
म. मं. ताराराणी पदवीपूर्व महाविद्यालय खानापूर क्रीडास्पर्धेत चॅम्पियन
खानापूर : म. मं. ताराराणी पदवीपूर्व महाविद्यालयाच्या खेळाडू विद्यार्थिनींनी तालुकास्तरीय क्रीडास्पर्धेत नेत्रदीपक कामगिरी करत मुलींच्या गटात चॅम्पियनशिप पटकावली. के. एल. ई. काॅलेज खानापूर व पदवीपूर्व शिक्षण विभाग, बेळगाव यांच्या संयुक्त विद्यमाने या स्पर्धांचे आयोजन करण्यात आले होते.

कबड्डी व खो-खो या तालुक्यातील प्रतिष्ठेच्या क्रीडा प्रकारात ताराराणी महाविद्यालयाने अंतिम सामन्यांमध्ये प्रथम क्रमांक मिळवत आपली यशस्वी परंपरा कायम ठेवली.
खो-खोमध्ये बलाढ्य माऊली पदवीपूर्व काॅलेज, गर्लगुंजी यांना आठ गड्यांच्या फरकाने पराभूत करून जिल्हास्तरीय स्पर्धेसाठी पात्र ठरले. कॅप्टन कुमारी निलम कक्केरकरीकर, कु. साक्षी दौलतकर व कुमारी निलम यांच्या अष्टपैलू खेळामुळे संघाला हा विजय मिळाला.
कबड्डीत उपांत्य फेरीत एम. जी. काॅलेज नंदगडचा पराभव करून अंतिम फेरीत एम. एम. काॅलेज खानापूरवर मोठ्या फरकाने मात केली. कॅप्टन कुमारी लक्ष्मी गोरल व स्टार रेडर कुमारी साधना होसुरकर यांनी विजयाची परंपरा अबाधित ठेवली.
धावण्याच्या स्पर्धेतही महाविद्यालयाने आपली छाप सोडली. 4 x 100 रिले मध्ये कुमारी निलम हुक्केरीकर, अपेक्षा निलजकर, लक्ष्मी हंगिरकर व प्रणाली पाटील यांनी प्रथम क्रमांक मिळविला. त्याचबरोबर, कु. अंजली कदम हिने गोळाफेकमध्ये प्रथम क्रमांक पटकावला, तर द्वितीय क्रमांक कुमारी साधना होसुरकरने मिळविला. कु. स्वाती एस. पाटील हिने बुद्धिबळात प्रथम क्रमांक मिळवला.
कुमारी प्रणाली पी. पाटील हिने लांबउडी, ट्रिपल जंप व 100 मी. हर्डल्समध्ये प्रथम क्रमांक पटकावून महाविद्यालयाला सर्वसाधारण जेतेपद मिळवून दिले.
या उज्ज्वल यशाबद्दल मराठा मंडळ संस्थेच्या अध्यक्षा डॉ. राजश्री नागराजू यांनी दूरध्वनीद्वारे सर्व खेळाडूंचे अभिनंदन केले. कार्यकारी ज्येष्ठ संचालक श्री. परशराम गुरव, श्री. शिवाजीराव पाटील व हायस्कूलचे मुख्याध्यापक श्री. राहुल जाधव यांनीही विद्यार्थिनींचे कौतुक केले.
प्राचार्य अरविंद पाटील यांच्या प्रोत्साहनासह क्रीडा विभाग प्रमुख श्रीमती एम. वाय. देसाई, शिक्षकवर्ग व कर्मचारीवर्ग विजयी परंपरा कायम ठेवण्यासाठी प्रयत्नशील आहेत. कबड्डी कोच श्री. भरमाजी पाटील, श्री. आप्पाजी पाटील, खो-खो कोच श्री. प्रशांत पाखरे, श्री. श्रीधर मळीक व श्री. भिमसेन यांचे अचूक मार्गदर्शन संघाला लाभले.
🏆 म. मं. ताराराणी महाविद्यालयाने यंदाही क्रीडाक्षेत्रात अव्वल ठरून खानापूरचा झेंडा उंचावला आहे.
