मराठा लाईट इन्फंट्री रेजिमेंटकडून माजी सैनिकांसाठी सुवर्णसंधी — बेळगाव येथे डीएससी एनसीओ भरती रॅली.
बेळगाव : देशसेवेची संधी पुन्हा मिळवू इच्छिणाऱ्या मराठा लाईट इन्फंट्री रेजिमेंटच्या माजी सैनिकांसाठी एक सुवर्णसंधी उपलब्ध झाली आहे. मराठा लाईट इन्फंट्री रेजिमेंट केंद्र (MLIRC), बेळगाव येथे डीएससी (Defence Security Corps) एनसीओ भरती रॅली आयोजित करण्यात आली आहे. ही रॅली १७ ते १८ नोव्हेंबर २०२५ दरम्यान पार पडणार असून, फक्त मराठा लाईट इन्फंट्री रेजिमेंटचे माजी सैनिक (Ex-Servicemen of Regular Army/TA) यांच्यासाठीच ही भरती खुली आहे.
या भरती रॅलीमध्ये सोल्जर जनरल ड्युटी (GD) आणि सोल्जर क्लर्क (SD) या दोन पदांसाठी पात्र उमेदवारांची निवड केली जाणार आहे.
🔹 पात्रतेच्या अटी
उमेदवार फक्त मराठा लाईट इन्फंट्री रेजिमेंटचे माजी सैनिक असावेत.
उमेदवारांचे चरित्र ‘Exemplary’ किंवा ‘Very Good’ असणे आवश्यक आहे.
शेवटच्या पाच वर्षांत Red Ink Entry नसावी.
किमान ५ वर्षांची सेवा पूर्ण केलेली असावी.
🔹 पुर्ननोंदणीचा कालावधी
सोल्जर GD साठी: सेवानिवृत्तीनंतर २ वर्षांच्या आत.
सोल्जर क्लर्कसाठी: सेवानिवृत्तीनंतर ५ वर्षांच्या आत.
🔹 शैक्षणिक पात्रता
उमेदवारांनी मॅट्रिक किंवा त्यापुढील शिक्षण घेतलेले असावे.
नॉन-मॅट्रिक उमेदवारांसाठी ACE-III प्रमाणपत्र मान्य राहील.
🔹 वैद्यकीय श्रेणी
उमेदवारांची Medical Category SHAPE-I असणे आवश्यक आहे.
🔹 वयोमर्यादा
सोल्जर GD साठी: वय ४६ वर्षांखाली.
सोल्जर क्लर्कसाठी: वय ४८ वर्षांखाली.
🔹 आवश्यक कागदपत्रे
उमेदवारांनी खालील मूळ कागदपत्रांसह व प्रतींसह उपस्थित राहणे आवश्यक आहे :
डिस्चार्ज बुक
सर्व शैक्षणिक प्रमाणपत्रे
जातीचा दाखला
राहिवासी दाखला
चारित्र्य प्रमाणपत्र
कौटुंबिक फोटो
आर्मी ग्रुप इन्शुरन्स प्रमाणपत्र
१५ पासपोर्ट आकाराचे फोटो
पोलिस सत्यापन प्रमाणपत्र (Police Verification Certificate)
PPO (Pension Payment Order)
TA कर्मचाऱ्यांसाठी आवश्यक प्रमाणपत्रे
🔹 रॅलीचे ठिकाण व वेळ
दिनांक: १७ ते १८ नोव्हेंबर २०२५
वेळ: सकाळी ८ वाजता (0800 hrs) उपस्थित राहणे आवश्यक
स्थळ: मराठा लाईट इन्फंट्री रेजिमेंट सेंटर (MLIRC), बेळगाव
🔸 सूचना
पात्र माजी सैनिकांनी सर्व आवश्यक कागदपत्रांसह १७ नोव्हेंबर रोजी सकाळी ८ वाजता MLIRC, बेळगाव येथे उपस्थित राहावे. कोणत्याही कारणास्तव उशीर झाल्यास प्रवेश दिला जाणार नाही.
