मुंबईत दिवसाढवळ्या प्रेयसीचा गळा चिरून तरुणाची आत्महत्या; काळाचौकी परिसरात खळबळ.
मुंबई (ता. 24) : प्रेयसीसोबतच्या ब्रेकअपमुळे संतापलेल्या 24 वर्षीय बेरोजगार तरुणाने दिवसाढवळ्या भररस्त्यात आपल्या प्रेयसीचा गळा चिरून तिच्यावर चाकूने वार केले. या भयानक हल्ल्यात तरुणीचा मृत्यू झाला असून, त्यानंतर आरोपी तरुणाने स्वतःचाही गळा चिरून आत्महत्या केली. ही धक्कादायक घटना शुक्रवारी सकाळी काळाचौकी परिसरातील दत्ताराम लाड मार्गावर घडली असून, परिसरात मोठी खळबळ उडाली आहे. घटनेनंतर परिसरात पोलिसांचा फौजफाटा तैनात करण्यात आला आहे.
मिळालेल्या माहितीनुसार, मृत तरुणाचे नाव सोनू बरई (वय 24) असून, मृत तरुणीचे नाव मनीषा यादव (वय 24) असे आहे. दोघेही काळाचौकी पोलीस स्टेशनपासून चिंचपोकळी स्टेशनकडे चालत जात असताना अचानक सोनूने मनीषावर चाकूने हल्ला केला. जीव वाचवण्यासाठी मनीषा जवळील प्रसूती रुग्णालयात पळून गेली, मात्र आरोपी तिच्या मागोमाग आत गेला आणि तिच्यावर अनेक वार केले.
नर्सिंग होममधील कर्मचारी व स्थानिकांनी त्याला थांबवण्याचा प्रयत्न केला, पण त्याच क्षणी सोनूने स्वतःचाही गळा चिरून आत्महत्या करण्याचा प्रयत्न केला. गंभीर जखमी अवस्थेत दोघांनाही तातडीने परळ येथील केईएम रुग्णालयात दाखल करण्यात आले, मात्र उपचारादरम्यान दोघांचाही मृत्यू झाला.
काळाचौकी पोलिसांनी दिलेल्या माहितीनुसार, प्राथमिक तपासात असे समोर आले आहे की, सोनू आणि मनीषा हे शेजारी राहत होते आणि काही काळापासून प्रेमसंबंधात होते. परंतु अलीकडेच त्यांचे ब्रेकअप झाले होते. मुलीचे इतर कुणासोबत संबंध असल्याचा संशय सोनूला होता. याच कारणावरून शुक्रवारी सकाळी त्यांच्यात वाद झाला आणि त्यातून ही दुर्दैवी घटना घडली.
या प्रकारामुळे काळाचौकी परिसरात मोठी खळबळ उडाली असून, पोलिसांनी घटनास्थळी धाव घेत पुढील तपास सुरू केला आहे.
ಮುಂಬೈನಲ್ಲಿ ಮಧ್ಯಾಹ್ನ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕತ್ತು ಚೀರಿ ಕೊಲೆ; ಹಲ್ಲೆ ನಡೆಸಿದ ಯುವಕನೂ ಆತ್ಮಹತ್ಯೆಗೆ ಶರಣು.
ಮುಂಬೈ (ವೃತ ಸಂಸ್ಥೆ): ಪ್ರೇಮ ಸಂಬಂಧದಲ್ಲಿ ಬ್ರೇಕಪ್ನಿಂದ ಬೇಸತ್ತ 24 ವರ್ಷದ ನಿರುದ್ಯೋಗಿ ಯುವಕನೊಬ್ಬನು ಮಧ್ಯಾಹ್ನದ ಹೊತ್ತಿನಲ್ಲಿ ರಸ್ತೆಯ ಮಧ್ಯೆಯೇ ತನ್ನ ಪ್ರೇಯಸಿಯ ಕತ್ತು ಚೀರಿ ಕೊಲೆಮಾಡಿ, ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹೃದಯದ್ರಾವಕ ಘಟನೆ ಮುಂಬೈನ ಕಾಳಾಚೌಕಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸ್ಥಳದಲ್ಲಿ ಭಾರೀ ಬಂದೋಬಸ್ತ್ ಒದಗಿಸಿದ್ದಾರೆ.
ಮಾಹಿತಿಯ ಪ್ರಕಾರ, ಹಲ್ಲೆ ನಡೆಸಿದ ಯುವಕ ಸೋನು ಬರಇ ಮತ್ತು ಯುವತಿ ಮನೀಷಾ ಯಾದವ್ (24) ಎಂಬವರ ನಡುವೆ ಕೆಲವು ಕಾಲದಿಂದ ಪ್ರೇಮಸಂಬಂಧ ಇತ್ತು. ಆದರೆ ಇತ್ತೀಚೆಗೆ ಅವರ ಬ್ರೇಕಪ್ ಆಗಿತ್ತು. ಮನೀಷಾ ಮತ್ತೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಸೋನು ಬೇಸತ್ತುಕೊಂಡಿದ್ದ.
ಶುಕ್ರವಾರ ಬೆಳಿಗ್ಗೆ ಸುಮಾರು 10.30 ಗಂಟೆಗೆ, ಚಿಂಚಪೋಖಳಿ ಬಳಿಯ ದತ್ತಾರಾಮ ಲಾಡ್ ರಸ್ತೆಯಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಸೋನು ಆಕಸ್ಮಿಕವಾಗಿ ಮನೀಷಾ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಆರಂಭಿಸಿದ. ಜೀವ ಉಳಿಸಿಕೊಳ್ಳಲು ಮನೀಷಾ ಹತ್ತಿರದ ನರ್ಸಿಂಗ್ ಹೋಮ್ಗೆ ಓಡಿದರೂ, ಸೋನು ಆಕೆಯ ಹಿಂದೆ ಒಳಗೆ ನುಗ್ಗಿ ಅನೇಕ ಬಾರಿ ಚಾಕುವಿನಿಂದ ಇರಿದ.
ಸ್ಥಳೀಯರು ಹಾಗೂ ನರ್ಸಿಂಗ್ ಹೋಮ್ ಸಿಬ್ಬಂದಿ ಮಧ್ಯಪ್ರವೇಶಿಸಲು ಯತ್ನಿಸಿದಾಗ, ಸೋನು ತಾನೇ ತನ್ನ ಕತ್ತು ಚೀರಿ ಆತ್ಮಹತ್ಯೆಗೆ ಯತ್ನಿಸಿದ. ತಕ್ಷಣ ಇಬ್ಬರನ್ನೂ ಪರೇಲ್ನ ಕೆ.ಇ.ಎಂ. ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಯು ಪ್ರೇಮಸಂಬಂಧದ ಕಲಹದಿಂದ ಸಂಭವಿಸಿದೆ. ಸೋನು ತನ್ನ ಪ್ರೇಯಸಿಯನ್ನೇ ಭೇಟಿ ಮಾಡಲು ಕರೆಯಿಸಿಕೊಂಡು, ವಾಗ್ವಾದದ ನಡುವೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಕಾಳಾಚೌಕಿ ಪೊಲೀಸ್ ಠಾಣೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದೆ.

