभागृहात पंच गॅरंटी योजना राबवण्याच्या प्रगतीचे परीक्षण करण्यासाठी विशेष कार्यक्रमाचे आयोजन करण्यात आले होते. कार्यक्रमाच्या अध्यक्षस्थानी खानापूर तालुका पंच गॅरंटी योजनेचे अध्यक्ष सुर्यकांत कुलकर्णी होते.
काँग्रेस सरकारच्या पंचगॅरंटी योजनांची जनतेपर्यंत पोहोच..
जिल्हाध्यक्ष विनय नावलकट्टी म्हणाले की,
“काँग्रेसने निवडणुकीत जाहीर केलेल्या गृहलक्ष्मी, गृहज्योती, अन्नभाग्य, शक्ती योजना, युवा निधी अशा पंच गॅरंटी योजना आज जवळपास प्रत्येक घरापर्यंत पोहोचल्या आहेत. काही तांत्रिक कारणामुळे अल्पसंख्य महिलांना लाभ मिळाला नसला, तरी त्यांच्यापर्यंतही लाभ पोहोचवण्यासाठी आम्ही प्रयत्नशील आहोत.”
योजना राबवण्यामागील उद्देश राज्यातील गरिबांचे जीवनमान उंचावणे हा आहे, असेही त्यांनी सांगितले. तसेच, जनतेने काँग्रेस पक्षाचा विश्वास राखावा, असे आवाहनही त्यांनी या वेळी केले.
सुर्यकांत कुलकर्णी : “तालुक्यातील प्रत्येक घरापर्यंत योजना पोहोचवण्याचा प्रयत्न”
खानापूर तालुका पंच गॅरंटी योजनेचे अध्यक्ष सुर्यकांत कुलकर्णी यांनी सांगितले की,
“पालकमंत्री सतीश जारकीहोळी व माजी आमदार अंजली निंबाळकर यांच्या शिफारशीनुसार तालुकास्तरीय समिती स्थापन करण्यात आली असून, या समितीतील सर्व सदस्यांनी प्रामाणिकपणे काम करून योजनांचा लाभ जनतेपर्यंत पोहोचवला आहे.”
ते पुढे म्हणाले—
अन्नभाग्य योजनेअंतर्गत रेशन दुकानांमार्फत तालुक्यात नियमित व सुयोग्य रेशन पुरवठा होत आहे.
शक्ती योजनेंतर्गत महिलांना बसप्रवासाचा लाभ मिळावा यासाठी खानापूर आगारात रोज पाहणी केली जाते.
जंगलबहुल भागातील गावांमध्ये वारंवार वीजखंडित होण्याची समस्या अधिकाऱ्यांच्या निदर्शनास आणून तत्काळ दुरुस्तीसाठी पुढाकार घेतला जातो.
युवा निधीचा मोठ्या प्रमाणात युवकांनी लाभ घेतला असून शिबिरांच्या माध्यमातून त्यांना सतत मार्गदर्शन दिले जात आहे.
मान्यवरांची उपस्थिती..
कार्यक्रमाला पंच गॅरंटी योजनेचे जिल्हा उपाध्यक्ष रुद्रय्या हिरेमठ, खानापूर तालुका पंचायतीचे कार्यकारी अधिकारी रमेश मेत्री, नंदगड ग्रामपंचायत अध्यक्ष यल्लाप्पा गुरव, ब्लॉक काँग्रेस अध्यक्ष महातेश राऊत, कसबा नंदगड ग्रामपंचायत अध्यक्षा नेत्रावती लोहार, मार्केटिंग सोसायटीचे चेअरमन श्रीशैल माटोळी, पंचगॅरंटी योजनेचे पदाधिकारी, ग्रामपंचायतीचे सदस्य व विविध विभागातील अधिकारी मोठ्या संख्येने उपस्थित होते.
या वेळी नंदगड ग्रामपंचायत अध्यक्ष यल्लाप्पा गुरव आणि उपस्थित मान्यवरांनी मार्गदर्शनपर भाषणे केली.
पंच गॅरंटी योजनांमधून महिलांचा लघुउद्योगांकडे कल..
गृहलक्ष्मी योजनेतून अनेक महिलांनी लघुउद्योग सुरू केल्याची माहिती, दीपा बजंत्री, निर्मला देसाई, लक्ष्मी राऊत, प्रार्थना नाईक यांनी आपल्या भाषणातून दिली.
