
चापोली शाळेची जीर्ण अवस्था ; विद्यार्थ्यांच्या सुरक्षेसाठी आमदारांकडे तातडीच्या हस्तक्षेपाची मागणी.
खानापूर (प्रतिनिधी) : खानापूर तालुक्यातील चापोली गावातील शासकीय उच्च प्राथमिक शाळेची अवस्था अत्यंत जीर्ण व धोकादायक झाली असून विद्यार्थ्यांचे प्राण धोक्यात आल्याने चिंताग्रस्त पालक, नागरिक व माजी विद्यार्थी संघटनेकडूनआमदार विठ्ठल हलगेकर यांच्याकडे तातडीने हस्तक्षेप करण्याची मागणी केली आहे.
शाळेच्या इमारतीच्या भिंतींना भेगा पडल्या असून प्लास्टर निघाले आहे. छतात मोठ्या प्रमाणात गळती असून मजलेही तुटलेले आहेत. त्यामुळे पावसाळ्यात विद्यार्थ्यांना मोठ्या संकटाचा सामना करावा लागत आहे. अभ्यासाचे वातावरण बिघडून मुलांची उपस्थिती कमी होत असून रोजच्या रोज जीव धोक्यात घालून विद्यार्थी वर्गात बसत आहेत, अशी माहिती पालकांनी दिली.
याबाबत माजी विद्यार्थी संघटना, चापोली यांच्या वतीने आमदार हलगेकर यांच्याकडे पुढील मागण्या करण्यात आल्या आहेत :
- आमदारांनी स्वतः शाळेला भेट देवून प्रत्यक्ष परिस्थितीचा आढावा घ्यावा.
- संबंधित विभागांना तातडीने दुरुस्ती व नूतनीकरणाचे आदेश द्यावेत.
- आवश्यक असल्यास शाळेच्या पुनर्बांधणीसाठी निधी मंजूर करावा.
संघटनेने स्पष्ट इशारा दिला आहे की, जर लवकरच याबाबत सकारात्मक प्रतिसाद मिळाला नाही तर येत्या काही दिवसांत उग्र आंदोलन छेडण्यात येईल.
विद्यार्थ्यांची सुरक्षा हा सर्वोच्च मुद्दा असल्याने नागरिक, पालक व शिक्षक याकडे गांभीर्याने पाहत आहेत. त्यामुळे आता आमदार व प्रशासनाची भूमिका काय राहणार, याकडे सर्वांचे लक्ष लागले आहे.
ಚಾಪೋಲಿ ಊರಿನ ಶಾಲೆಯ ಜೀರ್ಣ ಸ್ಥಿತಿ ; ವಿದ್ಯಾರ್ಥಿಗಳ ಸುರಕ್ಷತೆಗೆ ಶಾಸಕರ ತುರ್ತು ಮಧ್ಯಪ್ರವೇಶದ ಬೇಡಿಕೆ.
ಖಾನಾಪುರ (ವರದಿಗಾರು) : ಖಾನಾಪುರ ತಾಲ್ಲೂಕಿನ ಚಾಪೋಲಿ ಗ್ರಾಮದ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯ ಕಟ್ಟಡ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚಿಂತಿತ ಪೋಷಕರು, ನಾಗರಿಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಜನ ಪ್ರಿಯ ಶಾಸಕ ವಿಠ್ಠಲ ಹಲಗೇಕರ ಅವರ ತುರ್ತು ಮಧ್ಯಪ್ರವೇಶಿಸಿ ಪರಿಸ್ಥಿತಿ ಅವಲೋಕನ ಮಾಡಬೇಕೆಂದು ಕೋರಿ ಮನವಿ ಸಲ್ಲಿಸಲಾಗಿದೆ.
ಶಾಲಾ ಕಟ್ಟಡದ ಗೋಡೆಗಳಿಗೆ ಬಿರುಕು ಬಿದ್ದಿದ್ದು, ಪ್ಲಾಸ್ಟರ್ ಉದುರಿದೆ. ಮೇಲ್ಚಾವಣಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೋರಿಕೆ ಉಂಟಾಗಿದ್ದು, ನೆಲಮಹಡಿಯೂ ಜೀರ್ಣಗೊಂಡಿದೆ. ಇದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಅಧ್ಯಯನ ವಾತಾವರಣ ಹದಗೆಟ್ಟಿದ್ದು, ಹಾಜರಾತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರತಿದಿನವೂ ಜೀವದ ಹಂಗು ಹಾಕಿ ತರಗತಿಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಚಾಪೋಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಸಕ ಹಲಗೇಕರ ಅವರಿಗೆ ಕೆಳಗಿನ ಬೇಡಿಕೆಗಳನ್ನು ಮುಂದಿರಿಸಲಾಗಿದೆ :
- ಶಾಸಕ ಸ್ವತಃ ಶಾಲೆಗೆ ಭೇಟಿ ನೀಡಿ ನೈಜ ಪರಿಸ್ಥಿತಿಯನ್ನು ಪರಿಶೀಲಿಸಬೇಕು.
- ಸಂಬಂಧಿಸಿದ ಇಲಾಖೆಗೆ ತುರ್ತು ದುರಸ್ತಿ ಹಾಗೂ ನವೀಕರಣದ ಆದೇಶ ನೀಡಬೇಕು.
- ಅಗತ್ಯವಿದ್ದಲ್ಲಿ ಶಾಲೆಯ ಪುನರ್ನಿರ್ಮಾಣಕ್ಕಾಗಿ ನಿಧಿ ಮಂಜೂರು ಮಾಡಬೇಕು.
ಹಳೆ ವಿದ್ಯಾರ್ಥಿ ಸಂಘವು ಎಚ್ಚರಿಕೆ ನೀಡಿದ್ದು – ಬೇಡಿಕೆಗಳಿಗೆ ಶೀಘ್ರದಲ್ಲೇ ಸ್ಪಂದನೆ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾದ ಆಂದೋಲನ ಹಮ್ಮಿಕೊಳ್ಳಲಾಗುವುದು.
ವಿದ್ಯಾರ್ಥಿಗಳ ಸುರಕ್ಷತೆ ಅತ್ಯಂತ ಪ್ರಮುಖ ವಿಷಯವಾಗಿರುವುದರಿಂದ ಪೋಷಕರು, ನಾಗರಿಕರು ಹಾಗೂ ಶಿಕ್ಷಕರು ಗಂಭೀರವಾಗಿ ಗಮನ ಹರಿಸುತ್ತಿದ್ದಾರೆ. ಇನ್ನು ಶಾಸಕ ಹಾಗೂ ಆಡಳಿತದ ನಿಲುವು ಏನಾಗಲಿದೆ ಎಂಬುದರತ್ತ ಎಲ್ಲರ ಕಣ್ಣುಗಳು ನೆಟ್ಟಿವೆ.
