घरबसल्या रोजगाराचे आमिष दाखवून 2 कोटींचा गंडा! पंढरपूरचा ठकसेन बेळगाव पोलिसांच्या जाळ्यात!
बेळगाव (ता. 5 नोव्हेंबर) : घरबसल्या अगरबत्ती पॅकिंगचे काम देण्याचे आमिष दाखवून बेळगावातील शेकडो महिलांकडून तब्बल 2 कोटी रुपयांचा गंडा घालणाऱ्या ठकसेनाला शहापूर पोलिसांनी अखेर बेड्या ठोकल्या.
या प्रकरणामुळे संपूर्ण शहरात खळबळ उडाली आहे.
अटक केलेल्या आरोपीचे नाव — बाबासाहेब लक्ष्मण कोळेकर (वय 35, रा. जाळोळी, ता. पंढरपूर, सध्या राहणार पूरसंघी, पुणे) असं आहे.
त्याने “बी.एम. ग्रुप महिला गृहोद्योग समूह” या नावाने एक तथाकथित गृहोद्योग संस्था सुरू करून महिलांना अगरबत्ती पॅकिंगचे काम देण्याचे आमिष दाखवले होते.
सेक्युरिटी अमाउंटच्या नावाखाली उकळले लाखो रुपये.
कोळेकर याने प्रत्येक महिलेकडून 2,500 रुपये ‘सेक्युरिटी अमाउंट’ म्हणून घेतले.
या प्रकारे त्याने शेकडो महिलांकडून तब्बल 2 कोटी रुपयांची रक्कम उकळली.
महिलांकडून पैसे गोळा करून काही दिवसांनी हा ठकसेन अचानक बेपत्ता झाला.
महिलांचा संताप — जिल्हाधिकारी कार्यालयावर मोर्चा.
या फसवणुकीविरोधात शेकडो पीडित महिलांनी जिल्हाधिकारी कार्यालयावर मोर्चा काढला होता.
तसेच, पोलीस आयुक्तांना निवेदन देऊन आरोपीला तातडीने अटक करावी, अशी मागणी करण्यात आली होती.
या प्रकरणात लक्ष्मी आनंद कांबळे (रा. पाटील गल्ली, खासबाग, बेळगाव) यांनी 25 ऑक्टोबर 2025 रोजी शहापूर पोलीस ठाण्यात तक्रार दाखल केली होती.
पोलिसांचा सखोल तपास — शेवटी अटक.
तक्रार दाखल झाल्यानंतर शहापूर पोलिसांनी या भामट्याचा शोध सुरू केला होता.
तांत्रिक तपास, मोबाईल लोकेशन आणि गोपनीय माहितीच्या आधारे पोलिसांनी 4 नोव्हेंबर 2025 रोजी बाबासाहेब कोळेकर याला ताब्यात घेतले.
सध्या पोलिस त्याच्याकडून चौकशी करत असून, या प्रकरणात आणखी कोणाचा सहभाग आहे का, याचा तपास सुरू आहे.
महिलांसाठी धडा.
घरबसल्या रोजगाराचे आकर्षक आमिष दाखवून महिलांची फसवणूक करणाऱ्या अशा टोळ्यांचा पर्दाफाश होणे आवश्यक आहे, असे नागरिकांकडून सांगण्यात येत आहे.
पोलिसांनी सर्व महिलांना “अशा ऑनलाईन किंवा गृहोद्योगाच्या जाहिरातींना बळी न पडण्याचा” सल्ला दिला आहे.
ಮನೆಯಲ್ಲೆ ಕುತು ಉದ್ಯೋಗದ ಆಮಿಷ ತೋರಿಸಿ 2 ಕೋಟಿ ರೂಪಾಯಿಗಳ ವಂಚನೆ! ವಂಚನೆ ಮಾಡಿದ ಪಂಡರಪುರದ ಆರೋಪಿ ಬೆಳಗಾವಿ ಪೊಲೀಸರ ಬಲೆಗೆ!
ಬೆಳಗಾವಿ (ತಾ. 5 ನವೆಂಬರ್) : ಮನೆಯಿಂದಲೇ ಅಗರ್ಬತ್ತಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ ಬೆಳಗಾವಿಯ ನೂರಾರು ಮಹಿಳೆಯರನ್ನು 2 ಕೋಟಿ ರೂಪಾಯಿಗಳಷ್ಟು ವಂಚಿಸಿದ ಆರೋಪಿಗಳನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಳಗಾವಿ ನಗರದಲ್ಲಿ ಭಾರೀ ಚರ್ಚಯ ವಿಷಯ ವಾಗಿತ್ತು.
ಬಂಧಿತನ ಹೆಸರು —
ಬಾಬಾಸಾಹೇಬ ಲಕ್ಷ್ಮಣ ಕೊಹೇಕರ್ (ವಯಸ್ಸು 35, ಸಾ. ಜಾಲೋಳಿ, ತಾ. ಪಂಡರಪುರ, ಸದ್ಯ ಪೂರ್ಸಂಘಿ, ಪುಣೆ) ಎಂದು ಗುರುತಿಸಲಾಗಿದೆ.
