शिरसी बाजार पेठेतील काळी मिरीचे दर स्पाइस बोर्डाच्या यादीत नोंदवले गेले! खासदारांच्या प्रयत्नांना यश!
शिरसी : केंद्रीय वाणिज्य मंत्री पियुष गोयल यांनी देशातील आघाडीचे मिरपूड उत्पादक शिरसीचे बाजारभाव स्पाइस बोर्डाच्या किंमत यादीत समाविष्ट करण्यास मान्यता दिली आहे. खासदार विश्वेश्वर हेगडे-कागेरी यांच्या विनंतीला प्रतिसाद देत, शिरसी बाजाराचे महत्त्व ओळखून मंत्र्यांनी हे पाऊल उचलले.
उत्तरा कन्नडमधील प्रमुख व्यापारी केंद्र असलेल्या शिरसीमधील काळ्या सोन्याची किंमत आता स्पाइस बोर्डाच्या दैनंदिन किंमत यादीत समाविष्ट केली जाईल. यामुळे सिरसी बाजारपेठ राष्ट्रीय पातळीवर ओळखली जाईल.
शिरसी येथील कदंब मार्केट मध्ये नुकत्याच झालेल्या मिरची महोत्सवात ही मागणी ऐकू आली. या संदर्भात, खासदार विश्वेश्वर हेगडे-कागेरी यांनी केंद्रीय मंत्र्यांना एक निवेदन सादर केले होते, ज्यामध्ये शिरसी बाजारभाव स्पाइस बोर्डाच्या किंमत यादीत समाविष्ट करण्याची मागणी करण्यात आली होती.
या निर्णयाचा फायदा शिरसी आणि आसपासच्या भागातील मिरपूड उत्पादकांना आणि व्यापाऱ्यांना होईल. यामुळे केवळ किंमतीची पारदर्शकता वाढणार नाही, तर, बाजारपेठेतील स्पर्धात्मकतेतही योगदान मिळेल. असे मनोगत विश्वेश्वर हेगडे- कागेरी यांनी व्यक्त केले आहे.
ಶಿರಸಿ ಮಾರುಕಟ್ಟೆ ಕಾಳುಮೆಣಸಿನ ದರ ಸ್ಪೈಸ್ ಬೋರ್ಡ್ ಪಟ್ಟಿಯಲ್ಲಿ ದಾಖಲು.
ಶಿರಸಿ: ದೇಶದಲ್ಲಿ ಕಾಳುಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿರಸಿ ಮಾರುಕಟ್ಟೆಯ ದರವನ್ನು ಸ್ಪೈಸ್ ಬೋರ್ಡ್ನ ದರಪಟ್ಟಿಯಲ್ಲಿ ದಾಖಲಿಸಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿಗೆ ಸ್ಪಂದಿಸಿದ ಸಚಿವರು, ಶಿರಸಿ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಗುರುತಿಸಿ ಈ ಕ್ರಮ ಕೈಗೊಂಡಿದ್ದಾರೆ.
ಉತ್ತರ ಕನ್ನಡದ ಪ್ರಮುಖ ವ್ಯಾಪಾರ ಕೇಂದ್ರವಾದ ಶಿರಸಿಯಲ್ಲಿನ ಕಪ್ಪು ಬಂಗಾರದ ಬೆಲೆ, ಇನ್ನು ಮುಂದೆ ಸ್ಪೈಸ್ ಬೋರ್ಡ್ನ ದಿನನಿತ್ಯದ ದರಪಟ್ಟಿಯಲ್ಲಿ ನಮೂದಾಗಲಿದೆ. ಈ ಮೂಲಕ, ಶಿರಸಿ ಮಾರುಕಟ್ಟೆಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ.
ಇತ್ತೀಚೆಗೆ ಶಿರಸಿಯ ಕದಂಬ ಮಾರ್ಕೆಟಿಂಗ್ನಲ್ಲಿ ನಡೆದ ಕಾಳುಮೆಣಸಿನ ಹಬ್ಬದಲ್ಲಿಯೂ ಈ ಕುರಿತು ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ಸಂಸದ ಕಾಗೇರಿ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ, ಶಿರಸಿ ಮಾರುಕಟ್ಟೆಯ ದರವನ್ನು ಸ್ಪೈಸ್ ಬೋರ್ಡ್ನ ದರಪಟ್ಟಿಯಲ್ಲಿ ನಮೂದಿಸುವಂತೆ ಆಗ್ರಹಿಸಿದ್ದರು.
ಈ ನಿರ್ಧಾರದಿಂದ, ಶಿರಸಿ ಹಾಗೂ ಸುತ್ತಮುತ್ತಲ ಪ್ರದೇಶದ ಕಾಳುಮೆಣಸು ಬೆಳೆಗಾರರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಬೆಲೆಗಳ ಪಾರದರ್ಶಕತೆ ಹೆಚ್ಚುವುದರ ಜೊತೆಗೆ, ಮಾರುಕಟ್ಟೆಯ ಸ್ಪರ್ಧಾತ್ಮಕತೆಗೂ ಇದು ಸಹಕಾರಿಯಾಗಲಿದೆ. ಈ ಅಭಿಪ್ರಾಯವನ್ನು ಕೆನರಾ ಪ್ರದೇಶದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ವ್ಯಕ್ತಪಡಿಸಿದ್ದಾರೆ.

