
पीआय मंजुनाथ नाईक यांचे निलंबन रद्द! पूर्वीच्या जागेवरच नेमणूक करण्याचे (केएटी) चे आदेश! नागरिकांतून समाधान!
खानापूर ; खानापूरचे तत्कालीन पीआय मंजुनाथ नाईक यांना 21 डिसेंबर 2024 रोजी राजकीय दबावापोटी निलंबित करण्यात आले होते. एका प्रामाणिक अधिकाऱ्याचा राजकीय बळी घेतल्यामुळे खानापूर तालुक्यातील जनतेमध्ये संबंधित राजकीय लोकांच्या विरोधात आक्रोश निर्माण झाला होता. व मंजुनाथ नाईक यांचे निलंबन रद्द करण्यासाठी 26 डिसेंबर 2024 रोजी तहसीलदार कार्यालयावर विविध संघटनेच्या व नागरिकांच्या वतीने मोर्चा काढून निलंबन रद्द करण्याबाबत निवेदन देण्यात आले होते. तरीसुद्धा त्यांचे निलंबन रद्द करण्यात आले नव्हते. याबाबत पीआय मंजुनाथ नाईक यांनी न्याय मागण्यासाठी Karnataka Appellate Tribunal (KAT) कडे अर्ज दाखल केला होता. त्याच्यावर सुनावणी होऊन मंजुनाथ नाईक यांचे निलंबन रद्द करण्यात आले असून तीन महिन्याच्या आत पूर्वी ज्या ठिकाणी (खानापूर) काम करत होते, त्या ठिकाणीच त्यांना पुन्हा सेवेवर नेमण्याचे आदेश देण्यात आले आहेत. तसेच त्यांना पूर्वीप्रमाणे सर्व सरकारी सुविधा देण्याचे सुद्धा आदेश देण्यात आले आहेत. त्यामुळे खानापुरात हिनपातळीवरचे व खालच्या दर्जाचे राजकारण करणाऱ्या लोकांना हा एक प्रकारचा धडा शिकवला असे म्हणावे लागेल. असे खानापुरातील प्रामाणिक नागरिक बोलत आहेत.
पी आय मंजुनाथ नाईक यांचे निलंबन रद्द करून त्यांना पूर्वीच्या ठिकाणीच म्हणजे खानापूर पोलीस स्थानकात नेमणूक करण्याचे आदेश देण्यात आले आहेत. “आपलं खानापूर” न्यूज पोर्टल ला एका विश्वसनीय सूत्रानुसार मिळालेल्या माहितीप्रमाणे, पी आय मंजुनाथ नाईक यांनी खानापूरला येण्यास नकार दिला असून, बेळगाव शहर पोलीस कमिशनरच्या अखत्यारित येणाऱ्या “मारीहाळ पोलीस” स्थानकात कार्यरत राहणार असल्याचे विश्वसनीय सूत्रानुसार समजते.
बेळगाव मध्ये हिवाळी अधिवेशन सुरू असताना राज्याचे माजी मंत्री व भाजपाचे ज्येष्ठ नेते सीटी रवी यांनी बालकल्याण व महिला विकास मंत्री लक्ष्मी हेब्बाळकर यांच्यावर अवमानकारक टिपणी केल्याच्या कारणावरून पोलिसांनी त्यांना ताब्यात घेऊन खानापूर पोलीस स्थानकात आणले होते. त्यावेळी त्यांना भेटण्यासाठी, माजी उपमुख्यमंत्री व विधानसभेचे विद्यमान विरोधी पक्ष नेते आर अशोक. विधान परिषदेचे विरोधी पक्षनेते. तसेच माजी मंत्री बसवनगौडा पाटील-यत्नाळ व खानापूरचे आमदार विठ्ठलराव हलगेकर, माजी आमदार संजय पाटील बेळगाव जिल्हा अध्यक्ष सुभाष पाटील भाजपाचे युवा नेते पंडित ओगले व राज्यातील भाजपाचे काही इतर आमदार सुद्धा, त्यांना भेटण्यासाठी पोलीस स्थानकात गेले होते. एका राज्याचा विरोधी पक्ष नेता त्या ठिकाणी गेल्यानंतर, सिटी रवी यांना भेटण्यास देणे हे पी आय मंजुनाथ नायक यांचे कर्तव्य होते. ते त्यांनी पार पाडले. परंतु त्यांना भेटायला दिलेला फोटो वायरल झाला आणि त्या फोटो वरून खानापुरातील काही राजकीय लोकांनी राजकारण सुरू केले. व राजकीय लोकांच्या महत्वकांक्षेसाठी त्यांचा राजकीय बळी घेण्यात आला असल्याचे बोलले जात होते. व याबाबत तशा प्रकारची खानापुरात चर्चाही सुरू होती. परंतु पी आय मंजुनाथ नाईक यांनी Karnataka Appellate Tribunal (KAT) या ठिकाणी दाद मागितली व त्यांना न्याय मिळाला आहे. मंजुनाथ नाईक यांचे निलंबन रद्द करण्यात आल्यामुळे खानापूर तालुक्यातील नागरिकांतून समाधान व्यक्त करण्यात येत आहे. तसेच एका प्रामाणिक अधिकाऱ्याला न्याय मिळाला असे नागरिकांतून बोलले जात आहे.
