सौंदत्ती रेणुकादेवी यात्रेत सोयी-सुविधा उपलब्ध करून द्या — कोल्हापूर जिल्हा रेणुका भक्त संघटनेचे प्रशासनाला साकडे.
बेळगाव (ता. 13 नोव्हेंबर) : येत्या १ ते ५ डिसेंबर दरम्यान सौंदत्ती (जिल्हा बेळगाव) येथे होणाऱ्या श्री रेणुका देवी यात्रेच्या पार्श्वभूमीवर यात्रेकरूंच्या सोयीसुविधांसाठी योग्य व्यवस्था करण्यात यावी, अशी मागणी कोल्हापूर जिल्हा रेणुका भक्त संघटनेच्या वतीने करण्यात आली आहे. या संदर्भात संघटनेच्या प्रतिनिधींनी बेळगावचे जिल्हाधिकारी आणि जिल्हा पोलिस अधीक्षक यांना निवेदन सादर केले.
यावेळी संघटनेचे अध्यक्ष अच्युत साळोखे, कार्याध्यक्ष सुभाष जाधव, उपाध्यक्ष सरदार जाधव, सरचिटणीस तानाजी सावत, तसेच गजानन विभुते, मोहन तात्या साळोखे, आनंदराव पाटील, युवराज मुळे, दयानंद घबाडे, लता सूर्यवंशी, शालिनी सरनाईक आदी पदाधिकारी उपस्थित होते.

संघटनेच्या वतीने सादर करण्यात आलेल्या निवेदनात म्हटले आहे की, यात्रेच्या काळात कोल्हापूर आणि महाराष्ट्रातील हजारो भाविक सौंदत्ती डोंगरावर दर्शनासाठी येतात. त्यामुळे त्यांच्या सोयीसाठी योग्य व्यवस्था करणे आवश्यक आहे. विशेषतः, महाराष्ट्रातून येणाऱ्या एसटी बसेस तसेच पूजेचे साहित्य आणणाऱ्या अवजड वाहनांना डोंगरावर प्रवेश देण्यात यावा, पार्किंगची स्वतंत्र व्यवस्था करावी, असे निवेदनात नमूद करण्यात आले आहे.
तसेच यात्रेच्या काळात पिण्याच्या पाण्याची, वीजपुरवठ्याची, स्वच्छतेची आणि पथदीपांची (स्ट्रीटलाइट्सची) योग्य व्यवस्था करण्यात यावी. देवीच्या दर्शनासाठी मंदिराचे चारही दरवाजे खुले ठेवावेत, महिलांसाठी स्वतंत्र स्वच्छतागृह उभारावेत, महिला पोलिसांची नेमणूक करावी, तसेच मराठी आणि इंग्रजी भाषेत माहितीफलक लावावेत, अशा मागण्याही करण्यात आल्या आहेत.
यात्रेच्या पौर्णिमा दिवशी तीन लाखांहून अधिक भाविक सौंदत्ती डोंगरावर दर्शनासाठी उपस्थित असतात. त्यामुळे शांतता व सुव्यवस्था अबाधित राहावी, चोरट्यांच्या कारवायांना आळा बसावा यासाठी पोलीस प्रशासनाने विशेष खबरदारी घ्यावी, अशी विनंती संघटनेने केली.
निवेदनाचा स्वीकार करताना जिल्हाधिकारी कार्यालयाचे शिरस्तेदार श्रीशैल प्रगती यांनी सांगितले की, “सौंदत्ती रेणुकादेवी यात्रा संदर्भात लवकरच विशेष बैठक आयोजित करण्यात येईल. कोल्हापूर जिल्हा रेणुका भक्त संघटनेने सादर केलेल्या मागण्यांचा गांभीर्याने विचार करून आवश्यक ती पावले उचलली जातील.”
तर जिल्हा पोलिस अधीक्षकांनी सांगितले की, “प्रशासनाच्या वतीने यात्रेकरूंच्या सोयीसुविधांची पूर्ण काळजी घेण्यात येईल. यात्रेच्या काळात भाविकांच्या सुरक्षेसह वाहतुकीसंदर्भात आवश्यक उपाययोजना हाती घेतल्या जातील.”
संघटनेच्या पदाधिकाऱ्यांनी यानंतर सौंदत्ती रेणुका देवस्थानालाही भेट देऊन मंदिर प्राधिकरणाच्या अधिकारी रत्नमाला यांनाही निवेदन सादर केले.
ಸೌಂದತ್ತಿ ರೇಣುಕಾದೇವಿ ಯಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಸೌಕರ್ಯ ಒದಗಿಸಿ — ಕೊಲ್ಹಾಪುರ ಜಿಲ್ಲಾ ರೇಣುಕಾದೇವಿ ಭಕ್ತ ಸಂಘಟನೆ ವತಿಯಿಂದ ಮನವಿ.
