आशीर्वाद हॉस्पिटल व श्री आर्थो अँड ट्रॉमा सेंटरतर्फे खानापूरातील डॉक्टरांसाठी कार्यशाळा संपन्न.
खानापूर : स्टेशन रोडवरील आशीर्वाद हॉस्पिटल सुरू होऊन तीन वर्षे पूर्ण झाल्यानिमित्त आशीर्वाद हॉस्पिटल व श्री आर्थो आणि ट्रॉमा सेंटर यांच्या संयुक्त विद्यमाने खानापूर तालुक्यातील सर्व डॉक्टरांसाठी कार्यशाळेचे आयोजन करण्यात आले.
हॉस्पिटलमध्ये सोनोग्राफी, सायकीयाट्री (मानसोपचार), त्वचारोग, दमा व छाती विकार, स्पाइन, हाडांचे रोग यांसह विविध स्पेशालिटी तज्ज्ञांकडून सेवा उपलब्ध आहेत. तसेच डॉ. विनोद माळी (M.D. मेडिसिन) यांच्याकडून २४×७ मेडिसिन सेवा रुग्णांना पुरवली जात आहे. या सुविधांचा लाभ अधिकाधिक सर्वसामान्य रुग्णांना मिळावा, यासाठी खानापूरातील डॉक्टर्स एकत्र येऊन टीमवर्क करत असल्याचे विशेष कौतुक या कार्यशाळेत व्यक्त करण्यात आले.
कार्यक्रमात बेळगाव येथील डॉ. देवेगौडा यांनी बोलताना डॉक्टरांच्या टीमवर्कचे कौतुक करत रुग्णसेवा अधिक परिणामकारक करण्याचा संदेश दिला.
तसेच डॉक्टर असोसिएशनचे अध्यक्ष डॉ. डी. ई. नाडगौडा यांनी अधिकाधिक डॉक्टरांनी असोसिएशनमध्ये सहभागी व्हावे, तसेच हॉस्पिटलमध्ये उपलब्ध सुपर स्पेशालिस्ट सेवा गरजू रुग्णांपर्यंत पोहोचवण्याचे आवाहन केले. यावेळी डॉ. शंकर पाटील, डॉ. एन. एल. कदम आणि डॉ. सुनील पाटील यांनीही मनोगत व्यक्त केले.
कार्यक्रमाला खानापूर, हलशी, नंदगड, जांबोटी, रामनगर येथील सुमारे 50 डॉक्टर्स उपस्थित होते. त्यापैकी प्रमुख उपस्थित डॉक्टरांमध्ये डॉ. सागर चिठ्ठी, डॉ. पी. एन. पाटील, पी. बी. चिठ्ठी, डॉ. श्रीकांत घाडी, डॉ. वैभव भालकेकर, वैभव पाटील, डॉ. नंद्याळकर यांचा समावेश होता.
कार्यक्रमाचे सूत्रसंचालन व स्वागत डॉ. राम पाटील यांनी केले, तर आभार प्रदर्शन डॉ. मदन कुंभार यांनी मानले.
ಆಶೀರ್ವಾದ ಆಸ್ಪತ್ರೆ ಹಾಗೂ ಶ್ರೀ ಆರ್ಥೋ ಅಂಡ್ ಟ್ರಾಮಾ ಸೆಂಟರ್ ವತಿಯಿಂದ ಖಾನಾಪುರದ ವೈದ್ಯರಿಗಾಗಿ ಆಯೋಜಿಸಿದ್ದ ಶಿಬಿರ ಸಂಪನ್ನ
ಖಾನಾಪುರ : ಸ್ಟೇಷನ್ ರೋಡ್ನ ಆಶೀರ್ವಾದ ಆಸ್ಪತ್ರೆ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಆಶೀರ್ವಾದ ಆಸ್ಪತ್ರೆ ಮತ್ತು ಶ್ರೀ ಆರ್ಥೋ & ಟ್ರಾಮಾ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ತಾಲೂಕಿನ ಎಲ್ಲಾ ವೈದ್ಯರಿಗಾಗಿ ಕಾರ್ಯಾಗಾರದ ಶಿಬಿರದ ಆಯೋಜನೆ ಮಾಡಲಾಗಿತ್ತು.