गृहलक्ष्मी योजनेने महिलांना आर्थिक बळ मिळत असून इतर महिलांनीही स्वउद्योगाकडे वळावे, असे आवाहन त्यांनी केले.
कार्यक्रमाचे सुत्रसंचालन व आभार..
प्रास्ताविक : प्रकाश मादार
सुत्रसंचालन : काशिम हट्टीहोळी
आभार प्रदर्शन : बाबू हत्तरवाड.
ಪಂಚ ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳ ಆರ್ಥಿಕ ಮಟ್ಟ ಸುಧಾರಣೆ! ನಂದಗಡದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಶಿಬಿರಕ್ಕೆ ಭಾರಿ ಪ್ರತಿಕ್ರಿಯೆ!
ನಂದಗಡ: ಕರ್ಣಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಗುಣಮಟ್ಟ ಸುಧಾರಣೆಗೆ ಮಹತ್ತರ ಪಾತ್ರವಹಿಸುತ್ತಿದ್ದು, ಈ ಯೋಜನೆಗಳಿಂದ ಸಾಮಾನ್ಯ ಕುಟುಂಬಗಳ ಆರ್ಥಿಕ ಮಟ್ಟ ಕ್ರಮೇಣ ಸುಧಾರಿಸುತೀದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವಿನಯ ನಾವಲಕೊಟ್ಟಿ ಅಭಿಪ್ರಾಯಪಟ್ಟರು. ನಂದಗಡ, ಹೆಬ್ಬಾಳ ಮತ್ತು ಕಸಬಾ ನಂದಗಡ ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ನಂದಗಡ ಮಾರ್ಕೆಟಿಂಗ್ ಸೊಸೈಟಿ ಸಭಾಂಗಣದಲ್ಲಿ ಯೋಜನೆಗಳ ಪ್ರಗತಿ ವಿಮರ್ಶೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಖಾನಾಪುರ ತಾಲ್ಲೂಕ ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸುರ್ಯಕಾಂತ ಕುಲಕರ್ಣಿ ಅಧ್ಯಕ್ಷತೆವಹಿಸಿದ್ದರು.
“ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ – ಪ್ರತಿಯೊಬ್ಬರ ಮನೆಗೆ ತಲುಪುತ್ತಿದೆ”
ಜಿಲ್ಲಾಧ್ಯಕ್ಷ ವಿನಯ ನಾವಲಕೊಟ್ಟಿ ಮಾತನಾಡುತ್ತಾ,
“ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಘೋಷಿಸಿದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವ ನಿಧಿ ಅಂತೆಯೇ ಪಂಚ ಗ್ಯಾರಂಟಿ ಯೋಜನೆಗಳು ಇಂದು ಬಹುತೇಕ ಪ್ರತಿಯೊಬ್ಬರ ಮನೆಗೂ ತಲುಪಿವೆ. ಕೆಲವು ತಾಂತ್ರಿಕ ಕಾರಣಗಳಿಂದ ಕೆಲವು ಮಹಿಳೆಯರಿಗೆ ಮಾತ್ರ ಲಾಭ ಸಿಕ್ಕಿಲ್ಲ; ಅವರಿಗೆ ಸಹ ಸದ್ಯದಲ್ಲೇ ಲಾಭ ತಲುಪಿಸಲು ಸರ್ಕಾರ ಬದ್ಧವಾಗಿದೆ,” ಎಂದು ಹೇಳಿದರು.
ರಾಜ್ಯದ ಬಡಜನರ ಜೀವನ ಮಟ್ಟವನ್ನು ಎತ್ತುವುದು ಈ ಯೋಜನೆಗಳ ಮೂಲ ಉದ್ದೇಶವೆಂದು ಅವರು ತಿಳಿಸಿದರು. ಜನರು ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆಯನ್ನು ಮುಂದುವರಿಸಬೇಕೆಂದು ಕೋರಿದರು.
ಸುರ್ಯಕಾಂತ ಕುಲಕರ್ಣಿ: “ಪ್ರತಿಯೊಬ್ಬರ ಮನೆಗೂ ಯೋಜನೆಗಳ ಲಾಭ ತಲುಪಿಸುವುದು ನಮ್ಮ ಗುರಿ”
ತಾಲೂಕು ಅಧ್ಯಕ್ಷ ಸುರ್ಯಕಾಂತ ಕುಲಕರ್ಣಿ ಮಾತನಾಡಿ—
“ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಅಂಜಲಿ ನಿಂಬಾಳ್ಕರ್ ಅವರ ಸೂಚನೆಯ ಮೇರೆಗೆ ತಾಲ್ಲೂಕು ಸಮಿತಿ ರಚನೆಯಾಗಿದೆ. ಸಮಿತಿಯ ಸದಸ್ಯರು ಪರಿಶ್ರಮಪೂರ್ವಕ ಕೆಲಸ ಮಾಡಿ, ಯೋಜನೆಗಳು ಜನರಿಗೆ ತಲುಪುವಂತೆ ಮಾಡಿದ್ದಾರೆ.”
