भारतीय जनता पक्षाचे ज्येष्ठ नेते संजय कुबल यांचा आज वाढदिवस; पक्षबांधणीत दिलेले योगदान अमूल्य, खानापूर तालुक्यात उत्साहाचे वातावरण.
खानापूर (ता. 6 नोव्हेंबर) : भारतीय जनता पक्षाचे ज्येष्ठ नेते व माजी तालुका अध्यक्ष संजय कुबल यांचा वाढदिवस आज गुरुवार, दिनांक 6 नोव्हेंबर 2025 रोजी मोठ्या उत्साहात साजरा करण्यात येणार आहे. या वाढदिवसानिमित्त भारतीय जनता पार्टी, खानापूर तालुका यांच्या वतीने दुपारी 3.00 वाजता सार्वजनिक बांधकाम विभागाच्या विश्रामधामात विशेष कार्यक्रमाचे आयोजन करण्यात आले आहे.

संजय कुबल यांनी आपल्या 30 ते 35 वर्षांच्या राजकीय प्रवासात भारतीय जनता पक्षाच्या संघटन बांधणीसाठी अविरत परिश्रम घेतले आहेत. ते तीन वेळा भारतीय जनता पार्टीचे तालुका अध्यक्ष म्हणून कार्यरत राहिले असून, या काळात त्यांनी खानापूर तालुक्यातील खेड्यापाड्यांपर्यंत पक्षाची मुळे रोवली. त्यांच्या नेतृत्वाखाली कार्यकर्त्यांनी एकजुटीने पक्षाचा विस्तार केला.
संजय कुबल यांचे कार्य फक्त पक्षापुरते मर्यादित नसून, ते राष्ट्रीय स्वयंसेवक संघाचे एक सक्रिय स्वयंसेवक आहेत. संघाच्या विचारांनी प्रेरित होऊन त्यांनी तालुक्यातील अनेक गावांमध्ये आरएसएसच्या शाखा सुरू करण्यासाठी प्रयत्न केले, ज्यातून त्यांचा राष्ट्रभाव आणि संघनिष्ठा दिसून येते.
खानापूर तालुका हा परंपरेने महाराष्ट्र एकीकरण समितीचा बालेकिल्ला म्हणून ओळखला जात होता. राष्ट्रीय पक्षांना येथे कधीच जनतेचा पाठिंबा मिळाला नव्हता. अपवाद म्हणून फक्त काँग्रेसचे बसाप्पान्ना अरगावी हे तालुक्यातून पहिले आमदार म्हणून निवडून आले होते. त्यानंतर दीर्घकाळ महाराष्ट्र एकीकरण समितीचे वर्चस्व टिकून होते. मात्र, संजय कुबल यांनी तालुका अध्यक्ष पदावर आल्यानंतर गावोगावी फिरून कार्यकर्त्यांना एकत्र केले, पक्षाची संघटना बांधली आणि भारतीय जनता पक्षाला स्थानिक स्तरावर दृढ पाया मिळवून दिला.
याच संघटनात्मक बळावर प्रल्हाद रेमानी हे भारतीय जनता पक्षाचे पहिले आमदार म्हणून खानापूरातून निवडून आले, आणि या यशाचे मोठे श्रेय संजय कुबल यांच्या नेतृत्वगुणांना आणि संघटनक्षमतेला जाते. त्यांनी पक्षासाठी निष्ठेने काम करताना कधीही वैयक्तिक स्वार्थाचा विचार न करता, पक्ष व विचारधारेस प्राधान्य दिले.
आजही त्यांच्याकडे कोणतेही पद नसले, तरीही संपूर्ण तालुक्यात त्यांना मानाचे स्थान आहे. पक्षाचे कार्यकर्ते त्यांना मार्गदर्शक आणि प्रेरणास्थान मानतात. त्यांच्या साध्या, संयमी आणि लोकसंग्रही स्वभावामुळे ते सर्वपक्षीय वर्तुळात आदराने पाहिले जातात.
त्यांच्या वाढदिवसानिमित्त खानापूर तालुक्यातील पक्ष पदाधिकारी, कार्यकर्ते, नागरिक, तसेच विविध सामाजिक संघटनांचे प्रतिनिधी शुभेच्छांचा वर्षाव करत आहेत. कार्यक्रमात खानापूर तालुक्यातील विविध विभागांचे पदाधिकारी आणि कार्यकर्ते उपस्थित राहणार आहेत.
अशा या खानापूरच्या मातीतून घडलेल्या ज्येष्ठ नेत्याला, पक्ष व संघटन कार्याचे अखंड योगदान देणाऱ्या संजय कुबल यांना “आपलं खानापूर” न्यूज पोर्टलच्या वतीने वाढदिवसाच्या मनःपूर्वक शुभेच्छा!