ही भरती रॅली माजी सैनिकांसाठी पुन्हा एकदा देशसेवेच्या क्षेत्रात योगदान देण्याची उत्कृष्ट संधी ठरणार आहे. मराठा लाईट इन्फंट्री रेजिमेंटच्या माजी जवानांनी या सुवर्णसंधीचा लाभ घ्यावा, असे आवाहन रेजिमेंट प्रशासनाने केले आहे.
ಮರಾಠಾ ಲೈಟ್ ಇಸ್ಟ್ಯಾಂಟ್ರಿ ರೆಜಿಮೆಂಟ್ನಿಂದ ತನ್ನ ಮಾಜಿ ಸೈನಿಕರಿಗೆ ಸುವರ್ಣಾವಕಾಶ – ಬೆಳಗಾವಿಯಲ್ಲಿ ಡಿಎಸ್ಎಸಿ ಎನ್ಸಿಓ ನೇಮಕಾತಿ ರ್ಯಾಲಿ
ಬೆಳಗಾವಿ : ದೇಶ ಸೇವೆಯ ಅವಕಾಶವನ್ನು ಮತ್ತೊಮ್ಮೆ ಪಡೆಯಲು ಬಯಸುವ ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನ ಮಾಜಿ ಸೈನಿಕರಿಗೆ ಸುವರ್ಣಾವಕಾಶ ಒದಗಿದೆ. ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ ಸೆಂಟರ್ (MLIRC), ಬೆಳಗಾವಿಯಲ್ಲಿ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (DSC) ಎನ್ಸಿಓ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ. ಈ ರ್ಯಾಲಿ 2025ರ ನವೆಂಬರ್ 17 ಹಾಗೂ 18 ರಂದು ನಡೆಯಲಿದ್ದು, ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನ ಮಾಜಿ ಸೈನಿಕರಿಗೆ ಮಾತ್ರ (Ex-Servicemen of Regular Army/TA) ಅವಕಾಶವಿದೆ.
ಈ ನೇಮಕಾತಿ ರ್ಯಾಲಿಯಲ್ಲಿ ಸೊಲ್ಜರ್ ಜನರಲ್ ಡ್ಯೂಟಿ (GD) ಹಾಗೂ ಸೊಲ್ಜರ್ ಕ್ಲರ್ಕ್ (SD) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
🔹 ಅರ್ಹತಾ ನಿಯಮಗಳು
ಅಭ್ಯರ್ಥಿಗಳು ಕಡ್ಡಾಯವಾಗಿ ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನ ಮಾಜಿ ಸೈನಿಕರು ಆಗಿರಬೇಕು.
ಅಭ್ಯರ್ಥಿಯ ಚರಿತ್ರೆ ‘Exemplary’ ಅಥವಾ ‘Very Good’ ಆಗಿರಬೇಕು.
ಕಳೆದ ಐದು ವರ್ಷಗಳಲ್ಲಿ Red Ink Entry ಇರಬಾರದು.
ಹಿಂದೆ ಕನಿಷ್ಠ 5 ವರ್ಷಗಳ ಸೇವೆ ಪೂರ್ಣಗೊಂಡಿರಬೇಕು.
🔹 ಪುನಃ ನೋಂದಣಿಯ ಅವಧಿ
ಸೊಲ್ಜರ್ GD ಗಾಗಿ: ನಿವೃತ್ತಿಯಾದ ದಿನಾಂಕದಿಂದ 2 ವರ್ಷಗಳ ಒಳಗೆ.
ಸೊಲ್ಜರ್ ಕ್ಲರ್ಕ್ ಗಾಗಿ: ನಿವೃತ್ತಿಯಾದ ದಿನಾಂಕದಿಂದ 5 ವರ್ಷಗಳ ಒಳಗೆ.
🔹 ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮ್ಯಾಟ್ರಿಕ್ ಅಥವಾ ಅದಕ್ಕಿಂತ ಮೇಲಿನ ವಿದ್ಯಾರ್ಹತೆ ಹೊಂದಿರಬೇಕು.
