खासदार विश्वेश्वर हेगडे-कागेरी यांची खानापूरला उद्या धावती भेट! मराठा मंडळ कॉलेज ते करंबळ रस्त्याची तपासणी व पाहणी करणार!
खानापूर (ता. 5 नोव्हेंबर) : कॅनरा (कारवार) लोकसभा मतदारसंघाचे खासदार विश्वेश्वर हेगडे-कागेरी हे उद्या गुरुवार, दिनांक 6 नोव्हेंबर रोजी दुपारी 3:00 वाजता खानापूरला धावती भेट देणार आहेत. त्यांच्या या भेटीदरम्यान ते मराठा मंडळ डिग्री कॉलेज ते करंबळ कत्री पर्यंतच्या नवीन होणाऱ्या सीसी मार्गाची तपासणी व पाहणी करणार असून, या कामाविषयी स्थानिक नागरिक व अधिकाऱ्यांकडून प्रत्यक्ष माहिती घेणार आहेत.
भारतीय जनता पक्षाचे जिल्हा उपाध्यक्ष प्रमोद कोचेरी व तालुका पदाधिकाऱ्यांनी दिलेल्या माहितीनुसार, खासदार कागेरी हे दुपारी तीन वाजता स्टेट बँकेजवळील भारतीय जनता पक्षाच्या कार्यालयाला भेट देऊन कार्यकर्त्यांशी संवाद साधतील. या बैठकीत तालुक्यातील महत्त्वाच्या विकासकामांबाबत व स्थानिक घडामोडींविषयी सविस्तर चर्चा होणार आहे.
दरम्यान, मराठा मंडळ कॉलेज ते करंबळ कत्री या रस्त्याचे बांधकाम केंद्र व राज्य सरकारच्या संयुक्त विद्यमाने अंदाजे 14 कोटी रुपयांच्या खर्चाने करण्यात येत आहे. मात्र अलीकडच्या काळात या रस्त्याच्या कामाच्या निकृष्ट दर्जाबाबत तक्रारी वाढल्या असल्याने खासदार विश्वेश्वर हेगडे-कागेरी हे स्वतः प्रत्यक्ष स्थळी जाऊन रस्त्याची तपासणी व पाहणी करतील.
तपासणीनंतर खासदार कागेरी हे बांधकाम विभागाच्या विश्रामगृहात भाजपा पदाधिकाऱ्यांसमवेत महत्त्वाच्या विषयांवर चर्चा करतील. या बैठकीत आगामी काळातील पक्ष संघटनात्मक तयारी, विकासकामांचा आढावा आणि नागरिकांच्या अडचणींवर चर्चा अपेक्षित आहे.
या कार्यक्रमासाठी भाजपा जिल्हा उपाध्यक्ष प्रमोद कोचेरी, आमदार विठ्ठल हलगेकर, तालुका अध्यक्ष बसवराज सानिकोप, प्रधान कार्यदर्शी गुंडू तोपिनकट्टी व मल्लाप्पा मारीहाळ यांनी सर्व कार्यकर्ते व पदाधिकाऱ्यांना वेळेवर उपस्थित राहण्याचे आवाहन केले आहे.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಖಾನಾಪುರಕ್ಕೆ ನಾಳೆ ತುರ್ತು ಭೇಟಿ! ಮರಾಠಾ ಮಂಡಳ ಡಿಗ್ರಿ ಕಾಲೇಜಿನಿಂದ ಕರಂಬಳ ಕ್ರಾಸ್ ರಸ್ತೆಯ ಪರಿಶೀಲನೆ ಮತ್ತು ವೀಕ್ಷಣೆ ಮಾಡುವರು!