ಪಿಐ ಮಂಜುನಾಥ ನಾಯಕ್ ಅಮಾನತು ರದ್ದು ಮಾಡಿದ (ಕೆಎಟಿ), ಮೊದಲಿನ ಸ್ಥಳದಲ್ಲಿಯೇ ನೇಮಕ ಮಾಡಲು ಆದೇಶ! ಸಮಾಧಾನ ವ್ಯಕ್ತಪಡಿಸಿದ ನಾಗರಿಕರು!
ಖಾನಾಪುರ; ರಾಜಕೀಯ ಒತ್ತಡದಿಂದಾಗಿ ಖಾನಾಪುರದ ಆಗಿನ ಪೊಲೀಸ್ ಅಧಿಕಾರಿ ಮಂಜುನಾಥ ನಾಯಕ್ ಅವರನ್ನು ಡಿಸೆಂಬರ್ 21, 2024 ರಂದು ಅಮಾನತುಗೊಳಿಸಲಾಗಿತು. ಪ್ರಾಮಾಣಿಕ ಅಧಿಕಾರಿಯೊಬ್ಬರ ರಾಜಕೀಯ ಬಲಿಪಶುವಿನ ಕೃತ್ಯಕ್ಕೆ ಖಾನಾಪುರ ತಾಲೂಕಿನ ಜನರಲ್ಲಿ ರಾಜಕೀಯ ವ್ಯಕ್ತಿಗಳ ವಿರುದ್ಧ ಆಕ್ರೋಶವನ್ನು ಹುಟ್ಟುಹಾಕಿದರು. ಡಿಸೆಂಬರ್ 26 ರಂದು ವಿವಿಧ ಸಂಘಟನೆಗಳು ಮತ್ತು ನಾಗರಿಕರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಮಂಜುನಾಥ ನಾಯಕ್ ಅವರ ಅಮಾನತು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ, ಅಮಾನತು ಆದೇಶ ಹಿಂಪಡೆದಿರಲಿಲ್ಲ. ಈ ಸಂಬಂಧ ನ್ಯಾಯ ಕೋರಿ ಪಿಐ ಮಂಜುನಾಥ್ ನಾಯಕ್ ಅವರು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ)ಗೆ ಅರ್ಜಿ ಸಲ್ಲಿಸಿದ್ದರು. ಅವರ ವಾದ ಆಲಿಸಿದ ನಂತರ, ಮಂಜುನಾಥ ನಾಯಕ್ ಅವರ ಅಮಾನತು ಆದೇಶ ರದ್ದುಗೊಳಿಸಿ ಮೂರು ತಿಂಗಳೊಳಗೆ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಅದೇ ಸ್ಥಳಕ್ಕೆ (ಖಾನಾಪುರ) ಮರು ನಿಯೋಜಿಸಲು ಆದೇಶಿಸಲಾಗಿದೆ ಹಾಗೂ ಅವರಿಗೆ ಮೊದಲಿನಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತೆಯೂ ಆದೇಶಿಸಲಾಗಿದೆ. ಆದ್ದರಿಂದ, ಖಾನಾಪುರದಲ್ಲಿ ಕೀಳು ಮಟ್ಟದ ರಾಜಕೀಯದಲ್ಲಿ ತೊಡಗಿರುವ ಜನರಿಗೆ ಇದು ಪಾಠ ಕಲಿಸಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಪಿಐ ಮಂಜುನಾಥ್ ನಾಯಕ್ ಅವರ ಅಮಾನತು ರದ್ದುಗೊಳಿಸಿ ಅವರನ್ನು ಹಿಂದಿನ ಹುದ್ದೆಗೆ ಅಂದರೆ ಖಾನಾಪುರ ಪೊಲೀಸ್ ಠಾಣೆಗೆ ನಿಯೋಜಿಸಲು ಆದೇಶ ಹೊರಡಿಸಲಾಗಿದೆ. “ಆಪಲ ಖಾನಾಪುರ” ಸುದ್ದಿ ಪೋರ್ಟಲ್ಗೆ ವಿಶ್ವಾಸಾರ್ಹ ಮೂಲದಿಂದ ಬಂದ ಮಾಹಿತಿಯ ಪ್ರಕಾರ, ಪಿಐ ಮಂಜುನಾಥ್ ನಾಯಕ್ ಖಾನಾಪುರಕ್ಕೆ ಬರಲು ನಿರಾಕರಿಸಿದ್ದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುವ “ಮಾರಿಹಾಳ ಪೊಲೀಸ್” ಠಾಣೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇ ಘಟನೆ
