
बालविवाह तक्रार : पतीला अटक.
खानापुर : अल्पवयीन मुलीशी लग्न केल्याच्या आरोपावरून पतीला अटक करून, बालविकास योजनेच्या अधिकाऱ्यांनी मुलीची घरातून सुटका करून, तिला जिल्हा बाल संरक्षण अधिकाऱ्यांच्या ताब्यात दिल्याची घटना, मंगळवारी 25 जून रोजी खानापूर तालुक्यातील हिरेमुनवळी येथे घडली आहे.
याबाबत, खानापूर तालुक्यातील हिरेमुनवळी गावातील एका 24 वर्षीय तरुणाला ताब्यात घेतले आहे. या तरुणाचे शेजारील गावातील 15 वर्ष 8 महिन्यांच्या मुलीशी, 26 मे रोजी लग्न झाले होते. विवाहानंतर अल्पवयीन मुलीच्या विवाहाबाबत महिला व बालविकास विभागात गुन्हा दाखल होताच, पोलिसांनी पतीला ताब्यात घेतले आहे. तसेच त्याच्या कुटुंबीयांना बेळगाव जिल्हा बालविवाह कार्यालयात आणून चौकशी केल्यानंतर पोलिस ठाण्यात तक्रार दाखल केली जाईल, असे खानापुर तालुका विकास अधिकारी चंद्रशेखर यांनी सांगितले आहे.
ಬಾಲ್ಯ ವಿವಾಹ ದೂರು: ಪತಿ ಬಂಧನ.
ಖಾನಾಪುರ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ ಪತಿಯನ್ನು ಬಂಧಿಸಿದ ಬಾಲವಿಕಾಸ ಯೋಜನೆ ಅಧಿಕಾರಿಗಳು ಬಾಲಕಿಯನ್ನು ಮನೆಯಿಂದ ಬಿಡುಗಡೆಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಖಾನಾಪುರ ತಾಲೂಕಿನ ಹಿರೇಮುನವಾಳಿಯಲ್ಲಿ ಮಂಗಳವಾರ ನಡೆದಿದೆ.
ಈ ಸಂಬಂಧ ಖಾನಾಪುರ ತಾಲೂಕಿನ ಹಿರೇಮುನವಾಳಿ ಗ್ರಾಮದ 24 ವರ್ಷದ ಯುವಕನನ್ನು ಬಂಧಿಸಲಾಗಿದೆ. ಯುವಕನಿಗೆ ಪಕ್ಕದ ಗ್ರಾಮದ 15 ವರ್ಷ 8 ತಿಂಗಳ ಬಾಲಕಿಯೊಂದಿಗೆ ಮೇ 26ರಂದು ವಿವಾಹವಾಗಿತ್ತು. ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ನಂತರ ಮದುವೆಯಾದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದ ತಕ್ಷಣ ಪೊಲೀಸರು ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಅವರ ಕುಟುಂಬ ಸದಸ್ಯರನ್ನು ಬೆಳಗಾವಿ ಜಿಲ್ಲಾ ಬಾಲ್ಯವಿವಾಹ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಖಾನಾಪುರ ತಾಲೂಕಾ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
