मळवाड (ता. खानापूर) येथील ग्रामपाणी प्रश्नावर यशस्वी तोडगा!
खानापूर (ता.22) : मळवाड (ता. खानापूर) गावातील ग्रामपाणी योजनेतील पाणीटंचाईच्या गंभीर प्रश्नाला अखेर यशस्वी तोडगा निघाला आहे. काही दिवसांपूर्वी गावातील मान्यवरांनी खानापूर तालुक्याचे माननीय आमदार श्री. विठ्ठल हलगेकर यांची भेट घेऊन पाणी समस्येबाबत निवेदन सादर केले होते.

या भेटीनंतर आमदार हलगेकर यांनी तालुका पंचायतीचे कार्यकारी अधिकारी (EO) यांना गावाची प्रत्यक्ष भेट देऊन परिस्थितीचा आढावा घेण्याचे आदेश दिले होते. या अनुषंगाने अधिकाऱ्यांनी गावाला भेट देत पाण्याच्या उपलब्धतेची तपासणी करून नवीन बोअरवेल खणण्याचा सल्ला दिला.
गावकऱ्यांच्या एकजुटीने, व मान्यवरांच्या पुढाकाराने आणि आमदारांच्या पाठपुराव्यामुळे अखेर मळवाड ग्रामपाणी योजनेसाठी नवीन पाणी स्रोत उपलब्ध होणार आहे. या उपक्रमामुळे ग्रामस्थांच्या चेहऱ्यावर आनंद फुलला असून पाण्यासाठीचा दीर्घ संघर्ष अखेर यशस्वी होणार आहे.
या यशामागे गावातील सर्व मान्यवर, नागरिक आणि ज्येष्ठ मंडळींचे प्रयत्न महत्वाचे ठरले. “मळवाड गावचा एकत्र प्रयत्न — पाण्यासाठीचा संघर्ष झाला यशस्वी!” असे ग्रामस्थांनी समाधानाने म्हटले आहे.
ಮಳವಾಡ (ತಾ. ಖಾನಾಪುರ) ಗ್ರಾಮದ ನೀರಿನ ಸಮಸ್ಯೆಗೆ ಯಶಸ್ವಿ ಪರಿಹಾರ!
ಖಾನಾಪುರ (ತಾ.22): ಮಳವಾಡ (ತಾ. ಖಾನಾಪುರ) ಗ್ರಾಮದ ಗ್ರಾಮ ನೀರಿನ ಯೋಜನೆಯಡಿ ಹಲವು ದಿನಗಳಿಂದ ಎದುರಿಸುತ್ತಿದ್ದ ಗಂಭೀರ ನೀರಿನ ತೊಂದರೆಗೆ ಕೊನೆಗೂ ಯಶಸ್ವಿ ಪರಿಹಾರ ಕಂಡುಬಂದಿದೆ. ಕೆಲವು ದಿನಗಳ ಹಿಂದೆ ಗ್ರಾಮದ ಗಣ್ಯರು ಖಾನಾಪುರ ಕ್ಷೇತ್ರದ ಮಾನ್ಯ ಶಾಸಕ ಶ್ರೀ ವಿಠ್ಠಲ ಹಲಗೆಕರ ಅವರನ್ನು ಭೇಟಿ ಮಾಡಿ ನೀರಿನ ಸಮಸ್ಯೆ ಕುರಿತಾಗಿ ಮನವಿ ಸಲ್ಲಿಸಿದ್ದರು.
ಈ ಮನವಿಯ ನಂತರ ಶಾಸಕರಾದ ಹಲಗೆಕರ ಅವರು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಕುದ್ದು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ವಾಸ್ತವ ಸ್ಥಿತಿ ಪರಿಶೀಲನೆ ಮಾಡಲು ಸೂಚನೆ ನೀಡಿದ್ದರು. ಸೂಚನೆನ್ವಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೊಸ ಬೋರ್ವೆಲ್ ತೋಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಸಲಹೆ ನೀಡಿದರು.
ಗ್ರಾಮಸ್ಥರ ಏಕತೆಯು, ಸ್ಥಳೀಯ ಗಣ್ಯರ ಮುಂದಾಳತ್ವ ಹಾಗೂ ಶಾಸಕರ ತತ್ಕಾಲಿನ ಅನುಸರಣೆ ಇವುಗಳ ಫಲವಾಗಿ ಈಗ ಮಳವಾಡ ಗ್ರಾಮ ನೀರಿನ ಯೋಜನೆಗೆ ಹೊಸ ನೀರಿನ ಮೂಲ ಸಿಗಲಿದ್ದು, ಇದರ ಮೂಲಕ ಗ್ರಾಮಸ್ಥರ ದೀರ್ಘಕಾಲದ ನೀರಿನ ಹೋರಾಟ ಯಶಸ್ವಿಯಾಗಲಿದೆ.
ಈ ಯಶಸ್ಸಿನ ಹಿಂದೆ ಗ್ರಾಮದ ಎಲ್ಲ ಗಣ್ಯರು, ನಾಗರಿಕರು ಹಾಗೂ ಹಿರಿಯರ ಶ್ರಮ ಪ್ರಮುಖವಾಗಿದ್ದು, “ಮಳವಾಡ ಗ್ರಾಮದ ಒಗ್ಗಟ್ಟಿನ ಪ್ರಯತ್ನ — ನೀರಿಗಾಗಿ ನಡೆದ ಹೋರಾಟಕ್ಕೆ ಸಿಕ್ಕಿ ಯಶಸ್ಸು!” ಎಂದು ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

