खानापूर येथील मराठा मंडळ महाविद्यालयात वृक्षारोपणाने 78 वा एनसीसी दिवस साजरा.
खानापूर (प्रतिनिधी) : मराठा मंडळ कला आणि वाणिज्य महाविद्यालयात 78 वा एनसीसी दिन उत्साहात साजरा करण्यात आला. महाविद्यालयातील एनसीसी विभागाच्या वतीने विविध उपक्रमांचे आयोजन करण्यात आले असून, पर्यावरण संवर्धनाचा संदेश देत विद्यार्थ्यांनी वृक्षारोपण करून एनसीसी दिन साजरा केला.

कार्यक्रमाच्या अध्यक्षस्थानी महाविद्यालयाच्या प्राचार्या प्रा. जे. बी. अंची होत्या. त्यांनी एनसीसी विद्यार्थ्यांना संबोधित करताना म्हटले की, “देशसेवेत एनसीसीचे योगदान अमूल्य आहे. गेल्या अठ्ठ्याहत्तर वर्षांत लाखो विद्यार्थी एनसीसीच्या माध्यमातून घडले असून, एक आदर्श नागरिक, सच्चा देशभक्त आणि कुशल नेतृत्व निर्माण करण्यात एनसीसीची मोलाची भूमिका आहे.” पुढे बोलताना त्यांनी पंतप्रधान श्री नरेंद्र मोदी हे विद्यार्थीदशेत एनसीसी कॅडेट होते याचा उल्लेख करून, “एक एनसीसी छात्र देशाचा पंतप्रधान बनू शकतो, हे विद्यार्थ्यांसाठी प्रेरणादायी उदाहरण आहे,” असे नमूद केले.
कार्यक्रमाला पाहुणे म्हणून डॉ. व्ही. एम. तिर्लापूर उपस्थित होते. त्यांनी वृक्षारोपण व वृक्षसंवर्धनाचे महत्व विद्यार्थ्यांना समजावून सांगितले आणि प्रत्येक विद्यार्थ्याने जबाबदार नागरिक म्हणून निसर्गसंवर्धनात योगदान द्यावे, असे आवाहन केले. तसेच प्रा. कपिल गुरव व डॉ. सुनंदा कुरणी यांची विशेष उपस्थिती होती.
उपस्थित पाहुण्यांचे स्वागत महाविद्यालयाचे एनसीसी अधिकारी लेफ्टनंट डॉ. आय. एम. गुरव यांनी केले. कार्यक्रमाचे सूत्रसंचालन राजश्री गावडा यांनी तर आभार प्रदर्शन ओमकार पत्री यांनी केले.
या प्रसंगी महाविद्यालयातील एनसीसी विद्यार्थी मोठ्या संख्येने उपस्थित होते आणि वृक्षारोपण उपक्रमात सर्वजण मोठ्या उत्साहाने सहभागी झाले होते.
ಖಾನಾಪುರಿನ ಮರಾಠಾ ಮಂಡಳ ಕಾಲೇಜಿನಲ್ಲಿ ವೃಕ್ಷಾರೋಪಣದೊಂದಿಗೆ 78ನೇ ಎನ್ಸಿಸಿ ದಿನಾಚರಣೆಯ ಆಚರಣೆ.
ಖಾನಾಪುರ (ಪ್ರತಿನಿಧಿ) : ಮರಾಠಾ ಮಂಡಳ ಕಲೆ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 78ನೇ ಎನ್ಸಿಸಿ ದಿನವನ್ನು ಉತ್ಸಾಹದಿಂದ ಆಚರಿಸಲಾಯಿತು.ಮಹಾವಿದ್ಯಾಲಯದ ಎನ್ಸಿಸಿ ಘಟಕದ ವತಿಯಿಂದ ವಿವಿಧ ಉಪಕ್ರಮಗಳ ಆಯೋಜಿಸಲಾಗಿತ್ತು. ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತ ವಿದ್ಯಾರ್ಥಿಗಳಿಂದ ವೃಕ್ಷಾರೋಪಣ ಮಾಡಿ ಎನ್ಸಿಸಿ ದಿನವನ್ನು ಅತಿ ವಿಶಿಷ್ಟವಾಗಿ ಆಚರಿಸಲಾಯಿತು.
