
गोवा वेस सिग्नलजवळील भीषण अपघातात कापोली येथील युवकाचा मृत्यू
खानापूर : गोवा वेस सिग्नलजवळ गुरुवारी सायंकाळी घडलेल्या भीषण अपघातात कापोली (ता. खानापूर) येथील सुनील दिलीप देसाई (वय 42) या युवकाचा जागीच मृत्यू झाला.

मिळालेल्या माहितीनुसार, सुनील देसाई हे त्यांच्या स्प्लेंडर दुचाकीवरून आरपीडी कॉलेजकडून गोवा वेसच्या दिशेने जात असताना मागून भरधाव वेगात आलेल्या ट्रकने त्यांना जोरदार धडक दिली. धडकेचा जोर एवढा होता की दुचाकी व सुनील देसाई ट्रकखाली चिरडले गेले व सुनील देसाई यांचा जागीच मृत्यू झाला.
घटनेची माहिती मिळताच पोलिसांनी घटनास्थळी धाव घेतली. अपघात झालेल्या जागेचा पंचनामा करण्यात आला असून उत्तरीय तपासणीनंतर मृतदेह नातेवाईकांच्या ताब्यात देण्यात येणार आहे. त्यानंतर त्यांच्यावर मूळ गाव कापोली येथे अंत्यसंस्कार करण्यात येणार आहेत.
या दुर्दैवी घटनेमुळे कापोलीसह शास्त्रीनगर परिसरात हळहळ व्यक्त केली जात आहे.
ಗೋವಾ ವೇಸ್ ಸಿಗ್ನಲ್ ಬಳಿ ಭೀಕರ ಅಪಘಾತ : ಕಾಪೋಲಿ ಗ್ರಾಮದ ಯುವಕನ ದಾರುಣ ಸಾವು
ಖಾನಾಪುರ : ಗೋವಾ ವೇಸ್ ಸಿಗ್ನಲ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಪೋಲಿ (ತಾ. ಖಾನಾಪುರ) ಗ್ರಾಮದ ಸುನಿಲ್ ದಿಲೀಪ್ ದೇಸಾಯಿ (42) ಎಂಬ ಯುವಕನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಲಭ್ಯವಾದ ಮಾಹಿತಿಯ ಪ್ರಕಾರ, ಸುನಿಲ್ ದೇಸಾಯಿ ಅವರು ತಮ್ಮ ಸ್ಪ್ಲೆಂಡರ್ ಬೈಕ್ನಲ್ಲಿ ಆರ್ಪಿಡಿ ಕಾಲೇಜ್ ದಿಕ್ಕಿನಿಂದ ಗೋವಾ ವೇಸ್ ಕಡೆಗೆ ತೆರಳುತ್ತಿರುವಾಗ, ಹಿಂಬದಿಯಿಂದ ಅತಿ ವೇಗದಲ್ಲಿ ಬಂದ ಲಾರಿಯೊಂದು ಬೈಕ್ಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಜೋರಿಗೆ ಸುನಿಲ್ ದೇಸಾಯಿ ಮತ್ತು ಬೈಕ್ ಲಾರಿಯಡಿ ಸಿಲುಕಿ, ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಅಪಘಾತದ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಘಟನೆ ನಡೆದ ಸ್ಥಳದ ಪಂಜನಾಮೆ ನಡೆಸಿದರು. ಶವವನ್ನು ಉತ್ತರಿಯ ಪರೀಕ್ಷೆ (ಪೋಸ್ಟ್ ಮಾರ್ಟಮ್) ನಂತರ ಬಂಧುಬಳಗದವರಿಗೆ ಹಸ್ತಾಂತರಿಸಲಾಗುವುದು. ನಂತರ ಕಪೋಲಿ ಮೂಲ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಈ ದುರ್ಘಟನೆಯಿಂದ ಕಾಪೋಲಿ ಹಾಗೂ ಶಾಸ್ತ್ರಿನಗರ ಪ್ರದೇಶದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಭಾರಿ ಸಂತಾಪ ವ್ಯಕ್ತವಾಗುತ್ತಿದೆ.