ಅವರು ಮುಂದುವರಿಸಿ:
ಅನ್ನಭಾಗ್ಯ ಯೋಜನೆ: ತಾಲ್ಲೂಕಿನ ರೇಷನ್ ಅಂಗಡಿಗಳ ಮೂಲಕ ನಿಯಮಿತ ಹಾಗೂ ಸಮರ್ಪಕ ಅಕ್ಕಿ ವಿತರಣೆ
ಶಕ್ತಿ ಯೋಜನೆ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಗುವಂತೆ ದಿನನಿತ್ಯ ಖಾನಾಪುರ ಡೆಪೋದಲ್ಲಿ ಪರಿಶೀಲನೆ
ವಿದ್ಯುತ್ ಸಮಸ್ಯೆ: ಅರಣ್ಯ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ತಕ್ಷಣ ದುರಸ್ತಿ ಮಾಡಿಸುವ ಕ್ರಮ
ಯುವ ನಿಧಿ: ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದರ ಪ್ರಯೋಜನ ಪಡೆಯುತ್ತಿದ್ದು, ಶಿಬಿರಗಳ ಮೂಲಕ ಮಾರ್ಗದರ್ಶನ
ಎಂದು ವಿವರಿಸಿದರು.
ಮಾನ್ಯವರ ಹಾಜರಾತಿ…
ಕಾರ್ಯಕ್ರಮದಲ್ಲಿ
ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ,
ಖಾನಾಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮೇತ್ರಿ,
ನಂದಗಡ ಗ್ರಾಮಪಂಚಾಯತ್ ಅಧ್ಯಕ್ಷ ಯಲ್ಲಪ್ಪ ಗುರುವ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾತೇಶ್ ರಾವುತ,
ಕಸಬಾ ನಂದಗಡ ಗ್ರಾಮಪಂಚಾಯತ್ ಅಧ್ಯಕ್ಷೆ ನೇತ್ರಾವತಿ ಲೋಹಾರ,
ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಶ್ರೀಶೈಲ ಮಾಟೋಳಿ,
ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು, ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಂದಗಡ ಗ್ರಾಮಪಂಚಾಯತ್ ಅಧ್ಯಕ್ಷ ಯಲ್ಲಪ್ಪ ಗುರುವ ಸೇರಿದಂತೆ ಅನೇಕರು ಮಾರ್ಗದರ್ಶನಾತ್ಮಕ ಮಾತುಗಳಿಂದ ಸಭೆಗೆ ಶೋಭೆ ನೀಡಿದರು.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸ್ವಉದ್ಯೋಗದತ್ತ!
ಕಾರ್ಯಕ್ರಮದಲ್ಲಿ
ದೀಪಾ ಬಜಂತ್ರಿ, ನಿರ್ಮಲಾ ದೇಸಾಯಿ, ಲಕ್ಷ್ಮಿ ರಾವುತ, ಪ್ರಾರ್ಥನಾ ನಾಯಕ್
ಇವರು ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಲಘು ಉದ್ಯಮಗಳನ್ನು ಆರಂಭಿಸುತ್ತಿರುವ ಮಾಹಿತಿ ಹಂಚಿಕೊಂಡರು.
“ಮಹಿಳೆಯರು ಆರ್ಥಿಕವಾಗಿ ಬಲವಾಗಲಿ; ಉಳಿದ ಮಹಿಳೆಯರೂ ಸ್ವಉದ್ಯೋಗದತ್ತ ಮುಂದಾಗಲಿ” ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿರ್ವಹಣೆ…
ಪ್ರಸ್ತಾವನೆ: ಪ್ರಕಾಶ ಮದಾರ್
ಸ್ವಾಗತ ಹಾಗೂ ನಿರೂಪಣೆ: ಕಾಶಿಂ ಹಟ್ಟಿಹೋಳಿ ಮಾಡಿದರು.
ಆಭಾರವ್ಯಕ್ತತೆ: ಬಾಬು ಹತ್ತರವಾಡ