ನಾನ್-ಮ್ಯಾಟ್ರಿಕ್ ಅಭ್ಯರ್ಥಿಗಳಿಗೆ ACE-III ಪ್ರಮಾಣಪತ್ರ ಮಾನ್ಯವಾಗುತ್ತದೆ.
🔹 ವೈದ್ಯಕೀಯ ವರ್ಗ
ಅಭ್ಯರ್ಥಿಯ Medical Category SHAPE-I ಆಗಿರಬೇಕು.
🔹 ವಯೋಮಿತಿ
ಸೊಲ್ಜರ್ GD ಗಾಗಿ: 46 ವರ್ಷಕ್ಕಿಂತ ಕಡಿಮೆ ವಯಸ್ಸು.
ಸೊಲ್ಜರ್ ಕ್ಲರ್ಕ್ ಗಾಗಿ: 48 ವರ್ಷಕ್ಕಿಂತ ಕಡಿಮೆ ವಯಸ್ಸು.
🔹 ಅವಶ್ಯಕ ದಾಖಲೆಗಳು
ಅಭ್ಯರ್ಥಿಗಳು ಕೆಳಗಿನ ಮೂಲ ದಾಖಲೆಗಳು ಹಾಗೂ ಪ್ರತಿಗಳೊಂದಿಗೆ ಹಾಜರಾಗಬೇಕು:
ಡಿಸ್ಚಾರ್ಜ್ ಬುಕ್
ಎಲ್ಲಾ ವಿದ್ಯಾರ್ಹತಾ ಪ್ರಮಾಣಪತ್ರಗಳು
ಜಾತಿ ಪ್ರಮಾಣಪತ್ರ
ನಿವಾಸ ಪ್ರಮಾಣಪತ್ರ
ಚರಿತ್ರೆ ಪ್ರಮಾಣಪತ್ರ
ಕುಟುಂಬದ ಫೋಟೋ
ಆರ್ಮಿ ಗ್ರೂಪ್ ಇನ್ಶುರನ್ಸ್ ಪ್ರಮಾಣಪತ್ರ
15 ಪಾಸ್ಪೋರ್ಟ್ ಗಾತ್ರದ ಫೋಟೋಗಳು
ಪೊಲೀಸ್ ವೆರಿಫಿಕೇಶನ್ ಪ್ರಮಾಣಪತ್ರ (PVC)
PPO (Pension Payment Order)
TA ಸಿಬ್ಬಂದಿಗೆ ಅಗತ್ಯವಾದ ದಾಖಲೆಗಳು
🔹 ರ್ಯಾಲಿಯ ಸ್ಥಳ ಹಾಗೂ ಸಮಯ
ದಿನಾಂಕ: 17 ರಿಂದ 18 ನವೆಂಬರ್ 2025
ಸಮಯ: ಬೆಳಿಗ್ಗೆ 8 ಗಂಟೆಗೆ (0800 hrs) ಹಾಜರಾಗುವುದು ಕಡ್ಡಾಯ
ಸ್ಥಳ: ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ ಸೆಂಟರ್ (MLIRC), ಬೆಳಗಾವಿ
🔸 ಸೂಚನೆ
ಅರ್ಹರಾದ ಮಾಜಿ ಸೈನಿಕರು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ 17 ನವೆಂಬರ್ ಬೆಳಿಗ್ಗೆ 8 ಗಂಟೆಗೆ MLIRC, ಬೆಳಗಾವಿಯಲ್ಲಿ ಹಾಜರಾಗಬೇಕು. ಯಾವುದೇ ಕಾರಣಕ್ಕೂ ತಡವಾದ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ.
ಈ ನೇಮಕಾತಿ ರ್ಯಾಲಿ ಮಾಜಿ ಸೈನಿಕರಿಗೆ ಮತ್ತೆ ದೇಶಸೇವೆಯಲ್ಲಿ ಭಾಗಿಯಾಗುವ ಅಪೂರ್ವ ಅವಕಾಶ ನೀಡುತ್ತದೆ. ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ ಆಡಳಿತವು ಎಲ್ಲಾ ಮಾಜಿ ಸೈನಿಕರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳುವಂತೆ ಕೋರಿದೆ.