ಮಹಾವಿದ್ಯಾಲಯದ ಎನ್ಸಿಸಿ ಘಟಕದ ವತಿಯಿಂದ ವಿವಿಧ ಉಪಕ್ರಮಗಳ ಆಯೋಜಿಸಲಾಗಿತ್ತು. ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತ ವಿದ್ಯಾರ್ಥಿಗಳಿಂದ ವೃಕ್ಷಾರೋಪಣ ಮಾಡಿ ಎನ್ಸಿಸಿ ದಿನವನ್ನು ಅತಿ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ . ಜೆ. ಬಿ. ಅಂಚಿ ವಹಿಸಿದ್ದರು. ಎನ್ಸಿಸಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ ಅವರು, “ದೇಶಸೇವೆಯಲ್ಲಿ ಎನ್ಸಿಸಿಯ ಕೊಡುಗೆ ಅಮೂಲ್ಯವಾಗಿದೆ. ಕಳೆದ ಎಪ್ಪತ್ತೆಂಟು ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಎನ್ಸಿಸಿಯ ಮೂಲಕ ರೂಪುಗೊಂಡಿದ್ದು, ಆದರ್ಶ ಪ್ರಜೆ, ನಿಜವಾದ ದೇಶಭಕ್ತಿ ಮತ್ತು ಕೌಶಲ್ಯಪೂರ್ಣ ನಾಯಕತ್ವ ನಿರ್ಮಾಣದಲ್ಲಿ ಎನ್ಸಿಸಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ.” ಎಂದು ಹೇಳಿದರು.
ಮುಂದೆ ಮಾತನಾಡಿದ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿದ್ಯಾರ್ಥಿ ಆಗಿದಾಗ ಎನ್ಸಿಸಿ ಕ್ಯಾಡೆಟ್ ಆಗಿದ್ದರು ಎಂಬುದನ್ನು ಉಲ್ಲೇಖಿಸಿ, “ಒಬ್ಬ ಎನ್ಸಿಸಿ ವಿದ್ಯಾರ್ಥಿ ದೇಶದ ಪ್ರಧಾನಮಂತ್ರಿಯಾಗಬಹುದು ಎಂಬುದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉದಾಹರಣೆಯಾಗಿದೆ,” ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಡಾ. ವಿ. ಎಂ. ತಿರ್ಲಾಪೂರ್ ಹಾಜರಿದ್ದರು. ಅವರು ವೃಕ್ಷಾರೋಪಣ ಮತ್ತು ವೃಕ್ಷ ಸಂವರ್ಧನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಜವಾಬ್ದಾರಿಯುತ ನಾಗರಿಕರಾಗಿ ನೈಸರ್ಗಿಕ ಸಂರಕ್ಷಣೆಯಲ್ಲಿ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾ. ಕಪಿಲ್ ಗುರುವ್ ಮತ್ತು ಡಾ. ಸುನಂದಾ ಕುರಣಿ ಇವರ ವಿಶೇಷ ಹಾಜರಾತಿ ಯಾಗಿದ್ದರು. ಆಗಮಿಸಿದ ಅತಿಥಿಗಳ ಸ್ವಾಗತವನ್ನು ಮಹಾವಿದ್ಯಾಲಯದ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ಐ. ಎಂ. ಗುರುವ್ ಮಾಡಿದರು.
ಕಾರ್ಯಕ್ರಮವನ್ನು ರಾಜಶ್ರೀ ಗೌಡಾ ನಿರ್ವಹಿಸಿದರೆ, ಆಭಾರ ಪ್ರದರ್ಶನವನ್ನು ಓಂಕಾರ್ ಪಟ್ರಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎನ್ಸಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ವೃಕ್ಷಾರೋಪಣ ಉಪಕ್ರಮದಲ್ಲಿ ಎಲ್ಲರೂ ಮಹಾ ಉತ್ಸಾಹದಿಂದ ಭಾಗವಹಿಸಿದರು.