ಆಸ್ಪತ್ರೆಯಲ್ಲಿ ಸೋನೋಗ್ರಾಫಿ, ಸೈಕಿಯಾಟ್ರಿ (ಮಾನಸೋಪಚಾರ), ಚರ್ಮರೋಗ, ದಮ ಮತ್ತು ಎದೆ ಸಂಬಂಧಿತ ರೋಗಗಳು, ಸ್ಪೈನ್, ಎಲುಬು ಸಂಬಂಧಿ ರೋಗಗಳು ಸೇರಿದಂತೆ ವಿವಿಧ ಸ್ಪೆಷಾಲಿಟಿಗಳ ತಜ್ಞರಿಂದ ಸೇವೆಗಳು ಲಭ್ಯವಿವೆ. ಹಾಗೆಯೇ ಡಾ. ವಿನೋದ ಮಾಳಿ (M.D. ಮೆಡಿಸಿನ್) ಅವರಿಂದ 24×7 ಮೆಡಿಸಿನ್ ಸೇವೆ ರೋಗಿಗಳಿಗೆ ನೀಡಲಾಗುತ್ತಿದೆ. ಈ ಸೌಲಭ್ಯಗಳ ಪ್ರಯೋಜನ ಹೆಚ್ಚು ಹೆಚ್ಚು ಸಾಮಾನ್ಯ ರೋಗಿಗಳಿಗೆ ದೊರಕಲೆಂದು ಖಾನಾಪುರದ ವೈದ್ಯರು ಒಟ್ಟಾಗಿ ಕೆಲಸ ಮಾಡುತ್ತಿರುವುದು ವಿಶೇಷ ಶ್ಲಾಘನೀಯ ಎಂದು ಕಾರ್ಯಾಗಾರದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಡಾ. ದೇವೇಗೌಡ ಮಾತನಾಡಿ ವೈದ್ಯರ ತಂಡಭಾವವನ್ನು ಮೆಚ್ಚಿ ರೋಗಿ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡುವ ಸಂದೇಶ ನೀಡಿದರು. ಡಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಡಿ. ಈ. ನಾಡಗೌಡ ಅವರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಅಸೋಸಿಯೇಶನ್ಗೆ ಸೇರಬೇಕು ಹಾಗು ಆಸ್ಪತ್ರೆಯಲ್ಲಿ ಲಭ್ಯವಿರುವ ಸೂಪರ್ ಸ್ಪೆಷಾಲಿಸ್ಟ್ ಸೇವೆಗಳು ಅಗತ್ಯವಿರುವ ರೋಗಿಗಳಿಗೆ ತಲುಪುವಂತೆ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಶಂಕರ ಪಾಟೀಲ, ಡಾ. ಎನ್. ಎಲ್. ಕದಂ ಮತ್ತು ಡಾ. ಸುನಿಲ್ ಪಾಟೀಲ ಅವರು ಸಹ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಖಾನಾಪುರ, ಹಲಸಿ, ನಂದಗಡ್, ಜಾಂಬೋಟಿ, ರಾಮನಗರ ಭಾಗಗಳಿಂದ ಸುಮಾರು 50 ಕು ಹೆಚ್ಚು ವೈದ್ಯರು ಹಾಜರಿದ್ದರು. ಅವರಲ್ಲಿ ಪ್ರಮುಖ ಹಾಜರಾತಿದಾರರಾಗಿ ಡಾ. ಸಾಗರ್ ಚಿಟ್ಟಿ, ಡಾ. ಪಿ. ಎನ್. ಪಾಟೀಲ, ಪಿ. ಬಿ. ಚಿಟ್ಟಿ, ಡಾ. ಶ್ರೀಕಾಂತ ಘಾಡಿ, ಡಾ. ವೈಭವ ಭಾಲಕೇಕರ್, ವೈಭವ ಪಾಟೀಲ, ಡಾ. ನಂದ್ಯಾಳಕರ ಅವರ ಹಾಜರಿದ್ದರು.
ಕಾರ್ಯಕ್ರಮದ ಸೂತ್ರಸಂಚಾಲನೆ ಮತ್ತು ಸ್ವಾಗತವನ್ನು ಡಾ. ರಾಮ ಪಾಟೀಲ ಅವರು ನಿರ್ವಹಿಸಿದರು, ವಂದನೆಯನ್ನು ಡಾ. ಮದನ್ ಕುಂಭಾರ್ ಅವರು ಸಲ್ಲಿಸಿದರು.

