VST कंपनीच्या वरिष्ठांची प्रगती ॲग्रोला सदिच्छा भेट.
खानापूर : पॉवर टिलर क्षेत्रात कर्नाटकातील प्रसिद्ध VST या कंपनीचे विक्रि तथा वितरण विभागाचे राज्यस्तरीय वरिष्ठ अधिकारी, तथा विभाग प्रमुख व अन्य विक्री व जाहिरात प्रतिनिधी तसेच जिल्हास्तरीय वितरक आदिंनी खानापूर येथील ‘प्रगती ॲग्रो मार्ट’ ला सदिच्छा भेट दिली. या भेटीदरम्यान तालुक्यात व्यवसायवृद्धी, वितरण व्यवस्थापन, विक्री जाळे मजबूत करणे आदी मुद्द्यांवर सविस्तर चर्चा झाली. कंपनीच्या अधिकाऱ्यांनी प्रगती ॲग्रोच्या टीमला VST कंपनीने उत्पादित केलेल्या काही नवीन मॉडेल्सची ओळख करून देत तांत्रिक वैशिष्ट्यांची सविस्तर माहिती दिली. हि सर्व उपकरणे उपयोगी असल्याचे सांगण्यात आले. यातून भविष्यात VST कंपनीच्या यंत्रोपकरणांना बाजारात मागणी वाढावी अशी अपेक्षा व्यक्त करण्यात आली.

यावेळी टेक्सास, सिम्पसन्स अशा दर्जेदार अन्य कंपन्या स्थानिक बाजारात उतरल्या असल्याने VST सारख्या प्रथितयश कंपनीच्या वितरकांपुढे मोठे आव्हान उभे राहिल्याचे दिसत आहे. यामुळे स्थानिक वितरकांच्या गाठीभेटी घेऊन व्यवसाय वृद्धीचा प्रयत्न ते करताना दिसत आहेत. कांही कंपन्या एनकेन प्रकारे व्यवसाय चालवण्याचा प्रयत्न करतात. त्यामुळे कंपन्यांमध्ये चढाओढ दिसते. मात्र प्रगती ॲग्रो मध्ये विविध कंपन्यांची उपकरणे विक्रिस उपलब्ध असल्याने चढाओढ किंवा स्पर्धा असा विषय नसून यंत्रोपकरणांच्या वापराबाबत जागृती, प्रोत्साहन व सकारात्मकता असल्याचे सांगण्यात आले. VST सारख्या कंपनीच्या यंत्रोपकरणांची घटणारी मागणी पाहता भविष्यात त्यांनी शेतकऱ्यांना वाजवी दरात उच्चतम दर्जाची यंत्रे तसेच आवश्यक ते सुटे भाग वेळीच पुरवल्यास त्यांच्या उत्पादित यंत्रोपकरणांना पुन्हा मागणी नक्की वाढेल असा अभिप्राय त्यांना देण्यात आला.

प्रगती ॲग्रो मार्टतर्फे या भेटीचे स्वागत करण्यात आले. व्यवसाय वाढीसाठी ही भेट उपयोगी आहे असे मानण्यात येत असले तरी कांही प्रस्थापित कंपन्या आपल्या यंत्रोपकरणांच्या निर्धारित किंमती कमी करण्यास तयार नसतात व ग्राहकांना, विक्रेत्यांना विशेष मुभा किंवा सवलत सहसा देत नाहीत. तसेच स्थानिक विक्रेत्यांवर जाहिरातींचा अतिरिक्त भार पडत असल्याने शेतकऱ्यांपर्यंत नवी उपकरणे घेऊन जाणे कठीण होते असे मत प्रगती ॲग्रोचे अभिजित सरदेसाई यांनी व्यक्त केले. यावेळी व्यवसायातील अन्य आव्हाणे त्यांनी निदर्शनास आणून दिली व यावर वरिष्ठांनी वेळीच उपाय करावेत असे सूचवले. या भेटीत VST कंपनीचे झोनल हेड अभिजित के, वितरण विभागाचे प्रमुख जोसेफ के. एम्, कमलापूर जिल्ह्यातील वितरक तसेच विभागीय व्यवस्थापक सचिन दूंडूर, सूरज डी., आकाश पाटील आदी उपस्थित होते.
