लोकोळी ग्रामपंचायतीत वॉटरमन नारायण पाटील यांचा सेवानिवृत्त सत्कार समारंभ
लोकोळी (ता. खानापूर) – मौजे लोकोळी (जैनकोप) येथे ग्रामपंचायतच्या वतीने वॉटरमन पदावर दीर्घकाळ सेवा बजावलेले श्री. नारायण शिवाजी पाटील यांचा सेवानिवृत्तीनिमित्त सत्कार समारंभ मोठ्या आदरभावाने पार पडला.
या कार्यक्रमात ग्रामपंचायतीचे पी.डी.ओ. कर्मचारी, अध्यक्ष, उपाध्यक्ष, सदस्य तसेच ग्रामस्थ मोठ्या संख्येने उपस्थित होते. वॉटरमन नारायण पाटील व त्यांची सहधर्मचारिणी सौ. लक्ष्मीबाई यांचा शाल, श्रीफळ व भेटवस्तू देऊन सन्मान करण्यात आला.
नारायण पाटील हे अत्यंत प्रामाणिक, कष्टाळू आणि शिस्तप्रिय कर्मचारी म्हणून ओळखले जात. आपल्या कार्यकाळात त्यांनी कोणतीही कसूर न करता ग्रामस्थांची सेवा केली. त्यांचे काम सदैव वेळेवर व जबाबदारीने पार पडले. त्यांच्या समर्पित सेवेमुळे गावकऱ्यांमध्ये त्यांच्याबद्दल विशेष आपुलकी आणि आदर निर्माण झाला होता.
कार्यक्रमाचा समारोप करताना उपस्थितांनी त्यांना भावी आयुष्यासाठी शुभेच्छा दिल्या आणि त्यांचे योगदान कायम स्मरणात राहील, असे गौरवोद्गार काढले.
ಲೋಕೋಳಿ ಗ್ರಾಮ ಪಂಚಾಯತ್ನಲ್ಲಿ ವಾಟರ್ಮನ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಪಾಟೀಲ ಅವರ ಸೇವಾ ನಿವೃತ್ತಿ ನಿಮಿತ್ತ ಸತ್ಕಾರ ಸಮಾರಂಭ
ಲೋಕೋಳಿ (ತಾ. ಖಾನಾಪುರ) – ಖಾನಾಪುರ ತಾಲ್ಲೂಕಿನ ಲೋಕೊಳಿ (ಜೈನಕೋಪ) ಗ್ರಾಮದಲ್ಲಿ ಗ್ರಾಮಪಂಚಾಯತ್ ವತಿಯಿಂದ ದೀರ್ಘಕಾಲ ವಾಟರ್ಮನ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಶ್ರೀ ನಾರಾಯಣ ಶಿವಾಜಿ ಪಾಟೀಲ ಅವರ ಸೇವಾ ನಿವೃತ್ತಿ ನಿಮಿತ್ತ ಭಾವಪೂರ್ಣ ಸತ್ಕಾರ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ, ಸದಸ್ಯರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಾರಾಯಣ ಪಾಟೀಲ ಹಾಗೂ ಅವರ ಧರ್ಮಪತ್ನಿ ಲಕ್ಷ್ಮೀಬಾಯಿ ಪಾಟೀಲ ಅವರನ್ನು ಶಾಲು, ಶ್ರೀಫಲ ಮತ್ತು ಗೌರವ ವಸ್ತು ನೀಡಿ ಸನ್ಮಾನಿಸಲಾಯಿತು.
ನಾರಾಯಣ ಪಾಟೀಲ ಅವರು ಪ್ರಾಮಾಣಿಕತೆ, ಶ್ರಮನಿಷ್ಠೆ ಮತ್ತು ಶಿಸ್ತುಪ್ರಿಯತೆಯುಳ್ಳ ನಿಷ್ಠಾವಂತ ಉದ್ಯೋಗಿಯಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಅವರು ಯಾವುದೇ ತಪ್ಪು ಮಾಡದೆ ನಿಷ್ಠೆಯೊಂದಿಗೆ ಗ್ರಾಮಸ್ಥರಿಗೆ ಸೇವೆ ಸಲ್ಲಿಸಿದರು. ಅವರ ಸಮಯಪಾಲನೆ ಮತ್ತು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಣೆಗೆ ಎಲ್ಲರಿಗೂ ಮೆಚ್ಚುಗೆ ಪಾತ್ರರಾಗಿದ್ದರು. ಇದರಿಂದಾಗಿ ಗ್ರಾಮಸ್ಥರಲ್ಲಿ ಅವರ ಬಗ್ಗೆ ವಿಶೇಷ ಮಮತೆ ಮತ್ತು ಗೌರವ ಬೆಳೆಸಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂತಿಮ ಕ್ಷಣದಲ್ಲಿ ಹಾಜರಿದ್ದ ಎಲ್ಲರ ಸಹಕಾರದಿಂದ ಅವರಿಗೆ ಭವಿಷ್ಯದ ಜೀವನಕ್ಕೆ ಶುಭಾಶಯಗಳನ್ನು ಕೋರಿ, ಅವರ ಸೇವೆ ಗ್ರಾಮಕ್ಕೆ ಸ್ಮರಣೀಯವಾಗಿರುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