ಖಾನಾಪುರ (ತಾ. 5 ನವೆಂಬರ್) : ಕೆನರಾ (ಕಾರವಾರ) ಲೋಕಸಭಾ ಮತಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಳೆ ಗುರುವಾರ, ದಿನಾಂಕ 6 ನವೆಂಬರ್, ಮಧ್ಯಾಹ್ನ 3.00 ಗಂಟೆಗೆ ಖಾನಾಪುರಕ್ಕೆ ತುರ್ತು ಭೇಟಿ ನೀಡಲಿದ್ದಾರೆ. ಅವರ ಈ ಭೇಟಿಯ ಸಂದರ್ಭದಲ್ಲಿ ಅವರು ಮರಾಠಾ ಮಂಡಳ ಡಿಗ್ರಿ ಕಾಲೇಜಿನಿಂದ ಕರಂಬಳ ಕತ್ರಿವರೆಗೆ ನಿರ್ಮಾಣ ಹಂತದಲ್ಲಿರುವ ಹೊಸ ಸಿಸಿ ರಸ್ತೆಯ ಪರಿಶೀಲನೆ ಮತ್ತು ವೀಕ್ಷಣೆ ಮಾಡಲಿದ್ದು, ಸ್ಥಳೀಯ ನಾಗರಿಕರು ಮತ್ತು ಅಧಿಕಾರಿಗಳಿಂದ ಈ ಕಾಮಗಾರಿಯ ಬಗ್ಗೆ ಕಾಮಗಾರಿ ಕೆಲಸದ ಸ್ಥಳದಲ್ಲೇ ಮಾಹಿತಿಯನ್ನು ಪಡೆಯಲಿದ್ದಾರೆ.
ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ ಹಾಗೂ ತಾಲ್ಲೂಕು ಪದಾಧಿಕಾರಿಗಳ ನೀಡಿದ ಮಾಹಿತಿಯ ಪ್ರಕಾರ, ಸಂಸದ ಕಾಗೇರಿ ಅವರು ಮಧ್ಯಾಹ್ನ ಮೂರು ಗಂಟೆಗೆ ಸ್ಟೇಟ್ ಬ್ಯಾಂಕ್ ಹತ್ತಿರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಭೆಯಲ್ಲಿ ತಾಲ್ಲೂಕಿನ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸ್ಥಳೀಯ ಘಟನೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಲಿದೆ.
ಈ ಮಧ್ಯೆ, ಮರಾಠಾ ಮಂಡಳ ಕಾಲೇಜಿನಿಂದ ಕರಂಬಳ ಕತ್ರಿವರೆಗೆ ಇರುವ ರಸ್ತೆಯ ನಿರ್ಮಾಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಯುಕ್ತ ಹೂಡಿಕೆಯಿಂದ ಸುಮಾರು 14 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ರಸ್ತೆಯ ಕಾಮಗಾರಿಯ ಗುಣಮಟ್ಟದ ಬಗ್ಗೆ ದೂರುಗಳು ಹೆಚ್ಚಾಗಿರುವುದರಿಂದ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ವತಃ ಸ್ಥಳಕ್ಕೆ ತೆರಳಿ ಕಾಮಗಾರಿಯ ಸ್ಥಳದಲ್ಲೇ ಪರಿಶೀಲನೆ ಮತ್ತು ವೀಕ್ಷಣೆ ಮಾಡಿ ವಿವರಗಳನ್ನು ಪಡೆಯಲಿದ್ದಾರೆ.
ಪರಿಶೀಲನೆಯ ನಂತರ ಸಂಸದ ಕಾಗೇರಿ ಅವರು ಪಿಡಬ್ಲ್ಯುಡಿ ವಿಶ್ರಾಂತಿ ನಿಲಯದಲ್ಲಿ ಬಿಜೆಪಿ ಪದಾಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಸಿದ್ಧತೆ, ಅಭಿವೃದ್ಧಿ ಕಾಮಗಾರಿಗಳ ಅವಲೋಕನ ಮತ್ತು ನಾಗರಿಕರ ಅಸಮಾಧಾನ ಕುರಿತ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ, ಶಾಸಕರಾದ ವಿಠ್ಠಲ ಹಲಗೇಕರ, ತಾಲ್ಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ, ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ ಮತ್ತು ಮಲ್ಲಪ್ಪ ಮಾರಿಹಾಳ ಅವರು ಎಲ್ಲಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ವಿನಂತಿ ಮಾಡಿದ್ದಾರೆ.