त्यांचा हा वाढदिवस साजरा होतानाच खानापूरात आजचा दिवस ‘भाजप कार्यकर्त्यांचा आनंदसोहळा’ ठरणार आहे.
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸಂಜಯ ಕುಬಲರ ಜನ್ಮದಿನ ಇಂದು; ಪಕ್ಷ ನಿರ್ಮಾಣದಲ್ಲಿ ನೀಡಿದ ಕೊಡುಗೆ ಅಮೂಲ್ಯ ; ಖಾನಾಪುರ ತಾಲ್ಲೂಕಿನಲ್ಲಿ ಉತ್ಸಾಹದ ವಾತಾವರಣ!
ಖಾನಾಪುರ (ತಾ. 6 ನವೆಂಬರ್) : ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ತಾಲೂಕು ಅಧ್ಯಕ್ಷರಾದ ಸಂಜಯ ಕುಬಲ ಅವರ ಜನ್ಮ ದಿನವಾದ ಇಂದು ಗುರುವಾರ, 6 ನವೆಂಬರ್ 2025ರಂದು ಭಕ್ತಿಭಾವದಿಂದ ಹಾಗೂ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ, ಖಾನಾಪುರ ತಾಲೂಕು ಘಟಕದ ವತಿಯಿಂದ ಮಧ್ಯಾಹ್ನ 3.00 ಗಂಟೆಗೆ ಸಾರ್ವಜನಿಕ ನಿರ್ಮಾಣ ಇಲಾಖೆಯ ವಿಶ್ರಾಂತಿಧಾಮದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಜಯ ಕುಬಲ ಅವರು ತಮ್ಮ 30 ರಿಂದ 35 ವರ್ಷದ ರಾಜಕೀಯ ಬದುಕಿನಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಅವೂರಾತ್ರಿ ಶ್ರಮಿಸಿದ್ದಾರೆ. ಅವರು ಮೂರು ಅವಧಿಗಳ ಕಾಲ ಭಾರತೀಯ ಜನತಾ ಪಕ್ಷದ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈ ಅವಧಿಯಲ್ಲಿ ಖಾನಾಪುರ ತಾಲೂಕಿನ ಹಳ್ಳಿಗಾಡುಗಳ ತನಕ ಪಕ್ಷದ ಬೇರು ಬಿತ್ತುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಕಾರ್ಯಕರ್ತರು ಏಕತೆಯಿಂದ ಕೆಲಸ ಮಾಡಿ ಪಕ್ಷದ ವ್ಯಾಪ್ತಿ ವಿಸ್ತರಿಸಿದರು.
ಸಂಜಯ ಕುಬಲ ಅವರ ಕಾರ್ಯಚಟುವಟಿಕೆ ಕೇವಲ ಪಕ್ಷದ ಮಟ್ಟಿಗೆ ಸೀಮಿತವಾಗಿಲ್ಲ; ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಸ್ವಯಂಸೇವಕರೂ ಆಗಿದ್ದಾರೆ. ಸಂಘದ ಚಿಂತನೆಗಳಿಂದ ಪ್ರೇರಿತರಾಗಿ ಅವರು ತಾಲೂಕಿನ ಅನೇಕ ಹಳ್ಳಿಗಳಲ್ಲಿ ಆರ್ಎಸ್ಎಸ್ ಶಾಖೆಗಳನ್ನು ಪ್ರಾರಂಭಿಸಲು ಮುಂದಾಗಿದ್ದಾರೆ, ಇದರಿಂದ ಅವರ ರಾಷ್ಟ್ರಭಾವನೆ ಹಾಗೂ ಸಂಘನಿಷ್ಠೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.
ಖಾನಾಪುರ ತಾಲೂಕು ಪರಂಪರೆಯಿಂದಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ಬಲವಾದ ಭದ್ರ ಕೋಟೆ ಎಂದೇ ಪ್ರಸಿದ್ಧವಾಗಿತ್ತು. ರಾಷ್ಟ್ರೀಯ ಪಕ್ಷಗಳಿಗೆ ಇಲ್ಲಿ ಜನರಿಂದ ಹೆಚ್ಚಿನ ಬೆಂಬಲ ದೊರಕಿರಲಿಲ್ಲ. ಅಪವಾದವಾಗಿ ಕೇವಲ ಕಾಂಗ್ರೆಸ್ ಪಕ್ಷದ ಬಸಪ್ಪಣ್ಣಾ ಅರಗಾವಿ ಅವರು ಈ ತಾಲೂಕಿನಿಂದ ಪ್ರಥಮ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಹಲವು ವರ್ಷಗಳ ಕಾಲ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಭಾವ ಮುಂದುವರಿದಿತ್ತು.
