आंबोळी प्राथमिक शाळेच्या दुरुस्ती व रंगरंगोटीकरिता आमदार विठ्ठल हलगेकर यांना ग्रामस्थांचे निवेदन.
खानापूर : खानापूर तालुक्यातील प्राथमिक मराठी शाळा, आंबोळी ही अनेक वर्षांपासून जीर्ण अवस्थेत असून, शाळेच्या इमारतीची दुरुस्ती, रंगरंगोटी तसेच इतर आवश्यक कामांसाठी निधीची तातडीची गरज निर्माण झाली आहे. या पार्श्वभूमीवर शाळा सुधारणा समिती (एस.डी.एम.सी.) सदस्य, माजी ग्रामपंचायत सदस्य आणि ग्रामस्थांनी खानापूरचे आमदार श्री. विठ्ठल हलगेकर यांची भेट घेऊन निवेदन सादर केले.
या भेटीदरम्यान ग्रामस्थांनी आमदार हलगेकर यांना शाळेची सद्यस्थिती सविस्तरपणे सांगून, विद्यार्थ्यांच्या सुरक्षिततेसाठी आणि शैक्षणिक वातावरण सुधारण्यासाठी तातडीने निधी मंजूर करावा, अशी मागणी केली.
निवेदन स्वीकृत करताना आमदार विठ्ठल हलगेकर यांनी आंबोळी शाळेसाठी आवश्यक ते अनुदान लवकरात लवकर मंजूर करून देण्यात येईल, अशी ग्वाही दिली. त्यांनी शैक्षणिक सुविधा सुधारण्यासाठी शासनस्तरावर पाठपुरावा करण्याचे आश्वासन दिले.
या प्रसंगी माजी ग्रामपंचायत सदस्य शंकर प. शास्त्री, तसेच शाळा सुधारणा समितीचे सदस्य अर्जुन अप्पी नाईक, विष्णू रा. चोर्लेकर, अरुण द. पाटील, सागर ज. नाईक, किरण बा. नाईक, दीपक शास्त्री, बाळू प्र. नाईक, संतोष नाईक, तानाजी नाईक, नारायण म. नाईक, मनोहर शास्त्री, तानाजी शास्त्री, रामलिंग नाईक, राजू पाटील, अशोक नाईक, सुरेश शास्त्री आदी ग्रामस्थ उपस्थित होते.
ग्रामस्थांनी आमदारांच्या सकारात्मक प्रतिसादाबद्दल समाधान व्यक्त केले असून, लवकरच शाळेच्या दुरुस्तीचे काम सुरू होण्याची अपेक्षा व्यक्त केली आहे.
ಆಂಬೋಳಿ ಪ್ರಾಥಮಿಕ ಶಾಲೆಯ ದುರಸ್ತಿ ಹಾಗೂ ಬಣ್ಣಹಚ್ಚುವ ಕೆಲಸಕ್ಕೆ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಗ್ರಾಮಸ್ಥರ ಮನವಿ
ಖಾನಾಪುರ: ಖಾನಾಪುರ ತಾಲ್ಲೂಕಿನ ಆಂಬೋಳಿ ಗ್ರಾಮದ ಸರಕಾರಿ ಮರಾಠಿ ಪ್ರಾಥಮಿಕ ಶಾಲೆ ಹಲವು ವರ್ಷಗಳಿಂದ ಜೀರ್ಣಾವಸ್ಥೆಯಲ್ಲಿ ಇದೆ. ಶಾಲಾ ಕಟ್ಟಡದ ದುರಸ್ತಿ, ಬಣ್ಣಹಚ್ಚುವಿಕೆ ಹಾಗೂ ಇತರೆ ಅಗತ್ಯ ಕಾಮಗಾರಿಗಳಿಗೆ ತುರ್ತು ಅನುದಾನದ ಅವಶ್ಯಕತೆ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿ (ಎಸ್.ಡಿ.ಎಂ.ಸಿ) ಸದಸ್ಯರು, ಮಾಜಿ ಗ್ರಾಮಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಖಾನಾಪುರ ತಾಲೂಕಿನ ಶಾಸಕ ಶ್ರೀ ವಿಠ್ಠಲ ಹಲಗೇಕರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಭೇಟಿಯ ವೇಳೆ ಗ್ರಾಮಸ್ಥರು ಶಾಸಕರಿಗೆ ಶಾಲೆಯ ಹಾಲಿ ಸ್ಥಿತಿಯನ್ನು ವಿವರವಾಗಿ ತಿಳಿಸಿ, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶೈಕ್ಷಣಿಕ ವಾತಾವರಣ ಸುಧಾರಿಸಲು ತಕ್ಷಣ ಅನುದಾನ ಮಂಜೂರು ಮಾಡುವಂತೆ ವಿನಂತಿಸಿದರು.
ಮನವಿ ಸ್ವೀಕರಿಸಿದ ಶಾಸಕ ವಿಠ್ಠಲ ಹಲಗೇಕರ ಅವರು ಆಂಬೋಳಿ ಶಾಲೆಯ ದುರಸ್ತಿ ಹಾಗೂ ಬಣ್ಣಹಚ್ಚುವ ಕೆಲಸಕ್ಕೆ ಅಗತ್ಯ ಅನುದಾನವನ್ನು ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಶಿಕ್ಷಣ ಸೌಲಭ್ಯಗಳ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ತಾವು ಕ್ರಮ ಕೈಗೊಳ್ಳುವೆವು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮಪಂಚಾಯತ್ ಸದಸ್ಯ ಶಂಕರ ಪಿ. ಶಾಸ್ತ್ರಿ, ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಅರ್ಜುನ್ ಅಪ್ಪಿ ನಾಯಕ್, ವಿಷ್ಣು ರಾ. ಚೋರಲೆಕರ, ಅರುಣ ದ. ಪಾಟೀಲ, ಸಾಗರ್ ಜ. ನಾಯಕ್, ಕಿರಣ ಬಾ. ನಾಯಕ್, ದೀಪಕ್ ಶಾಸ್ತ್ರಿ, ಬಾಲು ಪ್ರ. ನಾಯಕ್, ಸಂತೋಷ ನಾಯಕ್, ತಾನಾಜಿ ನಾಯಕ್, ನಾರಾಯಣ ಮ. ನಾಯಕ್, ಮನೋಹರ ಶಾಸ್ತ್ರಿ, ತಾನಾಜಿ ಶಾಸ್ತ್ರಿ, ರಾಮಲಿಂಗ ನಾಯಕ್, ರಾಜು ಪಾಟೀಲ, ಅಶೋಕ್ ನಾಯಕ್, ಸುರೇಶ ಶಾಸ್ತ್ರಿ ಮುಂತಾದವರು ಹಾಜರಿದ್ದರು.
ಗ್ರಾಮಸ್ಥರು ಶಾಸಕರ ಸಕಾರಾತ್ಮಕ ಪ್ರತಿಕ್ರಿಯೆಗೆ ತೃಪ್ತಿ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಶಾಲೆಯ ದುರಸ್ತಿ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

