
आमदार विठ्ठल हलगेकर डीसीसी बँक निवडणुकीच्या रिंगणात ; निवड समितीची घोषणा.
खानापूर : बेळगाव जिल्हा मध्यवर्ती सहकारी (डीसीसी) बँकेच्या निवडणुकीसाठी खानापूर तालुक्याचे आमदार विठ्ठल हलगेकर यांचे नाव निश्चित करण्यात आले आहे. ही माहिती सर्वपक्षीय निवड समितीचे प्रमुख यशवंत बिरजे यांनी गुरुवार, दि. 28 ऑगस्ट रोजी शांतिनिकेतन स्कूल येथे आयोजित पत्रकार परिषदेत दिली.
यावेळी आमदार विठ्ठल हलगेकर, गर्लगुंजी पीकेपीएस अध्यक्ष राजू सिद्धानी, आमटे पिकेपीएस अध्यक्ष लक्ष्मण कसरलेकर, सामाजिक कार्यकर्ते इरफान तालीकोटी, शिवसेनेचे नेते पी. के. पाटील, महादेव घाडी, भरमाणी पाटील, लैला शुगर एम. डी. सदानंद पाटील, इटगी पीकेपीएस सोसायटी अध्यक्ष श्रीशैल तुरमुरी आदी मान्यवर उपस्थित होते.

पत्रकार परिषदेत बोलताना यशवंत बिरजे म्हणाले की, “डीसीसी बँक निवडणूक लढविण्यासाठी निवड समिती स्थापन करण्यात आली होती. या समितीकडे विधान परिषद सदस्य चन्नराज हट्टीहोळी, आमदार विठ्ठल हलगेकर व सामाजिक कार्यकर्ते राजीव सिद्धानी अशी तीन नावे आली होती. मात्र, 27 ऑगस्ट रोजी पालकमंत्री सतीश जारकीहोळी यांनी चन्नराज हट्टीहोळी यांनी निवडणुकीतून माघार घेतल्याची माहिती दिली. त्यामुळे हलगेकर व सिद्धानी या दोन उमेदवारांमधून झालेल्या चर्चेनंतर समितीने हलगेकर यांची उमेदवारी जाहीर केली आहे.”
यावेळी समितीने पुढे सांगितले की, या निवडणुकीत एकूण 55 पीकेपीएस सोसायटी पात्र असून, बहुमत मिळविण्यासाठी किमान 28 सोसायटींचा पाठिंबा आवश्यक आहे. “सध्याच्या घडीला आमच्याकडे 35 सोसायटींचा पाठिंबा असल्याने आमचा विजय निश्चित आहे,” असेही यशवंत बिरजे यांनी स्पष्ट केले.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಂತಿಮವಾಗಿ ಜನ ಪ್ರಿಯ ಶಾಸಕ ವಿಠ್ಠಲ್ ಹಲ್ಗೇಕರ್ ಕಣದಲ್ಲಿ; ಆಯ್ಕೆ ಸಮಿತಿಯ ಮುಖ್ಯಸ್ಥರಿಂದ ಮಾಧ್ಯಮ ಪ್ರಕಟಣೆ.
ಖಾನಾಪುರ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣಾ ಕಣದಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ವಿಠ್ಠಲ ಹಲಗೇಕರ ಅವರ ಹೆಸರೇ ಅಂತಿಮ.
ಈ ಮಾಹಿತಿಯನ್ನು ಸರ್ವ ಪಕ್ಷಗಳ ಪ್ರತಿನಿಧಿಗಳಿಂದ ರಚಿಸಲಾದ ಆಯ್ಕೆ ಸಮಿತಿಯ ಅಧ್ಯಕ್ಷ ಯಶವಂತ ಬಿರ್ಜೆ ಅವರು ಗುರುವಾರ (ಆಗಸ್ಟ್ 28) ಖಾನಾಪುರದ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಹಲಗೇಕರ, ಗರ್ಲಗುಂಜಿ ಪಿಕೆಪಿಎಸ್ ಅಧ್ಯಕ್ಷ ರಾಜು ಸಿದ್ಧಾಣಿ, ಸಮಾಜ ಸೇವಕ ಇರ್ಫಾನ್ ತಾಳಿಕೋಟಿ, ಶಿವಸೇನೆಯ ನಾಯಕ ಪಿ.ಕೆ. ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಕಸರಲೆಕರ, ಮಹಾದೇವ ಘಾಡಿ, ಭರ್ಮಾಣಿ ಪಾಟೀಲ, ಲೈಲಾ ಶುಗರ್ ಎಂ.ಡಿ. ಸದಾನಂದ ಪಾಟೀಲ, ಇಟಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ತುರಮುರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಶವಂತ ಬಿರ್ಜೆ ಅವರು, “ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಲುವಾಗಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಶಾಸಕ ವಿಠ್ಠಲ ಹಲಗೇಕರ ಹಾಗೂ ಸಮಾಜ ಸೇವಕ ರಾಜೀವ ಸಿದ್ಧಾಣಿ ಇವರ ಹೆಸರುಗಳು ಬಂದಿದ್ದವು. ಆದರೆ ಆಗಸ್ಟ್ 27 ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಅವರ ಮೂಲಕ ಚನ್ನರಾಜ ಹಟ್ಟಿಹೋಳಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಮಾಹಿತಿ ಲಭಿಸಿತು. ಹೀಗಾಗಿ ಉಳಿದ ಉಮೇದುವಾರು ಶಾಸಕ ಹಲಗೇಕರ ಮತ್ತು ಸಿದ್ಧಾಣಿ ಇವರ ಬಗ್ಗೆ ನಡೆದ ಚರ್ಚೆಯ ನಂತರ ಜನಪ್ರಿಯ ಶಾಸಕ ಹಲಗೇಕರರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ,” ಎಂದು ಹೇಳಿದರು.
ಅವರು ಮುಂದುವರೆದು, “ಈ ಚುನಾವಣೆಯಲ್ಲಿ ಒಟ್ಟು 55 ಪಿಕೆಪಿಎಸ್ ಸಹಕಾರ ಸಂಘಗಳು ಮತದಾನಕ್ಕೆ ಅರ್ಹವಾಗಿದ್ದು, ಬಹುಮತ ಪಡೆಯಲು ಕನಿಷ್ಠ 28 ಸಂಘಗಳ ಬೆಂಬಲ ಅಗತ್ಯವಿದೆ. ಪ್ರಸ್ತುತ ನಮ್ಮ ಬಳಿ 35 ಸಂಘಗಳ ಬೆಂಬಲವಿರುವುದರಿಂದ ನಮ್ಮ ವಿಜಯ ಖಚಿತ,” ಎಂದು ಬಿರ್ಜೆ ಸ್ಪಷ್ಟಪಡಿಸಿದ್ದಾರೆ.