ಆದರೆ ಸಂಜಯ ಕುಬಲ ಅವರು ತಾಲೂಕು ಅಧ್ಯಕ್ಷರಾದ ಬಳಿಕ, ಹಳ್ಳಿ ಹಳ್ಳಿಗೆ ತೆರಳಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಸಂಘಟನೆ ನಿರ್ಮಿಸಿದರು ಮತ್ತು ಭಾರತೀಯ ಜನತಾ ಪಕ್ಷಕ್ಕೆ ಸ್ಥಳೀಯ ಮಟ್ಟದಲ್ಲಿ ದೃಢವಾದ ನೆಲೆ ನಿರ್ಮಿಸಿದರು. ಈ ಸಂಘಟನಾ ಶಕ್ತಿಯ ಆಧಾರದ ಮೇಲೆ ಪ್ರಲ್ಹಾದ್ ರೇಮಾಣಿ ಅವರು ಖಾನಾಪುರದಿಂದ ಭಾರತೀಯ ಜನತಾ ಪಕ್ಷದ ಪ್ರಥಮ ಶಾಸಕರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದರು, ಮತ್ತು ಈ ಜಯದ ಪ್ರಮುಖ ಶ್ರೇಯಸ್ಸು ಸಂಜಯ ಕುಬಲ ಅವರ ನಾಯಕತ್ವ ಹಾಗೂ ಸಂಘಟನಾ ಸಾಮರ್ಥ್ಯಕ್ಕೆ ಸಲ್ಲುತ್ತದೆ.
ಅವರು ಪಕ್ಷದ ಕಾರ್ಯದಲ್ಲಿ ನಿಷ್ಠೆಯಿಂದ ತೊಡಗಿಕೊಂಡು, ಎಂದಿಗೂ ವೈಯಕ್ತಿಕ ಲಾಭ ಅಥವಾ ಹುದ್ದೆಯ ಆಸೆ ತೋರದೆ, ಸದಾ ಪಕ್ಷ ಮತ್ತು ಚಿಂತನೆಗೆ ಪ್ರಾಮುಖ್ಯತೆ ನೀಡಿದರು. ಇಂದು ಅವರ ಬಳಿ ಯಾವುದೇ ಹುದ್ದೆ ಇಲ್ಲದಿದ್ದರೂ ಸಂಪೂರ್ಣ ಖಾನಾಪುರ ತಾಲೂಕಿನಲ್ಲಿ ಅವರಿಗೆ ಗೌರವದ ಸ್ಥಾನವಿದೆ. ಪಕ್ಷದ ಕಾರ್ಯಕರ್ತರು ಅವರನ್ನು ಮಾರ್ಗದರ್ಶಕ ಮತ್ತು ಪ್ರೇರಣಾಸ್ಥಾನ ಎಂದು ಪರಿಗಣಿಸುತ್ತಾರೆ. ಅವರ ಸರಳ, ಸಹನಶೀಲ ಹಾಗೂ ಜನಸಂಪರ್ಕಪರ ಸ್ವಭಾವದಿಂದ ಅವರು ಎಲ್ಲಾ ಪಕ್ಷಗಳ ವಲಯದಲ್ಲಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ.
ಅವರ ಜನ್ಮದಿನದ ನಿಮಿತ್ತ ಖಾನಾಪುರ ತಾಲೂಕಿನ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ನಾಗರಿಕರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಖಾನಾಪುರ ತಾಲೂಕಿನ ವಿಭಿನ್ನ ವಿಭಾಗಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಾಗಲಿದ್ದಾರೆ.
ಇಂತಹ ಈ ಖಾನಾಪುರದ ಮಣ್ಣಿನಲ್ಲಿ ಬೆಳೆದ ಹಿರಿಯ ನಾಯಕರಾದ ಸಂಜಯ ಕುಬಲ ಅವರಿಗೆ, ಪಕ್ಷ ಹಾಗೂ ಸಂಘಟನಾ ಕಾರ್ಯಕ್ಕಾಗಿ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ, “आपलं खानापूर” ನ್ಯೂಸ್ ಪೋರ್ಟಲ್ನ ಪರವಾಗಿ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು!
ಇಂದು ಅವರ ಜನ್ಮದಿನ ಖಾನಾಪುರದಲ್ಲಿ ‘ಭಾಜಪ ಕಾರ್ಯಕರ್ತರ ಸಂತೋಷೋತ್ಸವ’ ಆಗಿ ಪರಿವರ್ತನೆಯಾಗಿದೆ.


