आमदार विठ्ठल हालगेकर यांचा प्रजापिता ब्रह्माकुमारी ग्लोबल समिटमध्ये सहभाग
माउंट अबू (राजस्थान) : ब्रह्माकुमारी ईश्वरीय विश्वविद्यालय, खानापूर यांच्या वतीने खानापूरचे आमदार व श्री महालक्ष्मी ग्रुपचे संस्थापक अध्यक्ष मा. विठ्ठल हालगेकर यांनी नुकताच राजस्थानमधील माउंट अबू येथील शांतीवन या मुख्यालयात आयोजित “युनिटी अँड ट्रस्ट” (Unity and Trust) या जागतिक समिटमध्ये सहभाग घेतला.
या भव्य प्रजापिता ब्रह्माकुमारीज ईश्वरीय विश्वविद्यालयाच्या जागतिक समिटमध्ये जगभरातील राजकीय नेते, धोरणकर्ते, शिक्षणतज्ज्ञ, पर्यावरण तज्ज्ञ, उद्योगपती, समाजसेवक आणि आध्यात्मिक तत्वज्ञानी अशा पाच हजारांहून अधिक मान्यवरांनी उपस्थित राहून एकत्रितपणे आध्यात्मिकतेच्या माध्यमातून जागतिक आव्हानांवर उपाय शोधण्याचा प्रयत्न केला.
या कार्यक्रमात आमदार विठ्ठल हालगेकर यांनी सहभाग घेत “मानवतेतील एकता, शांती आणि परस्पर विश्वास निर्माण करण्यासाठी आध्यात्मिकतेचे योगदान अनन्यसाधारण आहे” असे मत व्यक्त केले. त्यांनी पुढे सांगितले की, “प्रजापिता ब्रह्माकुमारी संस्थेचे कार्य हे जागतिक परिवर्तनाच्या दिशेने प्रेरणादायी आहे. येथील वातावरणात नम्रता, स्वच्छता, प्रेम, सहकार्य आणि शांतीचा अनुभव मनाला स्पर्श करणारा आहे.”
कार्यक्रमानंतर ब्रह्माकुमारी संस्थेकडून आमदार विठ्ठल हालगेकर यांचा यथोचित सत्कार करण्यात आला. या समिटदरम्यान त्यांनी विविध देशांतील आध्यात्मिक नेते व तज्ज्ञांशी संवाद साधत खानापूरसह संपूर्ण बेळगाव जिल्ह्यातील विकासासाठी सकारात्मक विचारांची देवाणघेवाण केली.
या प्रसंगी श्री महालक्ष्मी ग्रुपचे व्हाईस चेअरमन विठ्ठल करंबळकर, जनरल मॅनेजर तुकाराम हुंद्रे, संचालक चांगप्पा निलजकर, पिडीओ राजाराम हालगेकर, ओमकार बरगांवकर, नागेश घाडी, महादेव शिंदे तसेच बी.के. यशवंत घाडी यांनीही सहभागी होऊन विविध सत्रांमध्ये सहभाग घेतला.
या ग्लोबल समिटच्या माध्यमातून “एकता, विश्वास आणि आध्यात्मिक समृद्धी” या मूल्यांचा संदेश देत प्रजापिता ब्रह्माकुमारी विश्वविद्यालयाने जगभरातील समाजजीवनात सकारात्मक परिवर्तनाचा दीप प्रज्वलित केला आहे. याची अनुभूती उपस्थित असलेल्या सर्वांनी घेतली.
ಪ್ರಜಾಪಿತಾ ಬ್ರಹ್ಮಕುಮಾರಿ ಗ್ಲೋಬಲ್ ಸಮಿಟ್ನಲ್ಲಿ ಪಾಲ್ಗೊಂಡ ಶಾಸಕ ವಿಠ್ಠಲ ಹಾಲಗೇಕರ್
ಮೌಂಟ್ ಅಬು (ರಾಜಸ್ಥಾನ): ಖಾನಾಪುರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಖಾನಾಪುರ ತಾಲೂಕಿನ ಶಾಸಕ ಹಾಗೂ ಶ್ರೀ ಮಹಾಲಕ್ಷ್ಮಿ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಮಾನ್ಯ ವಿಠ್ಠಲ್ ಹಾಲಗೇಕರ್ ಅವರು ಇತ್ತೀಚೆಗೆ ರಾಜಸ್ಥಾನದ ಮೌಂಟ್ ಅಬು ಶಾಂತಿವನ್ ಕೇಂದ್ರದಲ್ಲಿ ಆಯೋಜಿಸಲಾದ “ಯುನಿಟಿ ಅಂಡ್ ಟ್ರಸ್ಟ್” (Unity and Trust) ಎಂಬ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದರು.