ಮರಾಟಾ .ಮಂಡಳ.ತಾರಾರಾಣಿ ಪದವಿಪೂರ್ವ ಕಾಲೇಜು ಖಾನಾಪುರ, ತಾಲೂಕಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಚಾಂಪಿಯನ್ಷಿಪ್
ಖಾನಾಪುರ : ಮ.ಮಂ. ತಾರಾರಾಣಿ ಪದವಿಪೂರ್ವ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರು ತಾಲ್ಲೂಕು ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಹಿಳಾ ಗುಂಪಿನಲ್ಲಿ ಚಾಂಪಿಯನ್ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.
ಕೆ.ಎಲ್.ಇ. ಕಾಲೇಜು ಖಾನಾಪುರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಸ್ಪರ್ಧೆಗಳ ಆಯೋಜಿಸಲಾಗಿತ್ತು.
ತಾಲ್ಲೂಕಿನ ಪ್ರತಿಷ್ಠಿತ ಕಬಡ್ಡಿ ಮತ್ತು ಖೋ-ಖೋ ಕ್ರೀಡೆಗಳಲ್ಲಿ ತಾರಾರಾಣಿ ಮಹಾವಿದ್ಯಾಲಯವು ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದು ಯಶಸ್ವಿ ಪರಂಪರೆ ಮುಂದುವರಿಸಿದೆ.
ಖೋ-ಖೋದಲ್ಲಿ ಬಲಿಷ್ಠ ಮಾವುಲಿ ಪದವಿಪೂರ್ವ ಕಾಲೇಜು, ಗರ್ಲಗುಂಜಿ ತಂಡವನ್ನು ಎಂಟು ಅಂಕಗಳ ಅಂತರದಿಂದ ಸೋಲಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದೆ. ನಾಯಕಿ ಕುಮಾರಿ ನಿಲಮ್ ಕಕ್ಕೇರ್ಕರ, ಕು. ಸಾಕ್ಷಿ ದೌಲತ್ಕರ್ ಹಾಗೂ ಕುಮಾರಿ ನಿಲಮ್ ಅವರ ಅಷ್ಟಪೈಲು ಆಟದಿಂದ ತಂಡ ಜಯ ಸಾಧಿಸಿದೆ.
ಕಬಡ್ಡಿ ಪಂದ್ಯದ ಉಪಾಂತ್ಯ ಸುತ್ತಿನಲ್ಲಿ ಎಂ.ಜಿ. ಕಾಲೇಜು ನಂದಗಡವನ್ನು ಸೋಲಿಸಿ, ಅಂತಿಮ ಸುತ್ತಿನಲ್ಲಿ ಎಂ.ಎಂ. ಕಾಲೇಜು ಖಾನಾಪುರವನ್ನು ದೊಡ್ಡ ಅಂತರದಿಂದ ಮಣಿಸಿದೆ. ನಾಯಕಿ ಕುಮಾರಿ ಲಕ್ಷ್ಮಿ ಗೋರಲ ಹಾಗೂ ಸ್ಟಾರ್ ರೈಡರ್ ಕುಮಾರಿ ಸಾಧನಾ ಹೊಸೂರುಕರ ಅವರ ಅದ್ಭುತ ಪ್ರದರ್ಶನದಿಂದ ಜಯ ಸಾಧಿಸಿದೆ.
ಓಟದ ಸ್ಪರ್ಧೆಯಲ್ಲಿಯೂ ಮಹಾವಿದ್ಯಾಲಯವು ಮೆರೆದಿದೆ. 4 x 100 ರಿಲೇಯಲ್ಲಿ ಕುಮಾರಿ ನಿಲಮ್ ಹುಕ್ಕೇರಿಕರ್, ಅಪೇಕ್ಷಾ ನಿಲಜ್ಕರ್, ಲಕ್ಷ್ಮಿ ಹಂಗಿರ್ಕರ್ ಹಾಗೂ ಪ್ರಣಾಲಿ ಪಾಟೀಲ ಪ್ರಥಮ ಸ್ಥಾನ ಗಳಿಸಿದರು. ಅದೇ ರೀತಿ, ಕು. ಅಂಜಲಿ ಕದಮ ಗೋಳಾಫೇಕನಲ್ಲಿ ಪ್ರಥಮ ಸ್ಥಾನ ಪಡೆದು, ದ್ವಿತೀಯ ಸ್ಥಾನವನ್ನು ಕುಮಾರಿ ಸಾಧನಾ ಹೊಸೂರುಕರ ಪಡೆದುಕೊಂಡರು. ಕು. ಸ್ವಾತಿ ಎಸ್. ಪಾಟೀಲ ಅವರು ಚೆಸ್ ನಲಿ ಪ್ರಥಮ ಸ್ಥಾನ ಪಡೆದರು.