VST ಕಂಪನಿ ಹಿರಿಯ ಅಧಿಕಾರಿಗಳಿಂದ ಪ್ರಗತಿ ಅಗ್ರೋ ವಿತರಕ ಅಂಗಡಿಗೆ ಭೇಟಿಯು.
ಖಾನಾಪುರ : ಪವರ್ ಟೆಲ್ಲರ್ ಕ್ಷೇತ್ರದಲ್ಲಿ ಕರ್ನಾಟಕದ ಪ್ರಸಿದ್ಧ VST ಕಂಪನಿಯ ಮಾರಾಟ ಮತ್ತು ವಿತರಣಾ ವಿಭಾಗದ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು, ವಿಭಾಗ ಮುಖ್ಯಸ್ಥರು ಹಾಗೂ ಇತರೆ ಮಾರಾಟ-ಪ್ರಚಾರ ಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ವಿತರಕರು ಸೇರಿದ ತಂಡವು ಖಾನಾಪುರದ “ಪ್ರಗತಿ ಅಗ್ರೋ ಮಾರ್ಟ್”ಗೆ ಸದಭಿಪ್ರಾಯ ಭೇಟಿ ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ ತಾಲೂಕಿನಲ್ಲಿನ ವ್ಯವಹಾರವೃದ್ಧಿ, ವಿತರಣಾ ವ್ಯವಸ್ಥೆ, ಮಾರಾಟ ಜಾಲ ಬಲಪಡಿಸುವುದು ಮುಂತಾದ ವಿಷಯಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆಯಿತು. ಕಂಪನಿಯ ಅಧಿಕಾರಿಗಳು VST ಕಂಪನಿಯು ಉತ್ಪಾದಿಸಿದ್ದ ಹೊಸ ಮಾದರಿಗಳ ಯಂತ್ರಗಳ ಬಗ್ಗೆ ತಾಂತ್ರಿಕ ವಿವರಗಳೊಂದಿಗೆ ಪರಿಚಯ ಮಾಡಿಕೊಟ್ಟರು. ಎಲ್ಲಾ ಉಪಕರಣಗಳು ರೈತರಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ತಿಳಿಸಲಾಯಿತು. ಭವಿಷ್ಯದಲ್ಲಿ VST ಕಂಪನಿ ಯಂತ್ರೋಪಕರಣಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಈ ವೇಳೆ ಟೆಕ್ಸಾಸ್, ಸಿಮನ್ಸ್ ಮುಂತಾದ ಗುಣಮಟ್ಟದ ಕಂಪನಿಗಳು ಸ್ಥಳೀಯ ಮಾರುಕಟ್ಟೆಗೆ ಬಂದಿರುವುದರಿಂದ VST ಯಂಥ ಪ್ರತಿಷ್ಠಿತ ಕಂಪನಿಯ ವಿತರಕರ ಎದುರು ದೊಡ್ಡ ಸವಾಲು ನಿಂತಿದೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿತರಕರೊಂದಿಗೆ ಸಂಪರ್ಕ ಹೆಚ್ಚಿಸಿ ವ್ಯವಹಾರ ವೃದ್ಧಿಗೆ ಕಂಪನಿ ಮುಂದಾಗಿದೆ. ಕೆಲವು ಕಂಪನಿಗಳು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ವ್ಯವಹಾರ ನಡೆಸಲು ಪ್ರಯತ್ನಿಸುತ್ತಿರುವುದರಿಂದ ಕಂಪನಿಗಳ ನಡುವೆ ಪೈಪೋಟಿ ಕಾಣಿಸುತ್ತಿದೆ.
ಆದರೆ ಪ್ರಗತಿ ಅಗ್ರೋ ವಿತರಣೆ ಜೋತೆ ಹಲವು ಕಂಪನಿಗಳ ಉಪಕರಣಗಳು ಮಾರಾಟಕ್ಕೆ ಲಭ್ಯವಿರುವುದರಿಂದ ಪೈಪೋಟಿ ಎಂಬ ವಿಷಯಕ್ಕಿಂತಲೂ ಯಂತ್ರೋಪಕರಣ ಬಳಕೆಯ ಜಾಗೃತಿ, ಪ್ರೋತ್ಸಾಹ ಮತ್ತು ಸಕಾರಾತ್ಮಕತೆಗೆ ಹೆಚ್ಚಿನ ಆದ್ಯತೆ ಇದೆ ಎಂದು ತಿಳಿಸಲಾಯಿತು.