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಮಕ್ಕಳ ಕಲ್ಯಾಣ ಮತ್ತು ಮಹಿಳಾ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ರಾಜ್ಯ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ಪೊಲೀಸರು ಬಂಧಿಸಿ ಖಾನಾಪುರ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅಲ್ಲಿದ್ದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ, ಮಾಜಿ ಸಚಿವ ಬಸವನಗೌಡ ಪಾಟೀಲ್-ಯತ್ನಾಳ್ ಮತ್ತು ಖಾನಾಪುರ ಶಾಸಕ ವಿಠ್ಠಲರಾವ್ ಹಲ್ಗೇಕರ್, ಮಾಜಿ ಶಾಸಕ ಸಂಜಯ್ ಪಾಟೀಲ್, ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಬಿಜೆಪಿ ಯುವ ನಾಯಕ ಪಂಡಿತ್ ಓಗಲೆ ಮತ್ತು ರಾಜ್ಯದ ಇತರ ಕೆಲವು ಬಿಜೆಪಿ ಶಾಸಕರು ಕೂಡ ಅವರನ್ನು ಭೇಟಿ ಮಾಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಒಂದು ರಾಜ್ಯದ ವಿರೋಧ ಪಕ್ಷದ ನಾಯಕರಿಗೆ ಸಿಟಿ ರವಿ ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದು ಪಿಐ ಮಂಜುನಾಥ್ ನಾಯಕ್ ಅವರ ಕರ್ತವ್ಯವಾಗಿತ್ತು. ಅವರು ತಮ್ಮ ಕರ್ತವ್ಯ ನಿರ್ವಹಿಸಿದರು. ಆದರೆ ಅವರನ್ನು ಭೇಟಿಯಾಗಲು ನೀಡಿದ ಫೋಟೋ ವೈರಲ್ ಆಗಿ ಖಾನಾಪುರದ ಕೆಲವು ರಾಜಕಾರಣಿಗಳು ಆ ಫೋಟೋವನ್ನು ಆಧರಿಸಿ ರಾಜಕೀಯ ಆಡಲು ಪ್ರಾರಂಭಿಸಿ ಹಾಗೂ ರಾಜಕೀಯ ವ್ಯಕ್ತಿಗಳ ಮಹತ್ವಾಕಾಂಕ್ಷೆಗಳಿಗಾಗಿ ಅವರನ್ನು ರಾಜಕೀಯ ಬಲಿಪಶುಗಳನ್ನಾಗಿ ಮಾಡಲಾಯಿತು. ಪಿಐ ಮಂಜುನಾಥ್ ಅವರ ಬಗ್ಗೆ ಖಾನಾಪುರದ ಜನರಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಪಿಐ ಮಂಜುನಾಥ್ ನಾಯಕ್ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ)ಗೆ ಮೇಲ್ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಹೋರಾಡಿ ನ್ಯಾಯ ಪಡೆದಿದ್ದಾರೆ. ಮಂಜುನಾಥ ನಾಯಕ್ ಅವರ ಅಮಾನತು ರದ್ದಾದ ಕಾರಣ ಖಾನಾಪುರ ತಾಲೂಕಿನ ನಾಗರಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾಗರಿಕರು ಕೂಡ ಪ್ರಾಮಾಣಿಕ ಅಧಿಕಾರಿಗೆ ನ್ಯಾಯ ಒದಗಿದೆ ಎಂದು ಮಾತನಿಡುತ್ತಿದ್ದಾರೆ.