ಕುಮಾರಿ ಪ್ರಣಾಲಿ ಪಿ. ಪಾಟೀಲ ಅವರು ಲಾಂಗ್ಜಂಪ್, ಟ್ರಿಪಲ್ ಜಂಪ್ ಹಾಗೂ 100 ಮೀ. ಹರ್ಡಲ್ಸ್ಗಳಲ್ಲಿ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಸರ್ವಸಾಧಾರಣ ಚಾಂಪಿಯನ್ಶಿಪ್ ತಂದುಕೊಟ್ಟರು.
ಈ ಭವ್ಯ ಯಶಸ್ಸಿಗೆ ಮಾರಠಾ ಮಂಡಳ ಸಂಸ್ಥೆಯ ಅಧ್ಯಕ್ಷೆ ಡಾ. ರಾಜಶ್ರೀ ನಾಗರಾಜು ಅವರು ದೂರವಾಣಿ ಮೂಲಕ ಎಲ್ಲ ಆಟಗಾರ್ತಿಯರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯನಿರ್ವಾಹಕ ಹಿರಿಯ ನಿರ್ದೇಶಕ ಶ್ರೀ. ಪರಶುರಾಮ ಗುರುವ, ಶ್ರೀ. ಶಿವಾಜೀರಾವ ಪಾಟೀಲ ಹಾಗೂ ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀ. ರಾಹುಲ್ ಜಾಧವ ಅವರೂ ವಿದ್ಯಾರ್ಥಿನಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಚಾರ್ಯ ಅರವಿಂದ ಪಾಟೀಲರ ಪ್ರೋತ್ಸಾಹದೊಂದಿಗೆ ಕ್ರೀಡಾ ವಿಭಾಗ ಮುಖ್ಯಸ್ಥೆ ಶ್ರೀಮತಿ ಎಂ.ವೈ. ದೇಶಾಯಿ, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿವರ್ಗ ಜಯಶೀಲ ಪರಂಪರೆ ಮುಂದುವರಿಸಲು ಶ್ರಮಿಸುತ್ತಿದ್ದಾರೆ. ಕಬಡ್ಡಿ ಕೋಚ್ಗಳು ಶ್ರೀ. ಭರಮಾಜಿ ಪಾಟೀಲ, ಶ್ರೀ. ಅಪ್ಪಾಜಿ ಪಾಟೀಲ, ಖೋ-ಖೋ ಕೋಚ್ಗಳು ಶ್ರೀ. ಪ್ರಶಾಂತ ಪಾಖರೆ, ಶ್ರೀ. ಶ್ರೀಧರ ಮಳಿಕ್ ಹಾಗೂ ಶ್ರೀ. ಭೀಮಸೇನ ಅವರ ನಿಖರ ಮಾರ್ಗದರ್ಶನದಿಂದ ತಂಡ ಯಶಸ್ಸನ್ನು ಕಂಡಿದೆ.
🏆 ಮ.ಮಂ. ತಾರಾರಾಣಿ ಮಹಾವಿದ್ಯಾಲಯವು ಈ ಬಾರಿಯೂ ಕ್ರೀಡಾಂಗಣದಲ್ಲಿ ಅಗ್ರಸ್ಥಾನ ಪಡೆದು ಖಾನಾಪುರದ ಧ್ವಜವನ್ನು ಎತ್ತರಕ್ಕೆ ಹಾರಿಸಿದೆ.