ಅವನು “ಬಿ.ಎಂ. ಗ್ರೂಪ್ ಮಹಿಳಾ ಗೃಹೋದ್ಯೋಗ ಸಂಘ” ಎಂಬ ಹೆಸರಿನಲ್ಲಿ ಒಂದು ನಕಲಿ ಗೃಹೋದ್ಯೋಗ ಸಂಸ್ಥೆ ಪ್ರಾರಂಭಿಸಿ, ಮಹಿಳೆಯರಿಗೆ ಅಗರ್ಬತ್ತಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ ವಂಚನೆ ಮಾಡಿದ್ದ.
‘ಸೆಕ್ಯುರಿಟಿ ಅಮೌಂಟ್’ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ವಸೂಲಿ.
ಕೊಹೇಕರ್ ಪ್ರತಿ ಮಹಿಳೆಯಿಂದ ₹2,500 ರೂಪಾಯಿ ‘ಸೆಕ್ಯುರಿಟಿ ಅಮೌಂಟ್’ ರೂಪದಲ್ಲಿ ವಸೂಲಿ ಮಾಡುತ್ತಿದ್ದ. ಈ ರೀತಿಯಾಗಿ ಅವನು ನೂರಾರು ಮಹಿಳೆಯರಿಂದ ಒಟ್ಟು ₹2 ಕೋಟಿ ರೂಪಾಯಿಗಳಷ್ಟು ಮೊತ್ತ ಸಂಗ್ರಹಿಸಿದ. ಹಣ ಸಂಗ್ರಹಿಸಿದ ಕೆಲವು ದಿನಗಳ ಬಳಿಕ ಈ ಆರೋಪಿ ಸ್ಥಳಾಂತರಗೊಂಡು ಕಾಣೆಯಾಗಿದ್ದ.
ಮಹಿಳೆಯರ ಆಕ್ರೋಶ — ಜಿಲ್ಲಾಧಿಕಾರಿ ಕಚೇರಿಗೆ ಮೋರಚಾ.
ಈ ವಂಚನೆಗೆ ವಿರೋಧವಾಗಿ ನೂರಾರು ಪೀಡಿತ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮೋರಚಾ ನಡೆಸಿದರು. ಅವರು ಪೊಲೀಸ್ ಆಯುಕ್ತರಿಗೆ ಮನವಿ ನೀಡಿ, ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಲಕ್ಷ್ಮಿ ಆನಂದ ಕಾಂಬಳೆ (ಸಾ. ಪಾಟೀಲ್ ಗಲ್ಲಿ, ಖಾಸಬಾಗ್, ಬೆಳಗಾವಿ) ಅವರು 25 ಅಕ್ಟೋಬರ್ 2025 ರಂದು ಶಾಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರ ತನಿಖೆ — ಕೊನೆಗೆ ಬಂಧನ.
ದೂರು ದಾಖಲಾಗುತ್ತಿದ್ದಂತೆಯೇ ಶಾಹಾಪುರ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತೀವ್ರ ಶೋಧ ಆರಂಭಿಸಿದರು. ತಾಂತ್ರಿಕ ತನಿಖೆ, ಮೊಬೈಲ್ ಲೊಕೇಷನ್ ಮತ್ತು ಗುಪ್ತ ಮಾಹಿತಿಗಳ ಆಧಾರದ ಮೇಲೆ 4 ನವೆಂಬರ್ 2025 ರಂದು ಬಾಬಾಸಾಹೇಬ ಕೊಳೇಕರ್ರನ್ನು ಬಂಧಿಸಿದರು.
ಪ್ರಸ್ತುತ ಪೊಲೀಸರು ಅವನಿಂದ ವಿಚಾರಣೆ ನಡೆಸುತ್ತಿದ್ದು, ಈ ವಂಚನೆಗೆ ಇನ್ನೂ ಯಾರಾದರೂ ಸಂಬಂಧಿತರು ಇದಾರೆ ಎಂಬುದರ ತನಿಖೆ ಮುಂದುವರಿದಿದೆ.
ಮಹಿಳೆಯರಿಗೆ ಪಾಠ.
ಮನೆಯಲ್ಲೇ ಉದ್ಯೋಗ ನೀಡುವುದಾಗಿ ಹೇಳಿ ಮಹಿಳೆಯರನ್ನು ವಂಚಿಸುವ ಇಂತಹ ಮಾಫಿಯಾ ತಂಡಗಳನ್ನು ಪತ್ತೆಹಚ್ಚಿ ಶಿಕ್ಷೆ ನೀಡುವುದು ಅಗತ್ಯವಾಗಿದೆ ಎಂದು ನಾಗರಿಕರು ಹೇಳಿದ್ದಾರೆ.
ಪೊಲೀಸರು ಎಲ್ಲಾ ಮಹಿಳೆಯರಿಗೂ “ಇಂತಹ ಆನ್ಲೈನ್ ಅಥವಾ ಗೃಹೋದ್ಯೋಗದ ಆಕರ್ಷಕ ಜಾಹೀರಾತುಗಳಿಗೆ ಬಲಿಯಾಗಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ.


