
बलात्काराच्या गुन्ह्यातील आरोपीचा तुरुंगातच पार पडला विवाह.
वृत्तसंस्था ; गुन्हेगारांना शिक्षा देण्यासाठी त्यांना कारागृहात बंदिवासात पाठविण्यात येते. मात्र बिहारमधील मधुबनी येथील कारावासाला लग्न मंडपाचे स्वरुप प्राप्त झाले. एका विचित्र प्रकरणात न्यायालयाने दिलेल्या आदेशाचे पालन करण्यासाठी पोलीस प्रशासनाला कारावासात एका आरोपीचे लग्न लावून द्यावे लागले. मोठ्या भावाच्या पत्नीवर लैंगिक अत्याचार करणाऱ्या आरोपीचे पीडितेबरोबर कारावासातच लग्न लावून देण्यात आले. तुरुंग प्रशासनाने या लग्नाची सर्व तयारी केली. पोलीस साक्षीदार तर इतर कैदी वन्हाडी बनले होते.
प्रकरण काय आहे?
लैंगिक अत्याचाराच्या आरोपात तुरुंगात असलेल्या आरोपीने पाटणा उच्च न्यायालयात पीडितेबरोबर लग्न करण्यासाठी जामीन अर्ज दाखल केला होता. त्यानंतर उच्च न्यायालयाने आदेश दिले की, सदर आरोपी पीडितेबरोबर लग्न करतोय का? यावर सत्र न्यायालयाने देखरेख करावी. यानंतर आरोपीने कनिष्ठ न्यायालयात लग्नासाठीची परवानगी मागितली.
कारावास अधीक्षक ओम प्रकाश शांती भूषण यांनी बुधवारी या प्रकरणाची माहिती देताना सांगितले की, न्यायालयाने दिलेल्या आदेशानंतर आरोपीचे तुरुंगाच्या आवारात लग्न लावण्यात आले. यासाठी सर्व तयारी तुरुंग प्रशासनाने केली होती.
आरोपीची बाजू मांडणारे वकील गगन देव यादव यांनी सांगितले की, आरोपीच्या मोठ्या भावाचे 2022 मध्ये निधन झाले. त्यानंतर वहिनी आणि आरोपी हे एकमेकांच्या जवळ आले. मात्र कालांतराने त्यांच्यात कलह झाला. त्यामुळे पीडितेने 29 जून 2024 रोजी तक्रार दाखल केली. यामुळे आरोपीला न्यायालयीन कोठडी सुनावण्यात आली.
यानंतर आरोपीने उच्च न्यायालयात जामिनासाठी अर्ज दाखल केला. आरोपीने पीडित महिलेशी लग्न करण्याची तयारी दर्शवली. त्यानुसार, उच्च न्यायालयाचे न्यायाधीश सय्यद मोहम्मद फझलूल यांनी कनिष्ठ न्यायालयाच्या देखरेखीखाली लग्न पार पाडण्याचे आदेश दिले. त्यानंतर कारावासात हा आगळावेगळा सोहळा पार पडला.
ಜೈಲಲ್ಲೇ ನಡೆದ ಬಲಾತ್ಕಾರ ಪ್ರಕರಣದ ಆರೋಪಿಯ ಮದುವೆ.
ಮಧುಬನಿ (ಬಿಹಾರ) : ಅಪರಾಧಿಗಳಿಗೆ ಶಿಕ್ಷೆ ನೀಡಲು ಅವರನ್ನು ಜೈಲಿನೊಳಗೆ ಕಳುಹಿಸಲಾಗುತ್ತದೆ. ಆದರೆ ಬಿಹಾರ ರಾಜ್ಯದ ಮಧುಬನಿ ಜೈಲು ಮದುವೆ ಮಂಟಪದ ರೂಪ ಪಡೆದು ಕೊಂಡಿತು.
ನ್ಯಾಯಾಲಯದ ಆದೇಶವನ್ನು ಪಾಲಿಸುವ ಸಲುವಾಗಿ ಪೋಲಿಸ್ ಹಾಗೂ ಕಾರಾಗೃಹ ಅಧಿಕಾರಿಗಳು ಆರೋಪಿಯ ಮದುವೆಯನ್ನು ಜೈಲಿನೊಳಗೇ ನೆರವೇರಿಸಿದರು.
