बेळगावात राष्ट्रीय स्वयंसेवक संघाचे भव्य पथ संचलन — हजारो स्वयंसेवकांचा उत्स्फूर्त सहभाग.
बेळगाव : राष्ट्रीय स्वयंसेवक संघातर्फे बेळगाव शहरात आज भव्य पथ संचलनाचे आयोजन करण्यात आले. या संचलनात शहरासह परिसरातील हजारो स्वयंसेवकांनी उत्साहपूर्ण सहभाग नोंदवला.
संचलनाची सुरुवात सरदार हायस्कूल मैदानावरून करण्यात आली. पथ संचलनाच्या अग्रभागी सजवलेल्या वाहनावर संघाचे संस्थापक डॉ. केशव बळीराम हेडगेवार आणि द्वितीय सरसंघचालक माधवराव गोळवलकर (गुरुजी) यांच्या प्रतिमा लावण्यात आल्या होत्या.
संचलन मार्गावर सर्वत्र स्वागत कमानी उभारण्यात आल्या होत्या. भगवे ध्वज आणि भगव्या पताका फडकत असल्याने संपूर्ण परिसरात राष्ट्रभावनेचा उत्सवमय माहोल निर्माण झाला होता. संचलन पाहण्यासाठी मोठ्या संख्येने नागरिक रस्त्यांच्या दुतर्फा उभे राहिले होते.
नागरिकांनी “वंदे मातरम”, “जय श्रीराम”, “भारत माता की जय” अशा घोषणा देत स्वयंसेवकांचे स्वागत केले. अनेक ठिकाणी युवक मंडळे आणि स्थानिक नागरिकांनी स्वयंसेवकांवर पुष्पवृष्टी केली.
संचलनातील घोष पथकांनी दिलेल्या प्रभावी आणि शिस्तबद्ध हालचालींनी नागरिकांचे विशेष लक्ष वेधून घेतले. शहरातील विविध मार्गांवरून फिरल्यानंतर या संचलनाची सांगता लिंगराज कॉलेज मैदानावर करण्यात आली.
या भव्य पथ संचलनामुळे बेळगाव शहर राष्ट्रभावना, शिस्त आणि संघटन या मूल्यांनी पुन्हा एकदा दुमदुमून गेले.
ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭವ್ಯ ಪಥಸಂಚಲನ ; ಸಾವಿರಾರು ಸ್ವಯಂಸೇವಕರ ಉತ್ಸಾಹಭರಿತ ಭಾಗವಹಿಸು.
ಬೆಳಗಾವಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಬೆಳಗಾವಿ ನಗರದಲ್ಲಿ ಇಂದು ಭವ್ಯ ಪಥಸಂಚಲನವನ್ನು ಆಯೋಜಿಸಲಾಯಿತು. ನಗರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸಾವಿರಾರು ಸ್ವಯಂಸೇವಕರು ಉತ್ಸಾಹಭರಿತವಾಗಿ ಭಾಗವಹಿಸಿದರು.
ಸಂಚಲನದ ಪ್ರಾರಂಭ ಸರ್ದಾರ್ ಹೈಸ್ಕೂಲ್ ಮೈದಾನದಿಂದ ಮಾಡಲಾಯಿತು. ಪಥಸಂಚಲನದ ಮುಂದೆ ಅಲಂಕೃತ ವಾಹನದಲ್ಲಿ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಳೀರಾಮ ಹೆಡಗೆವಾರ ಹಾಗೂ ದ್ವಿತೀಯ ಸರಸಂಘಚಾಲಕರಾದ ಮಾಧವರಾವ ಗೋಲ್ವಲ್ಕರ್ (ಗುರುಜಿ) ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.
ಸಂಚಲನ ಮಾರ್ಗದಾದ್ಯಂತ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಕೇಸರಿ ಧ್ವಜಗಳು ಮತ್ತು ಪತಾಕೆಗಳು ಹಾರಾಡುತ್ತಿದ್ದು, ಪಥಸಂಚಲನದ ಉದ್ದಕ್ಕೂ ದೇಶಭಕ್ತಿಯ ಉತ್ಸವಮಯ ವಾತಾವರಣದಿಂದ ತುಂಬಿ ತುಳುಕಿತು. ಪಥಸಂಚಲನ ವೀಕ್ಷಿಸಲು ಅನೇಕ ನಾಗರಿಕರು ರಸ್ತೆಯ ದಡಗಳಲ್ಲಿ ನಿಂತಿದ್ದರು.
ನಾಗರಿಕರು “ವಂದೇ ಮಾತರಂ”, “ಜಯ ಶ್ರೀರಾಮ”, “ಭಾರತ ಮಾತಾ ಕಿ ಜಯ” ಎಂದು ಘೋಷಣೆಗಳನ್ನು ಕೂಗಿ ಸ್ವಯಂಸೇವಕರಿಗೆ ಭವ್ಯ ಸ್ವಾಗತ ಕೋರಿದರು. ಹಲವು ಸ್ಥಳಗಳಲ್ಲಿ ಯುವಕ ಮಂಡಳಿಗಳು ಹಾಗೂ ಸ್ಥಳೀಯ ನಾಗರಿಕರು ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿ ಮಾಡಿದರು.
ಸಂಚಲನದ ಘೋಷಪಥಕಗಳ ಶಿಸ್ತುಬದ್ಧ ಹಾಗೂ ಪರಿಣಾಮಕಾರಿ ಚಲನಗಳು ನಾಗರಿಕರ ಗಮನ ಸೆಳೆದವು. ನಗರದ ವಿವಿಧ ಮಾರ್ಗಗಳಿಂದ ಸಂಚರಿಸಿದ ನಂತರ ಪಥಸಂಚಲನದ ಸಮಾರೋಪ ಲಿಂಗರಾಜ ಕಾಲೇಜು ಮೈದಾನದಲ್ಲಿ ನೆರವೇರಿಸಲಾಯಿತು.
ಈ ಭವ್ಯ ಪಥಸಂಚಲನದಿಂದ ಬೆಳಗಾವಿ ನಗರವು ಮತ್ತೆ ಒಮ್ಮೆ ದೇಶಭಕ್ತಿ, ಶಿಸ್ತು ಮತ್ತು ಸಂಘಟನೆ ಎಂಬ ಮೌಲ್ಯಗಳಿಂದ ರಾರಾಜಿಸಿತ್ತು.

