बल्लोगा ( ता. खानापूर) येथील मलप्रभा नदीपात्रात सापडलेल्या बेवारस मृतदेहावर अंत्यसंस्कार…
बल्लोगा तालुका खानापूर या ठिकाणी मलप्रभा नदीपात्रात सापडलेल्या 35 वर्षीय बेवारस मृतदेहावर खानापूर पोलिस व सामाजिक कार्यकर्त्यांकडून अंत्यसंस्कार करण्यात आले.
दोन दिवसांपूर्वी मंगळवारी बल्लोगा येथील श्री मलप्रभा नदीपात्रात एक अनोळखी मृतदेह सापडला होता, त्या ठिकाणी खानापूर पोलिसांनी जागेचा पंचनामा केला व मृतदेहाची शल्यचकित्सा करून मृतदेहावर अंत्यसंस्कार करण्यात आले. सदर मृतदेह एका ठिकाणी जेसीबी द्वारे खड्डा काढून दफन करण्यात आला.
यावेळी पीएसआय निरंजन स्वामी, कॉन्स्टेबल बालेश सोलबन्नावर, कुतुबुद्दीन सनदी, सामाजिक कार्यकर्ते महादेव काद्रोळकर, लोकोळी ग्रामपंचायतचे पीडिओ, बल्लोगा येथील ग्रामपंचायत सदस्य आपय्यागौडा पाटील, उपस्थित होते.
खानापूर येथील मलप्रभा नदी व इतर ठिकाणी अनेक बेवारस मृतदेह मिळत असतात, अशावेळी मृतदेहाच्या नातेवाईकांचा शोध लागला नसल्यास, पोलिसांना किंवा सामाजिक कार्यकर्त्यांना मृतदेहावर अंत्यसंस्कार करावे लागतात. परंतु प्रत्येक वेळी बेवारस मृतदेहावर अंत्यसंस्कार करण्यासाठी जागेचा प्रश्न निर्माण होत आहे. त्यासाठी नगरपंचायतीने एखाद्या ठिकाणी दहा गुंठ्याची जागा उपलब्ध करून देण्याची मागणी सामाजिक कार्यकर्त्यांनी केली आहे.
ಬಲೋಗಾ (ತಾ ಖಾನಾಪುರ) ಸಮೀಪ ಮಲಪ್ರಭಾ ನದಿಪಾತ್ರದಲ್ಲಿ ಪತ್ತೆಯಾದ ಅನಾಮಿಕ ಶವದ ಅಂತ್ಯಕ್ರಿಯೆ..
ಖಾನಾಪುರ ತಾಲೂಕಿನ ಬಲೋಗಾ ಬಳಿ ಮಲಪ್ರಭಾ ನದಿಪಾತ್ರದಲ್ಲಿ ಪತ್ತೆಯಾದ 35 ವರ್ಷದ ಅನಾಥ ವ್ಯಕ್ತಿಯ ಶವವನ್ನು ಖಾನಾಪುರ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರು ಅಂತ್ಯಕ್ರಿಯೆ ನಡೆಸಿದರು.
ಎರಡು ದಿನಗಳ ಹಿಂದೆ, ಮಂಗಳವಾರ, ಬಲ್ಲೋಗಾದ ಶ್ರೀ ಮಲಪ್ರಭಾ ನದಿಪಾತ್ರದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಖಾನಾಪುರ ಪೊಲೀಸರು ಸ್ಥಳದ ಪಂಚನಾಮೆಯನ್ನು ನಡೆಸಿ, ಶವಪರೀಕ್ಷೆ ನಡೆಸಿ, ಶವವನ್ನು ದಫನ ಮಾಡಿದರು. ಜೆಸಿಬಿ ಬಳಸಿ ಗುಂಡಿ ತೋಡಿ ಶವವನ್ನು ಒಂದು ಸ್ಥಳದಲ್ಲಿ ಹೂಳಲಾಯಿತು.
ಈ ಸಂದರ್ಭದಲ್ಲಿ ಪಿಎಸ್ ಐ ನಿರಂಜನ ಸ್ವಾಮಿ, ಕಾನ್ ಸ್ಟೆಬಲ್ ಬಾಳೇಶ್ ಸೊಲಬಣ್ಣವರ, ಕುತುಬುದ್ದೀನ್ ಸನದಿ, ಸಾಮಾಜಿಕ ಕಾರ್ಯಕರ್ತ ಮಹಾದೇವ ಕಾದ್ರೋಳ್ಕರ್, ಲೋಕೋಲಿ ಗ್ರಾ.ಪಂ.ಪಿಡಿಒ, ಬಲ್ಲೋಗಾ ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಯ್ಯಗೌಡ ಪಾಟೀಲ ಉಪಸ್ಥಿತರಿದ್ದರು.
ಖಾನಾಪುರ ಮತ್ತು ಇತರ ಸ್ಥಳಗಳಲ್ಲಿ ಮಲಪ್ರಭಾ ನದಿಯಲ್ಲಿ ತೇಲಿ ಬರುವ ಅನೇಕ ಪರಿತ್ಯಕ್ತ ಶವಗಳು ಕಂಡುಬರುತ್ತವೆ. ಅಂತಹ ಸಂದರ್ಭಗಳಲ್ಲಿ, ಮೃತರ ಸಂಬಂಧಿಕರು ಪತ್ತೆಯಾಗದಿದ್ದರೆ, ಪೊಲೀಸರು ಅಥವಾ ಸಾಮಾಜಿಕ ಕಾರ್ಯಕರ್ತರು ಶವವನ್ನು ಅಂತ್ಯಕ್ರಿಯೆ ಮಾಡಬೇಕಾಗುತ್ತದೆ. ಆದರೆ ಪ್ರತಿ ಬಾರಿಯೂ, ವಾರಸದಾರರಿಲ್ಲದ ದೇಹಗಳನ್ನು ದಫನ ಅಥವಾ ದಹನ ಮಾಡಲು ಸ್ಥಳದ ಸಮಸ್ಯೆ ಉದ್ಭವಿಸುತ್ತದೆ. ಇದಕ್ಕಾಗಿ, ನಗರ ಪಂಚಾಯತ್ ಒಂದು ನಿರ್ದಿಷ್ಟ ಸ್ಥಳದಲ್ಲಿ ಹತ್ತು ಗುಂಟೆ ಜಾಗವನ್ನು ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