ಬೆಳಗಾವಿ (ತಾ. 13 ನವೆಂಬರ್) : ಬರುವ ಡಿಸೆಂಬರ್ 1ರಿಂದ 5ರ ವರೆಗೆ ಬೆಳಗಾವಿ ಜಿಲ್ಲೆಯ ಸೌಂದತ್ತಿಯಲ್ಲಿ ನಡೆಯಲಿರುವ ಶ್ರೀ ರೇಣುಕಾದೇವಿ ಯಾತ್ರೆಯ ಹಿನ್ನೆಲೆಯಾಗಿ ಭಕ್ತರ ಸೌಕರ್ಯಕ್ಕಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಕೊಲ್ಹಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಪರವಾಗಿ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಪ್ರತಿನಿಧಿಗಳು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಅಚ್ಯುತ ಸಾಲೋಖೆ, ಕಾರ್ಯಾಧ್ಯಕ್ಷ ಸುಭಾಷ ಜಾಧವ, ಉಪಾಧ್ಯಕ್ಷ ಸರದಾರ ಜಾಧವ, ಪ್ರಧಾನ ಕಾರ್ಯದರ್ಶಿ ತಾನಾಜಿ ಸಾವಂತ್, ಹಾಗೂ ಗಜಾನನ ವಿಭೂತೇ, ಮೋಹನ್ ತಾತ್ಯಾ ಸಾಲೋಖೆ, ಆನಂದರಾವ ಪಾಟೀಲ, ಯುವರಾಜ ಮುಳೆ, ದಯಾನಂದ ಘಬಾಡೆ, ಲತಾ ಸೂರ್ಯವಂಶಿ, ಶಾಲಿನಿ ಸರನಾಯಕ್ ಮುಂತಾದ ಪದಾಧಿಕಾರಿಗಳು ಹಾಜರಿದ್ದರು.
ಸಂಘಟನೆಯ ಪರವಾಗಿ ಸಲ್ಲಿಸಲಾದ ಮನವಿ ಪತ್ರದಲ್ಲಿ: “ಯಾತ್ರೆಯ ಅವಧಿಯಲ್ಲಿ ಕೊಲ್ಹಾಪುರ ಹಾಗೂ ಮಹಾರಾಷ್ಟ್ರದ ಸಾವಿರಾರು ಭಕ್ತರು ಸೌಂದತ್ತಿ ಪರ್ವತದತ್ತ ದರ್ಶನಾರ್ಥ ಆಗಮಿಸುತ್ತಾರೆ. ಆದ್ದರಿಂದ ಅವರ ಸೌಕರ್ಯಕ್ಕಾಗಿ ಸೂಕ್ತ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ. ವಿಶೇಷವಾಗಿ ಮಹಾರಾಷ್ಟ್ರದಿಂದ ಬರುವ ಎಸ್ಟಿ ಬಸ್ಗಳು ಹಾಗೂ ಪೂಜಾ ಸಾಮಗ್ರಿ ತರುವ ಭಾರೀ ವಾಹನಗಳಿಗೆ ಪರ್ವತದತ್ತ ಪ್ರವೇಶ ನೀಡಬೇಕು, ಪಾರ್ಕಿಂಗ್ಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಜಾತ್ರೆಯ ಅವಧಿಯಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಸ್ವಚ್ಛತೆ ಮತ್ತು ರಸ್ತೆ ಬೆಳಕು (ಸ್ಟ್ರೀಟ್ಲೈಟ್ಗಳು)ಗಳಿಗೆ ಸಮರ್ಪಕ ವ್ಯವಸ್ಥೆ ಮಾಡಬೇಕು. ದೇವಿಯ ದರ್ಶನಕ್ಕಾಗಿ ದೇವಸ್ಥಾನದ ನಾಲ್ಕೂ ಬಾಗಿಲುಗಳನ್ನು ತೆರೆಯಬೇಕು, ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು, ಮಹಿಳಾ ಪೊಲೀಸರನ್ನು ನಿಯೋಜಿಸಬೇಕು, ಜೊತೆಗೆ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂಬ ಬೇಡಿಕೆಗಳನ್ನೂ ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಯಾತ್ರೆಯ ಪೌರ್ಣಿಮೆಯ ದಿನದಂದು ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಸೌಂದತ್ತಿ ಪರ್ವತಕ್ಕೆ ಆಗಮಿಸುತ್ತಾರೆ. ಆದ್ದರಿಂದ ಶಾಂತಿ ಮತ್ತು ಶಿಸ್ತು ಕಾಪಾಡಲು, ಕಳ್ಳತನದ ಘಟನೆಗಳಿಗೆ ತಡೆ ನೀಡಲು ಪೊಲೀಸ್ ಇಲಾಖೆ ವಿಶೇಷ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸಂಘಟನೆಯವರು ವಿನಂತಿಸಿದರು.
ಮನವಿ ಸ್ವೀಕರಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಶ್ರೀಶೈಲ ಪ್ರಗತಿ ಅವರು : “ಸೌಂದತ್ತಿ ರೇಣುಕಾದೇವಿ ಜಾತ್ರೆ ಕುರಿತು ಶೀಘ್ರದಲ್ಲೇ ವಿಶೇಷ ಸಭೆ ಆಯೋಜಿಸಲಾಗುವುದು. ಕೊಲ್ಹಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.” ಎಂದು ಭರವಸೆ ನೀಡಿದರು
ಜಿಲ್ಲಾ ಪೊಲೀಸ್ ಅಧೀಕ್ಷಕರು: “ಆಡಳಿತದ ಪರವಾಗಿ ಭಕ್ತರ ಸೌಕರ್ಯ ಹಾಗೂ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತದೆ. ಜಾತ್ರೆಯ ಅವಧಿಯಲ್ಲಿ ಭಕ್ತರ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.” ಎಂದು ತಿಳಿಸಿದರು.
ನಂತರ ಸಂಘಟನೆಯ ಪದಾಧಿಕಾರಿಗಳು ಸೌಂದತ್ತಿ ರೇಣುಕಾ ದೇವಸ್ಥಾನಕ್ಕೂ ಭೇಟಿ ನೀಡಿ ದೇವಸ್ಥಾನ ಪ್ರಾಧಿಕಾರದ ಅಧಿಕಾರಿ ರತ್ನಮಾಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.