ಅಚ್ಚರಿಯ ಘಟನೆಯಂತೆ, ತಮ್ಮ ಅಣ್ಣನ ಪತ್ನಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಮದುವೆಯನ್ನು ಪೀಡಿತೆಯೊಡನೆ ಜೈಲಿನ ಆವರಣದಲ್ಲೇ ನೆರವೇರಿಸಲಾಯಿತು. ಈ ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಜೈಲು ಆಡಳಿತವೇ ಮಾಡಿತು. ಇದಕ್ಕೆ ಪೊಲೀಸರು ಸಾಕ್ಷಿಗಳಾಗಿದ್ದು, ಇತರ ಕೈದಿಗಳು ಬಂಧುಬಳಗದವರಾದರು.
ಪ್ರಕರಣ ಏನು?
ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲಿನಲ್ಲಿದ್ದ ಆರೋಪಿ, ಪಟ್ನಾ ಹೈಕೋರ್ಟ್ನಲ್ಲಿ ಪೀಡಿತೆಯೊಂದಿಗೆ ಮದುವೆಯಾಗಲು ಜಾಮೀನು ಅರ್ಜಿ ಸಲ್ಲಿಸಿದ್ದ. ಹೈಕೋರ್ಟ್, “ಆರೋಪಿ ಪೀಡಿತೆಯೊಂದಿಗೆ ಮದುವೆಯಾಗುತ್ತಾನೆಯೇ?” ಎಂಬುದನ್ನು ದೃಢಪಡಿಸಲು ಮಾಡಲು ಸತ್ರ ನ್ಯಾಯಾಲಯಕ್ಕೆ ಸೂಚಿಸಿತು. ನಂತರ ಆರೋಪಿ ಕಿರಿಯ ನ್ಯಾಯಾಲಯದಿಂದ ಮದುವೆಗೆ ಅನುಮತಿ ಕೋರಿ ಅರ್ಜಿ ಹಾಕಿದ.
ಕಾರಾಗೃಹ ಅಧೀಕ್ಷಕ ಓಂ ಪ್ರಕಾಶ್ ಶಾಂತಿ ಭೂಷಣ್ ಬುಧವಾರ ಈ ಮಾಹಿತಿಯನ್ನು ಹಂಚಿಕೊಂಡು, ನ್ಯಾಯಾಲಯದ ಆದೇಶದಂತೆ ಜೈಲಿನ ಆವರಣದಲ್ಲಿ ಮದುವೆ ನೆರವೇರಿಸಲಾಯಿತು ಎಂದರು.
ಆರೋಪಿಯ ಪರ ವಾದಿಸಿದ ವಕೀಲ ಗಗನ್ ದೇವ್ ಯಾದವ್ ವಿವರ ನೀಡುತ್ತಾ, “ಆರೋಪಿಯ ಅಣ್ಣ 2022ರಲ್ಲಿ ಮೃತಪಟ್ಟಿದ್ದರು. ಆ ಬಳಿಕ ಆರೋಪಿ ಹಾಗೂ ಅಣ್ಣನ ಪತ್ನಿ ಒಟ್ಟಿಗೆ ಸೇರಿದ್ದರು. ಆದರೆ ನಂತರ ಇವರ ನಡುವೆ ಕಲಹ ಉಂಟಾಗಿ 2024ರ ಜೂನ್ 29ರಂದು ಪೀಡಿತೆಯು ದೂರು ದಾಖಲಿಸಿದರು. ಇದರಿಂದ ಆರೋಪಿ ನ್ಯಾಯಾಂಗ ಬಂಧನಕ್ಕೆ ಒಳಗಾದನು. ನಂತರ ಆರೋಪಿ ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿ, ಪೀಡಿತೆಯೊಂದಿಗೆ ಮದುವೆಯಾಗಲು ಸಿದ್ಧತೆಯನ್ನು ತೋರಿದ. ಅದಕ್ಕೆ ಅನುಗುಣವಾಗಿ ಹೈಕೋರ್ಟ್ ನ್ಯಾಯಮೂರ್ತಿ ಸಯ್ಯದ್ ಮೊಹಮ್ಮದ್ ಫಝ್ಲುಲ್ ಅವರು ಕಿರಿಯ ನ್ಯಾಯಾಲಯದ ಅಧಿವೀಕ್ಷಣೆಯಡಿ ಮದುವೆ ನೆರವೇರಿಸಲು ಆದೇಶ ನೀಡಿದರು. ಅದರಂತೆ ಜೈಲಿನೊಳಗೆ ಈ ವಿಶಿಷ್ಟ ಮದುವೆ ನೆರವೇರಿತು” ಎಂದು ಹೇಳಿದರು.
