
अथणी येथे रस्त्याच्या मधोमध पोलिसांचा सैनिकावर हल्ला ; नंतर मागितली माफी…!
अथणी ; शुक्रवारी अथणी शहरात रजेवर घरी परतलेल्या एका सैनिकावर पोलिसांनी हल्ला केल्याची घटना घडली आहे.
अथणी तालुक्यातील शिरहट्टी गावातील सैनिक मल्लिकार्जुन पाटील, जे भारतीय सैन्यात सेकंड पॅरा रीजेंट कमांडो म्हणून कार्यरत आहेत, ते रजेवर घरी आले होते. ते शुक्रवारी कामासाठी अथणी येथे आले आणि त्याच्या भावासोबत हाल्या सर्कल येथे त्याच्या दुचाकीवर बसून उभा राहून काही वेळ घालवला. यावेळी घटनास्थळी पोहोचलेल्या पोलिस कॉन्स्टेबलने त्यांना केवळ शिवीगाळच केली नाही तर मारहाणही केली.
रस्त्याच्या मधोमध एका सैनिकाला चार पोलिस अधिकारी मारहाण करत असल्याचा व्हिडिओ सोशल मीडियावर व्हायरल झाला आहे. पोलिसांनी त्या सैनिकाला ज्या पद्धतीने वागवले त्यामुळे जनतेत संतापाची लाट उसळली आहे. तालुक्यातील विद्यमान आणि माजी सैनिकांनी या घटनेचा निषेध केला आहे.
सैनिकावर झालेल्या हल्ल्याबद्दल पोलिसांनी मागितली माफी..
या घटनेचा निषेध करत, तालुक्यातील माजी सैनिक संघटनेने अथणी पोलिस ठाण्यासमोर निदर्शने केली. त्यांनी त्याच्यावर अपशब्द वापरल्याचा आणि आदराने बोलण्यास सांगितल्याबद्दल, त्यांच्यावर हल्ला केल्याचा आरोप केला व निषेधाच्या घोषणा दिल्या. परिस्थिती कठीण होणार हे लक्षात येताच, अथणी पोलिसांनी माफी मागितली. नंतर, माजी सैनिक संघटनेच्या सदस्यांनी त्यांचा निषेध मागे घेतला.
ಅಥಣಿ : ನಡು ರಸ್ತೆಯಲ್ಲಿ ಪೊಲೀಸರಿಂದ ಯೋಧನ ಮೇಲೆ ಹಲ್ಲೆ ; ಕ್ಷಮೆಯಾಚನೆ…!
ಅಥಣಿ : ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ನಂತರ ಯೋಧನ ಘಟನೆ ಅಥಣಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಭಾರತೀಯ ಸೇನೆಯುಲ್ಲಿ ಸೆಕೆಂಡ್ ಪ್ಯಾರಾ ರೆಜೆಂಟ್ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ಶಿರಹಟ್ಟಿ ಗ್ರಾಮದ ಯೋಧ ಮಲ್ಲಿಕಾರ್ಜುನ ಪಾಟೀಲ್ ರಜೆ ಮೇಲೆ ಊರಿಗೆ ಬಂದಿದ್ದರು. ಶುಕ್ರವಾರ ಕೆಲಸದ ನಿಮಿತ್ತ ಅಥಣಿಗೆ ಬಂದಿದ್ದು ಕೆಲಹೊತ್ತು ಸಹೋದರನ ಜೊತೆ ಹಲ್ಯಾಳ ಸರ್ಕಲ್ ನಲ್ಲಿ ಬೈಕ್ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸ್ ಪೇದೆ ಅವಾಚ್ಯ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ್ದಾರೆ.
ನಡು ರಸ್ತೆಯಲ್ಲೇ ನಾಲ್ಕಾರು ಪೋಲೀಸರು ಯೋಧನ ಮೇಲೆ ಹಲ್ಲೆ ನಡೆಸಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೋಧನ ಜೊತೆ ಪೊಲೀಸರು ನಡೆದುಕೊಂಡ ರೀತಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ತಾಲೂಕಿನ ಹಾಲಿ ಹಾಗೂ ಮಾಜಿ ಸೈನಿಕರು ಘಟನೆಯನ್ನು ಖಂಡಿಸಿದ್ದಾರೆ.
ಕ್ಷಮೆ ಕೇಳಿದ ಪೊಲೀಸರು : ಯೋಧನ ಮೇಲಿನ ಹಲ್ಲೆ
ಘಟನೆಯನ್ನು ಖಂಡಿಸಿ ತಾಲೂಕಿನ ಮಾಜಿ ಸೈನಿಕರ ಸಂಘದ ವತಿಯಿಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮಾಡಲಾಯಿತು. ಗೌರವದಿಂದ ಮಾತನಾಡಿ ಎಂದು ಹೇಳಿದ್ದಕ್ಕೆ ಅವಾಚ್ಯವಾಗಿ ಮಾತನಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತ ಅಥಣಿ ಠಾಣೆ ಪೊಲೀಸರು ಕ್ಷಮೆಯಾಚನೆ ಮಾಡಿದರು. ನಂತರ ಮಾಜಿ ಸೈನಿಕರ ಸಂಘಟನೆ ಸದಸ್ಯರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