VST ಕಂಪನಿಯ ಯಂತ್ರೋಪಕರಣಗಳ ಕಡಿಮೆಯಾಗುತ್ತಿರುವ ಬೇಡಿಕೆಯನ್ನು ಗಮನಿಸಿದಂತೆ, ಭವಿಷ್ಯದಲ್ಲಿ ಅವರು ರೈತರಿಗೆ ಎಟಕುವ ದರದಲ್ಲಿ ಉತ್ತಮ ಗುಣಮಟ್ಟದ ಯಂತ್ರೋಪಕರಣ ಹಾಗೂ ಅವಶಕ ಸ್ಪೇರ್ ಭಾಗಗಳನ್ನು ಸರಿಯಾದ ಸಮಯಕ್ಕೆ ಪೂರೈಸಿದರೆ, ಮಾರುಕಟ್ಟೆಯಲ್ಲಿ ಅವರ ಉತ್ಪನ್ನಗಳಿಗೆ ಬೇಡಿಕೆ ಪುನಃ ಹೆಚ್ಚುವುದು ಖಚಿತ ಎಂಬ ಅಭಿಪ್ರಾಯ ಕಂಪನಿ ಅಧಿಕಾರಿಗಳಿಗೆ ತಿಳಿಸಲಾಯಿತು.
ಪ್ರಗತಿ ಅಗ್ರೋ ಮಾರ್ಟ್ ವತಿಯಿಂದ ಈ ಭೇಟಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಈ ಭೇಟಿ ವ್ಯವಹಾರ ವೃದ್ಧಿಗೆ ಉಪಯುಕ್ತ ವಾಗಿದೆ ಎಂದು ಹೇಳಲಾಗುತ್ತಿದೆ ಯಾದರೂ, ಕೆಲವು ಸ್ಥಾಪಿತ ಕಂಪನಿಗಳು ತಮ್ಮ ಯಂತ್ರೋಪಕರಣಗಳ ನಿಗದಿತ ಬೆಲೆಯನ್ನು ಕಡಿಮೆ ಮಾಡಲು ಸಿದ್ಧರಾಗುವುದಿಲ್ಲ ಹಾಗೂ ಗ್ರಾಹಕರಿಗೂ, ಮಾರಾಟಗಾರರಿಗೂ ವಿಶೇಷ ರಿಯಾಯಿತಿ ನೀಡುವುದಿಲ್ಲ. ಜೊತೆಗೆ ಸ್ಥಳೀಯ ಮಾರಾಟಗಾರರ ಮೇಲೆ ಜಾಹೀರಾತಿನ ಹೆಚ್ಚಿನ ಭಾರ ಬೀಳುವುದರಿಂದ ಹೊಸ ಉಪಕರಣಗಳನ್ನು ರೈತರಿಗೆ ತಲುಪಿಸುವುದು ಕಷ್ಟಕರವಾಗುತ್ತದೆ ಎಂದು ಪ್ರಗತಿ ಅಗ್ರೋ ವಿತರಕ ಅಭಿಜಿತ ಸರದೇಸಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯವಹಾರದಲ್ಲಿನ ಇತರೆ ಸವಾಲುಗಳನ್ನೂ ಅವರು ಗಮನಕ್ಕೆ ತಂದರು ಮತ್ತು ಇದರ ಮೇಲೆ ಹಿರಿಯ ಅಧಿಕಾರಿಗಳು ತುರ್ತು ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಭೇಟಿಯಲ್ಲಿ VST ಕಂಪನಿಯ ಜೋನಲ್ ಹೆಡ್ ಅಭಿಜಿತ ಕೆ., ವಿತರಣಾ ವಿಭಾಗದ ಮುಖ್ಯಸ್ಥ ಜೋಸೆಫ್ K. M., ಕಮಲಾಪುರ ಜಿಲ್ಲೆಯ ವಿತರಕರು, ವಿಭಾಗೀಯ ವ್ಯವಸ್ಥಾಪಕ ಸಚಿನ್ ದೂಂಡೂರ್, ಸುರಜ್ D., ಆಕಾಶ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