ಈ ಭವ್ಯ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಾಗತಿಕ ಸಮಾವೇಶದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬಂದ ರಾಜಕೀಯ ನಾಯಕರು, ನೀತಿನಿರ್ಧಾರಕರು, ಶಿಕ್ಷಣ ತಜ್ಞರು, ಪರಿಸರ ತಜ್ಞರು, ಕೈಗಾರಿಕೋದ್ಯಮಿಗಳು, ಸಮಾಜಸೇವಕರು ಹಾಗೂ ಆಧ್ಯಾತ್ಮಿಕ ತತ್ತ್ವಜ್ಞಾನಿಗಳು ಸೇರಿ ಐದು ಸಾವಿರಕ್ಕೂ ಹೆಚ್ಚು ಗಣ್ಯರು ಹಾಜರಿದ್ದರು. ಎಲ್ಲರೂ ಒಟ್ಟಾಗಿ ಆಧ್ಯಾತ್ಮಿಕತೆಯ ಮೂಲಕ ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಠ್ಠಲ್ ಹಾಲಗೇಕರ್ ಅವರು — “ಮಾನವತೆಯಲ್ಲಿ ಏಕತೆ, ಶಾಂತಿ ಮತ್ತು ಪರಸ್ಪರ ನಂಬಿಕೆ ನಿರ್ಮಿಸಲು ಆಧ್ಯಾತ್ಮಿಕತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮುಂದುವರೆದು, “ಪ್ರಜಾಪಿತಾ ಬ್ರಹ್ಮಕುಮಾರಿ ಸಂಸ್ಥೆಯ ಸೇವಾ ಚಟುವಟಿಕೆಗಳು ಜಾಗತಿಕ ಪರಿವರ್ತನೆಗೆ ಪ್ರೇರಣಾದಾಯಕವಾಗಿವೆ. ಇಲ್ಲಿ ಅನುಭವವಾಗುವ ವಿನಯತೆ, ಶುದ್ಧತೆ, ಪ್ರೀತಿ, ಸಹಕಾರ ಮತ್ತು ಶಾಂತಿಯ ವಾತಾವರಣ ಮನಸಿಗೆ ಸ್ಪರ್ಶಿಸುವಂತಿದೆ,” ಎಂದರು.
ಕಾರ್ಯಕ್ರಮದ ನಂತರ ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಶಾಸಕರ ವಿಠ್ಠಲ್ ಹಾಲಗೇಕರ್ ಇವರಿಗೆ ಗೌರವ ಸನ್ಮಾನ ಮಾಡಲಾಯಿತು. ಸಮಾವೇಶದ ವೇಳೆ ಅವರು ವಿವಿಧ ದೇಶಗಳ ಆಧ್ಯಾತ್ಮಿಕ ನಾಯಕರು ಹಾಗೂ ತಜ್ಞರೊಂದಿಗೆ ಸಂವಾದ ನಡೆಸಿ, ಖಾನಾಪುರ ಮತ್ತು ಸಂಪೂರ್ಣ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಸಕಾರಾತ್ಮಕ ಚಿಂತನೆಗಳ ವಿನಿಮಯ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಗ್ರೂಪ್ನ ಉಪಾಧ್ಯಕ್ಷ ವಿಠ್ಠಲ್ ಕರಂಬಳ್ಕರ್, ಜನರಲ್ ಮ್ಯಾನೇಜರ್ ತುಕಾರಾಮ ಹುಂದ್ರೆ, ನಿರ್ದೇಶಕ ಚಾಂಗಪ್ಪ ನಿಲಜ್ಕರ್, ಪಿಡಿಓ ರಾಜಾರಾಮ ಹಲಗೇಕರ್, ಓಂಕರ ಬರ್ಗಾಂವ್ಕರ್, ನಾಗೇಶ ಘಾಡಿ, ಮಹಾದೇವ ಶಿಂದೆ ಹಾಗೂ ಬಿ.ಕೆ. ಯಶವಂತ ಘಾಡಿ ಅವರು ಸಹ ಉಪಸ್ಥಿತರಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈ ಗ್ಲೋಬಲ್ ಸಮಿಟ್ ಮುಖಾಂತರ “ಏಕತೆ, ನಂಬಿಕೆ ಮತ್ತು ಆಧ್ಯಾತ್ಮಿಕ ಸಮೃದ್ಧಿ” ಎಂಬ ಮೌಲ್ಯಗಳ ಸಂದೇಶವನ್ನು ನೀಡುತ್ತಾ ಪ್ರಜಾಪಿತಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯವು ವಿಶ್ವ ಸಮಾಜ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಯ ದೀಪ ಬೆಳಗಿಸಿದೆ. ಈ ಅನುಭವವನ್ನು ಹಾಜರಿದ್ದವರು ಹೃದಯಂಗಮವಾಗಿ ಅನುಭವಿಸಿದರು.

